ETV Bharat / international

2001 ರಿಂದ 2021: ಅಫ್ಘಾನ್‌ ರಣಾಂಗಣದಲ್ಲಿ ಮರಣಮೃದಂಗ: ಈ ಅಂಕಿಅಂಶಗಳನ್ನು ನೋಡಿ.. - ಈವರೆಗೆ ಅಫ್ಘಾನ್‌ನಲ್ಲಿ ಮೃತಪಟ್ಟ ಜನ

ಅಫ್ಘಾನಿಸ್ತಾನದಲ್ಲಿ ಕಳೆದ 20 ವರ್ಷಗಳಲ್ಲಿ ಅಮೆರಿಕದ ಸೇನೆಯನ್ನು ನಿಯೋಜಿಸಿದರೂ ಸಾಕಷ್ಟು ಸಾವು-ನೋವುಗಳು ಸಂಭವಿಸಿವೆ. ಬ್ರೌನ್ ವಿಶ್ವವಿದ್ಯಾಲಯದ ಸಂಶೋಧನೆ ಪ್ರಕಾರ, 2001 ರಿಂದ 3,500 ಕ್ಕೂ ಹೆಚ್ಚು ಅಫ್ಘಾನ್‌ ಹಾಗೂ ಯುಎಸ್‌ ಸೈನಿಕರು ಸಾವನ್ನಪ್ಪಿದ್ದಾರೆ. ಇದರಲ್ಲಿ ಮೂರನೇ ಎರಡರಷ್ಟು ಅಮೆರಿಕನ್ನರಿದ್ದು, 20,000 ಕ್ಕೂ ಹೆಚ್ಚು ಅಮೆರಿಕ ಸೈನಿಕರು ಗಾಯಗೊಂಡಿದ್ದಾರೆ. ಇದೇ ವೇಳೆ ಅಪಾರ ಪ್ರಮಾಣದಲ್ಲಿ ಅಮಾಯಕ ನಾಗರಿಕರು ಸಾವಿಗೀಡಾಗಿದ್ದಾರೆ. ಯುದ್ಧಭೂಮಿಯಲ್ಲಿ ಹತರಾದ ಉಗ್ರ ಸಂಖ್ಯೆಯೂ ದೊಡ್ಡದಿದೆ.

More than 3,500 coalition soldiers have died since 2001 in afghanistan
ಅಫ್ಘಾನಿಸ್ತಾನದಲ್ಲಿ 2001ರಿಂದ ಈವರೆಗೆ 3,500 ಯುಎಸ್‌,ಅಫ್ಘಾನ್‌ ಸೈನಿಕರು ಬಲಿ
author img

By

Published : Aug 17, 2021, 8:54 AM IST

Updated : Aug 17, 2021, 9:51 AM IST

ವಾಷಿಂಗ್ಟನ್‌: 20 ವರ್ಷಗಳ ಯುದ್ಧದ ನಂತರ ವಿದೇಶಿ ಸೇನಾ ಪಡೆಗಳು ಅಫ್ಘಾನಿಸ್ತಾನದಿಂದ ಹೊರಬಂದಿವೆ. ಅಮೆರಿಕ ಮತ್ತು ತಾಲಿಬಾನ್ ಉಗ್ರರ ನಡುವಿನ ಒಪ್ಪಂದದ ನಂತರ ಮೊದಲ ಬಾರಿಗೆ ಯುಎಸ್‌ ಸೇನೆಯನ್ನು ವಾಪಸ್‌ ಕರೆಸಿಕೊಳ್ಳಲಾಗಿದೆ. 2001ರಲ್ಲಿ ಅಫ್ಘಾನ್‌ನಲ್ಲಿ ಅಧಿಕಾರದಿಂದ ಕೆಳಗಿಳಿದ ತಾಲಿಬಾನ್‌ ಇದೀಗ ಮತ್ತೆ ಅಲ್ಲಿ ಪಾರುಪತ್ಯ ಮೆರೆಯುತ್ತಿದೆ. ಈ ಸುದೀರ್ಘ 2 ದಶಗಳ ಅವಧಿಯಲ್ಲಿ ಆ ದೇಶದಲ್ಲಿ ನಡೆದಿರುವ ಸಂಘರ್ಷದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದು, ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ.

