ಕೆನಡಾ: ಭೀಕರ ರಸ್ತೆ ಅಪಘಾತವೊಂದರಲ್ಲಿ ಭಾರತೀಯ ಮೂಲದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಕೆನಡಾದಲ್ಲಿ ನಡೆದಿದೆ. ಮೂವರು ವಿದ್ಯಾರ್ಥಿಗಳು ಪಂಜಾಬ್ನವರಾಗಿದ್ದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದರು ಎಂದು ತಿಳಿದು ಬಂದಿದೆ.
ಮೂವರು ವಿದ್ಯಾರ್ಥಿಗಳು 20 ವರ್ಷ ವಯಸ್ಸಿನವರಾಗಿದ್ದು, ಪಂಜಾಬ್ನ ಜಲಂದರ್ ಮತ್ತು ಗುರುದಾಸ್ ಪುರದ ನಿವಾಸಿಗಳಾದ ತನ್ವೀರ್ ಸಿಂಗ್, ಗುರ್ವಿಂದರ್ ಮತ್ತು ಹರ್ಪ್ರೀತ್ ಕೌರ್ ಎಂದು ತಿಳಿದು ಬಂದಿದೆ.
ಕೆನಡಾದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಇವರು ನಿನ್ನೆ ರಾತ್ರಿ ಇಲ್ಲಿನ ಒಂಟಾರಿಯೊದ ಆಯಿಲ್ ಹೆರಿಟೇಜ್ ರಸ್ತೆಯಲ್ಲಿ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಇವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಲಾಗುದು ಎಂದು ಒಂಟಾರಿಯೋ ಪೊಲೀಸರು ಟ್ವೀಟ್ ಮೂಲಕ ತಿಳಿಸಿದ್ದಾರೆ.