ವಾಷಿಂಗ್ಟನ್: ಅಮೆರಿಕದಲ್ಲಿ ದಿನವೊಂದಕ್ಕೆ ಹೊಸ ಲಕ್ಷ ಕೊರೊನಾ ಪಾಸಿಟಿವ್ ಕೇಸ್ಗಳು ವರದಿ ಆಗಬಹುದು ಎಂದು ಕೊರೊನಾ ಟಾಸ್ಕ್ ಫೋರ್ಸ್ ಸದಸ್ಯ ಡಾ. ಆ್ಯಂಟೋನಿ ಫೌಸಿ ಎಚ್ಚರಿಕೆ ನೀಡಿದ್ದಾರೆ.
ವಿಶ್ವದಲ್ಲಿ ಸದ್ಯ ಅಮೆರಿಕ ಕೊರೊನಾ ಹಾವಳಿಯಲ್ಲಿ ಟಾಪ್ನಲ್ಲಿದೆ, ಇಲ್ಲಿ ಸರಿ ಸುಮಾರು 26 ಲಕ್ಷಕ್ಕೂ(26,28,091) ಹೆಚ್ಚು ಕೊರೊನಾ ಪಾಸಿಟಿವ್ ಕೇಸ್ಗಳಿದ್ದರೆ, 1.27 ಲಕ್ಷ ಜನ ಕೋವಿಡ್- 19ಕ್ಕೆ ಬಲಿಯಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಡಾ. ಫೌಸಿ, ಪ್ರಸ್ತುತ ನಾವು ದಿನವೊಂದಕ್ಕೆ 40 ಸಾವಿರ ಹೊಸ ಕೇಸ್ಗಳನ್ನ ದೃಢಪಡಿಸುತ್ತಿದ್ದೇವೆ. ಈ ಸಂಖ್ಯೆ ಮುಂದೆ 1 ಲಕ್ಷಕ್ಕೆ ಏರಿಕೆಯಾಗಬಹುದು. ಇದು ಕಳವಳಕಾರಿಯಾದ ಸಂಗತಿ ಎಂದು ಡಾ. ಆ್ಯಂಟೋನಿ ತಿಳಿಸಿದ್ದಾರೆ.
ಸದ್ಯ ರೋಗ ಉಲ್ಬಣಗೊಳ್ಳುತ್ತಿದೆ. ನಮ್ಮ ಕ್ರಮಗಳ ಬಗ್ಗೆ ತಮಗೆ ತೃಪ್ತಿ ಇಲ್ಲ. ಈ ಸಾಂಕ್ರಾಮಿಕ ರೋಗ ತಡೆಯಲು ಇನ್ನೂ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಈಗಲೂ ನಾವು ಸಂಪೂರ್ಣವಾಗಿ ರೋಗವನ್ನ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.