ETV Bharat / international

ಅಫ್ಘಾನ ಶಾಂತಿಗೆ ಪಾಕ್​ನ ಉಗ್ರ ಸಂಘಟನೆಗಳಿಂದ ಅಡ್ಡಿ: ವಿಶ್ವಸಂಸ್ಥೆಗೆ ಭಾರತ ದೂರು

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಪ್ರತಿನಿಧಿ ಟಿ ಎಸ್ ತಿರುಮೂರ್ತಿ ಅವರು ಪಾಕಿಸ್ತಾನದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಫ್ಘಾನ್​ ಶಾಂತಿ ಸುವ್ಯವಸ್ಥೆಗೆ ಪಾಕಿಸ್ತಾನದ ಉಗ್ರ ಸಂಘಟನೆಗಳು ಅಡ್ಡಗಾಲು ಹಾಕುತ್ತಿವೆ ಎಂದಿದ್ದಾರೆ.

ಟಿಎಸ್ ತಿರುಮೂರ್ತಿ
TS Thirumurthy
author img

By

Published : Feb 11, 2021, 10:49 AM IST

ನ್ಯೂಯಾರ್ಕ್​: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಬುಧವಾರ (ಸ್ಥಳೀಯ ಸಮಯ) ಪಾಕಿಸ್ತಾನದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದು, ಅಲ್-ಖೈದಾ, ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವಂಟ್ ನಂತಹ ಭಯೋತ್ಪಾದಕ ಗುಂಪುಗಳ ಮೂಲಕ ಹಿಂಸಾತ್ಮಕ ದಾಳಿಗಳನ್ನು ನಡೆಸುವ ಮೂಲಕ ಇಸ್ಲಾಮಾಬಾದ್ ಅಫ್ಘಾನಿಸ್ತಾನದಲ್ಲಿ ಶಾಂತಿ ಪ್ರಕ್ರಿಯೆಗೆ ಅಡ್ಡಿಯಾಗುತ್ತಿದೆ ಎಂದು ಹೇಳಿದೆ.

ನೆರೆಯ ದೇಶದ ಖೋರಾಸಾನ್ ಪ್ರಾಂತ್ಯ (ಐಎಸ್ಐಎಲ್-ಕೆ) ಮತ್ತು ಭಯೋತ್ಪಾದಕ ಗುಂಪುಗಳು ಈಗ ಡುರಾಂಡ್ ರೇಖೆಯಾದ್ಯಂತ ಕುನಾರ್ ಮತ್ತು ನಂಗರ್ಹಾರ್ ಪ್ರಾಂತ್ಯಗಳಲ್ಲಿ ಸ್ಥಳಾಂತರಗೊಳ್ಳುತ್ತಿವೆ.

ನಿಷೇಧಿತ ಹಕ್ಕಾನಿ ನೆಟ್‌ವರ್ಕ್ ಮತ್ತು ಅದರ ಬೆಂಬಲಿಗರು ವಿಶೇಷವಾಗಿ ಪಾಕಿಸ್ತಾನದ ಅಧಿಕಾರಿಗಳು ಅಲ್-ಖೈದಾ, ಐಎಸ್ಐಎಲ್ ಕೆ, ತೆಹ್ರಿಕ್-ತಾಲಿಬಾನ್ ಪಾಕಿಸ್ತಾನ ಮುಂತಾದ ಪ್ರಮುಖ ಭಯೋತ್ಪಾದಕ ಸಂಘಟನೆಗಳೊಂದಿಗೆ ಕೆಲಸ ಮಾಡುತ್ತಿದೆ. ದಕ್ಷಿಣ ಏಷ್ಯಾದಲ್ಲಿ ಶಾಂತಿ ಅಡ್ಡಿಯಾಗುತ್ತಿದೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ಅವರು 'ಭಯೋತ್ಪಾದಕ ಕಾಯ್ದೆಗಳಿಂದ ಉಂಟಾದ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆಗಳು' ಕುರಿತು ಭದ್ರತಾ ಮಂಡಳಿಯ ಸಂಕ್ಷಿಪ್ತ ಭಾಷಣದಲ್ಲಿ ಪ್ರಸ್ತಾಪಿಸಿದರು.

ಓದಿ: ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದವರಿಗೆ ಸಿಗಲಿದೆ 5 ಲಕ್ಷ ರೂ.!

ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದ ಸುರಕ್ಷಿತ ತಾಣಗಳಲ್ಲಿ ಕುಳಿತು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತವೆ. ಅಫ್ಘಾನಿಸ್ತಾನದಲ್ಲಿ ಶಾಂತಿ ಪ್ರಕ್ರಿಯೆಯನ್ನು ಅಡ್ಡಿಪಡಿಸಿದ ಹಿಂಸಾತ್ಮಕ ದಾಳಿಯ ಮೂಲಕವೂ ಸಹ ಇದು ತಿಳಿದಿದೆ. ಭಯೋತ್ಪಾದಕ ಸಂಘಗನೆಗಳು ಅಫ್ಘಾನಿಸ್ತಾನಕ್ಕೆ ಸ್ಥಳಾಂತರಿಸುವುದಕ್ಕೂ ನಾವು ಸಾಕ್ಷಿಯಾಗಿದ್ದೇವೆ. ಕುನಾರ್ ಮತ್ತು ನಂಗರ್ಹಾರ್ ಪ್ರಾಂತ್ಯಗಳಲ್ಲಿ ಡುರಾಂಡ್​ಯಾದ್ಯಂತ ಹಬ್ಬಿದೆ ಎಂದು ಭಾರತೀಯ ರಾಯಭಾರಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.