Afghan residents who are homeless
ನಿರಾಶ್ರಿತರಾಗಿರುವ ಅಫ್ಘಾನ್‌ ನಿವಾಸಿಗಳು

ಎರಡು ದಶಗಳ ಹಿಂದಿನ ಘಟನೆಯತ್ತ ಒಮ್ಮೆ ಇಣುಕಿ ನೋಡಿದಾಗ, 2001ರಲ್ಲಿ (9/11) ಅಫ್ಘಾನಿಸ್ತಾನದಲ್ಲೇ ಕುಳಿತು ಅಲ್‌ ಖೈದಾ ಸಂಘಟನೆ ನ್ಯೂಯಾರ್ಕ್‌ನ ಬಹುಮಹಡಿ ಅವಳಿ ಕಟ್ಟಡದ (WTC) ಮೇಲೆ ಹಿಂದೆಂದೂ ಕಂಡರಿಯದ ರೀತಿಯಲ್ಲಿ ದಾಳಿ ನಡೆಸಿ ಸುಮಾರು 3 ಸಾವಿರ ಮಂದಿಯ ಸಾವಿಗೆ ಕಾರಣವಾಗಿತ್ತು. ಇಸ್ಲಾಮಿಕ್‌ ಉಗ್ರ ಸಂಘಟನೆಯ ನಾಯಕ ಒಸಮಾ ಬಿನ್‌ ಲಾಡೆನ್‌ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದ.

taliban
ತಾಲಿಬಾನ್‌ ಉಗ್ರರ ಅಟ್ಟಹಾಸ

1996ರಿಂದ ಅಫ್ಘಾನ್‌ನಲ್ಲಿ ಅಧಿಕಾರದಲ್ಲಿದ್ದ ತಾಲಿಬಾನ್‌ ಲಾಡೆನ್‌ಗೆ ಆಶ್ರಯ ನೀಡಿತ್ತು. ಭೀಕರ ಎರಡು ದಾಳಿಗಳಿಗೆ ಕಾರಣವಾಗಿದ್ದ ಬಿನ್‌ ಲಾಡೆನ್‌ನನ್ನು ತಮಗೆ ಒಪ್ಪಿಸುವಂತೆ ಅಮೆರಿಕ ಮಾಡಿದ್ದ ಮನವಿಗೆ ತಾಲಿಬಾನ್‌ ಸ್ಪಂದಿಸಿರಲಿಲ್ಲ. ಶೀಘ್ರವೇ ಕಾರ್ಯಪ್ರವೃತ್ತವಾದ ಯುಎಸ್‌ ಅಫ್ಘಾನ್‌ನಲ್ಲಿ ತಾಲಿಬಾನ್‌ ಅನ್ನು ಅಧಿಕಾರದಿಂದ ಕೆಳಗಿಳಿಸಿ ಪ್ರಜಾಪ್ರಭುತ್ವದ ಸರ್ಕಾರ ಅಧಿಕಾರಕ್ಕೆ ಬರಲು ನೆರವು ನೀಡಿತ್ತು. ಅಲ್ಲಿಂದ ಅಮೆರಿಕ ತನ್ನ ಸೇನೆಯನ್ನು ನಿಯೋಜಿಸಿದ್ದರೂ ಸಂಭವಿಸಿದ ಸಾವು ನೋವುಗಳು ಅಷ್ಟಿಷ್ಟಲ್ಲ.

army rescue
ಸೇನೆ ಕಾರ್ಯಾಚರಣೆ

ಇದನ್ನೂ ಓದಿ: ಅಫ್ಘನ್​ ಜನರ ಬೆಂಬಲಕ್ಕೆ​ ಬದ್ಧ: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ

