ನ್ಯೂಯಾರ್ಕ್: ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಗುರುವಾರ ನವದೆಹಲಿಯ ಬಗ್ಗೆ ಸುಳ್ಳು ಆರೋಪಗಳನ್ನ ಮಾಡಿದ್ದಕ್ಕಾಗಿ ಪಾಕಿಸ್ತಾನವನ್ನು ದೂಷಿಸಿದರು ಮತ್ತು "ನಿಮ್ಮ ಮಾಲ್ವೇರ್ ಅನ್ನು ಇಲ್ಲಿ ತೆಗೆದುಕೊಳ್ಳುವವರು ಯಾರೂ ಇಲ್ಲ" ಎಂದು ತಂತ್ರಜ್ಞಾನದ ಭಾಷೆಯಲ್ಲೇ ತಿರುಗೇಟು ನೀಡಿದರು.
"ವಿಶ್ವಸಂಸ್ಥೆ ನ್ಯಾಯಸಮ್ಮತತೆಯ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ಅವರು ಭಯೋತ್ಪಾದಕ ಜಾಲಗಳ ಜಾಗತೀಕರಣ, ಹೊಸ ತಂತ್ರಜ್ಞಾನಗಳ ಅಳವಡಿಕೆ ಹಾಗೂ ಅವರ ವಿಧ್ವಂಸಕ ಕೃತ್ಯಗಳನ್ನ ಎಸಗಲು ಯಾವುದೇ ತ್ಯಾಗಕ್ಕೂ ಸಿದ್ಧವಾಗಿರುವ ಇಂತಹವರನ್ನ ಎದುರಿಸಲು ವಿಶ್ವದ ರಾಷ್ಟ್ರಗಳು ಹಾಗೂ ವಿಶ್ವಸಂಸ್ಥೆ ಇನ್ನೂ ಅಸಮರ್ಥವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ವಿಶ್ವ ಎದುರಿಸುವ ಸವಾಲುಗಳು ಹಾಗೂ ಆತಂಕಗಳ ಬಗ್ಗೆ ಅವರು ವಿಶ್ವಸಂಸ್ಥೆಯ ಸಭೆಯಲ್ಲಿ ಅಕ್ಬರುದ್ದೀನ್ ಈ ವಿಷಯ ಪ್ರಸ್ತಾಪಿಸಿದರು.
ಜಾಗತಿಕ ಶಾಂತಿ ಮತ್ತು ಸುರಕ್ಷತೆಗೆ ಭವಿಷ್ಯದಲ್ಲಿ ಬೆದರಿಕೆಗಳು ಇದೆ. ಇದಕ್ಕೆ ಪ್ರಮುಖ ಕಾರಣ ರಾಜಕೀಯ ಒತ್ತಡಗಳು, ಇವುಗಳನ್ನೇ ಬಳಸಿಕೊಂಡು ಉಗ್ರರು ತಮ್ಮ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಸಭೆಯಲ್ಲಿ ಉಗ್ರರಕೃತ್ಯ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿದರು.