ನ್ಯೂಯಾರ್ಕ್ (ಅಮೆರಿಕ): ತಾಲಿಬಾನ್, ಆಫ್ಘನ್ ಮಣ್ಣನ್ನು ಭಯೋತ್ಪಾದನೆಗೆ ಬಳಸದಂತೆ ಬದ್ಧತೆ ತೋರಿಸಬೇಕಿದ್ದು, ಅಂತಹ ವಾತಾವರಣ ಸಹ ಸೃಷ್ಟಿಯಾಗಬೇಕು ಎಂದು ಭಾರತ ಪ್ರತಿಪಾದಿಸಿದೆ.
-
UNSC resolution 2593, which reflects global sentiment, should continue to guide our approach.
— Dr. S. Jaishankar (@DrSJaishankar) September 22, 2021 " class="align-text-top noRightClick twitterSection" data="
India’s engagement will be driven by its historical friendship with the Afghan people.
">UNSC resolution 2593, which reflects global sentiment, should continue to guide our approach.
— Dr. S. Jaishankar (@DrSJaishankar) September 22, 2021
India’s engagement will be driven by its historical friendship with the Afghan people.UNSC resolution 2593, which reflects global sentiment, should continue to guide our approach.
— Dr. S. Jaishankar (@DrSJaishankar) September 22, 2021
India’s engagement will be driven by its historical friendship with the Afghan people.
ಜಿ -20 ವಿದೇಶಾಂಗ ಮಂತ್ರಿಗಳ ಸಭೆಯನ್ನುದ್ದೇಶಿಸಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮಾತನಾಡಿದರು. ಆಫ್ಘನ್ ಅನ್ನು ಯಾವುದೇ ದೇಶಗಳ ವಿರುದ್ಧವಾಗಿ ಬಳಸುವುದಿಲ್ಲ ಎಂದು ತಾಲಿಬಾನ್ ಹೇಳಿದೆ. ತಾಲಿಬಾನ್ ಈ ಹೇಳಿಕೆಯನ್ನು ಕಾರ್ಯಗತಗೊಳಿಸಬೇಕು. ಆಫ್ಘನ್ ಸಮಾಜದ ಎಲ್ಲಾ ವರ್ಗಗಳ ಪ್ರತಿನಿಧಿಯನ್ನು ಒಳಗೊಂಡ ವಿಶಾಲ ಅಂತರ್ಗತ ಪ್ರಕ್ರಿಯೆಯನ್ನು ಜಗತ್ತು ನಿರೀಕ್ಷಿಸುತ್ತದೆ ಎಂದು ಜೈ ಶಂಕರ್ ಹೇಳಿದ್ದಾರೆ.
ಜಾಗತಿಕ ಭಾವನೆ ಪ್ರತಿಬಿಂಬಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ರೆಸಲ್ಯೂಷನ್ 2593 ನಮ್ಮ ವಿಧಾನಕ್ಕೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಬೇಕು. ಭಾರತವು ಆಫ್ಘನ್ನೊಂದಿಗಿನ ಐತಿಹಾಸಿಕ ಸ್ನೇಹದಿಂದಲೇ ವ್ಯವಹಾರ ಮುಂದುವರಿಸುತ್ತದೆ ಎಂದು ಜೈ ಶಂಕರ್ ಟ್ವೀಟ್ ಮಾಡಿದ್ದಾರೆ.
ಆಗಸ್ಟ್ 15 ರಂದು ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಿದ್ದರಿಂದ ಅಲ್ಲಿನ ಚುನಾಯಿತ ಸರ್ಕಾರ ಪತನಗೊಂಡಿತು. ಇತ್ತೀಚೆಗಷ್ಟೇ ಅಲ್ಲಿ ತಾಲಿಬಾನ್ ನೇತೃತ್ವದ ಸರ್ಕಾರ ರಚನೆಯಾಯಿತು.
ಇದನ್ನೂ ಓದಿ: ಪಾಕ್ ಸರಣಿ ರದ್ದು ಮಾಡಿಕೊಂಡ ನ್ಯೂಜಿಲ್ಯಾಂಡ್: ಭಾರತದ ಮೇಲೆ ಗೂಬೆ ಕೂರಿಸಿದ ಪಾಕಿಸ್ತಾನ