3,500ಕ್ಕೂ ಹೆಚ್ಚು ಸೈನಿಕರು ಬಲಿ

2001 ರಿಂದ 3,500 ಕ್ಕೂ ಹೆಚ್ಚು ಅಫ್ಘಾನ್‌ ಹಾಗೂ ಯುಎಸ್‌ ಸೈನಿಕರು ಸಾವನ್ನಪ್ಪಿದ್ದಾರೆ. ಇದರಲ್ಲಿ ಮೂರನೇ ಎರಡರಷ್ಟು ಅಮೆರಿಕನ್ನರಿದ್ದು, 20,000 ಕ್ಕೂ ಹೆಚ್ಚು ಅಮೆರಿಕ ಸೈನಿಕರು ಗಾಯಗೊಂಡಿದ್ದಾರೆ. ವಿಶ್ವಸಂಸ್ಥೆಯ ಪ್ರಕಾರ, ಅಫ್ಘಾನಿಸ್ತಾನವು ವಿಶ್ವದ ಮೂರನೇ ಅತಿದೊಡ್ಡ ಸ್ಥಳಾಂತರಗೊಂಡ ಜನಸಂಖ್ಯೆಯನ್ನು ಹೊಂದಿದೆ.

2012 ರಿಂದ, ಸುಮಾರು ಐದು ಮಿಲಿಯನ್(50 ಲಕ್ಷ) ಜನರು ಇಲ್ಲಿಂದ ಪಲಾಯನ ಮಾಡಿದ್ದಾರೆ. ಇವರೆಲ್ಲಾ ಮತ್ತೆ ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗಲಿಲ್ಲ. ಅಫ್ಘಾನಿಸ್ತಾನದಲ್ಲಿ ಸ್ಥಳಾಂತರಗೊಂಡವರು ನೆರೆಯ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ.

ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಎರಡರಲ್ಲೂ ಮಿಲಿಟರಿ ಮತ್ತು ಪುನರ್ನಿರ್ಮಾಣ ನಿಧಿಗಳು ಸೇರಿದಂತೆ ಸಂಘರ್ಷದ ಮೇಲೆ ಯುಎಸ್ 2020 ರವರೆಗೆ 978 ಬಿಲಿಯನ್‌ ಡಾಲರ್‌ನಷ್ಟು ಖರ್ಚು ಮಾಡಿದೆ ಎಂದು ಬ್ರೌನ್ ವಿಶ್ವವಿದ್ಯಾನಿಲಯದ ಸಂಶೋಧನೆ ಹೇಳಿದೆ.

2001ರ ಅಕ್ಟೋಬರ್‌ನಿಂದ 2021ರ ಏಪ್ರಿಲ್‌ ವರೆಗೆ ಅಫ್ಘಾನಿಸ್ತಾನದಲ್ಲಿ ಈವರೆಗೆ ಮೃತಪಟ್ಟಿರುವ ಸೈನಿಕರು, ನಾಗರಿಕರ ಸಂಖ್ಯೆ

ಒಟ್ಟು ನಾಗರಿಕರು 71,344

  • ಅಫ್ಘಾನಿಸ್ತಾನ - 47,245
  • ಪಾಕಿಸ್ತಾನ - 24,099

ಒಟ್ಟು ಸೈನಿಕರು - 3,586

  • ಅಮೆರಿಕ ಸೈನಿಕರು - 2,442
  • ಅಫ್ಘಾನ್‌ ಸೈನಿಕರು - 1,144

ರಾಷ್ಟ್ರೀಯ ಸೈನಿಕರು ಮತ್ತು ಪೊಲೀಸರು - 78,314

  • ಅಫ್ಘಾನಿಸ್ತಾನ - 66,000 - 69,000
  • ಪಾಕಿಸ್ತಾನ - 9,314

ಹತ್ಯೆಯಾದ ತಾಲಿಗಳು - 84,191

  • ಅಫ್ಘಾನಿಸ್ತಾನಕ್ಕೆ ಸೇರಿದವರು - 51,191
  • ಪಾಕ್‌ ಸೇರಿದವರು - 33,000

ಪತ್ರಕರ್ತರು ಹಾಗೂ ಇತರರು

  • ಜರ್ನಲಿಸ್ಟ್‌ಗಳು ಮತ್ತು ಮಾಧ್ಯಮ ಕಾರ್ಯಕರ್ತರು - 136
  • ಅಮೆರಿಕಾ ಕಾಂಟ್ರಾಕ್ಟರ್‌ - 3,936
  • ಮಾನವೀಯ ನೆರವು ಕಾರ್ಯಕರ್ತರು - 549

Last Updated : Aug 17, 2021, 9:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.