ವಾಷಿಂಗ್ಟನ್ (ಯು.ಎಸ್): ಯುಎಸ್ ಕ್ಯಾಪಿಟಲ್ಗೆ ನುಗ್ಗಿದವರು ಕೊಲೆಗಡುಕರು ಹಾಗೂ ದೇಶೀಯ ಭಯೋತ್ಪಾದಕರು. ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಯುಎಸ್ ಚುನಾಯಿತ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಭದ್ರತಾ ವೈಫಲ್ಯಗಳಿಗೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕಾಗಿದೆ ಮತ್ತು ಇಂಥ ಘಟನೆ ಮುಂದೆಂದೂ ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ಬೈಡನ್ ಹೇಳಿದ್ದಾರೆ.
"ದಾಳಿ ನಡೆಸಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು" ಎಂದು ಅವರು ಡೇಲಾವೇರ್ನ ವಿಲ್ಮಿಂಗ್ಟನ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕ್ಯಾಪಿಟಲ್ ಪೊಲೀಸ್ ಸಿಬ್ಬಂದಿ ಪ್ರತಿಭಟನಾಕಾರರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಫೊಟೋಗಳ ಕುರಿತು ತನಿಖೆ ನಡೆಸಲು ಅವರು ತಿಳಿಸಿದರು.