ಕೇಪ್ ಕೆನವೆರಲ್(ಅಮೆರಿಕ): ಯುರೋಪ್ ಮತ್ತು ನಾಸಾದ ಸೋಲಾರ್ ಆರ್ಬಿಟರ್ ರಾಕೆಟ್ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ್ದು, ಅಭೂತಪೂರ್ವ ಕಾರ್ಯಾಚರಣೆ ನಡೆಸುವ ಮೂಲಕ ಸೂರ್ಯನ ಧ್ರುವಗಳ ಮೇಲಿನ ಮೊದಲ ಚಿತ್ರಗಳನ್ನು ಸೆರೆಹಿಡಿದಿದೆ.
1.5 ಬಿಲಿಯನ್ ವೆಚ್ಚದಲ್ಲಿ ನಿರ್ಮಸಿಲಾದ 'ಪಾರ್ಕರ್ ಸೋಲಾರ್ ಪ್ರೋಬ್' ರಾಕೆಟ್ ಒಂದೂವರೆ ವರ್ಷದ ಹಿಂದೆ ಉಡಾವಣೆ ಮಾಡಲಾಗಿತ್ತು. ಇದೀಗ ಹಿಂದಿಂದೆಗಿಂತಲೂ ಹತ್ತಿರವಾಗಿ ಸೂರ್ಯನ ಚಿತ್ರಗಳನ್ನು ಸೆರೆಹಿಡಿದಿದೆ.
ಪಾರ್ಕರ್ ಸೋಲಾರ್ ಪ್ರೋಬ್ ಆರ್ಬಿಟರ್ ಸೂರ್ಯನ ಕರೋನಾವನ್ನು ಬೇಧಿಸುವಷ್ಟು ಹತ್ತಿರ ಹೋಗಲು ಸಾಧ್ಯವಾಗದಿದ್ದರೂ ಸೂರ್ಯನ ಧೃವದ ಮೇಲಿನ ಚಿತ್ರವನ್ನು ಹಿಂದೆ ತೆಗೆಯಲು ಸಾಧ್ಯವಾಗಿರದ ಫೋಟೋವನ್ನು ಇದು ಕ್ಲಿಕ್ಕಿಸಿದೆ ಎಂದು ಗುಂಥರ್ ಹಸಿಂಗರ್, ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿಯ ವಿಜ್ಞಾನ ನಿರ್ದೇಶಕ ತಿಳಿಸಿದ್ದಾರೆ.
ಪಾರ್ಕರ್ ಸೋಲಾರ್ ಪ್ರೋಬ್ ಆರ್ಬಿಟರ್ನಲ್ಲಿ ಅಳವಡಿಸಿರುವ ಕ್ಯಾಮೆರಾದಲ್ಲಿ ಸೂರ್ಯನ ಮೇಲೆ ಉಂಟಾಗುವ ಶಬ್ದಗಳನ್ನು ಸಹ ಸಂಗ್ರಹಿಸಿದ್ದು, ಆ ಶಬ್ದಗಳು ಒಂದು ರೀತಿಯ ಆರ್ಕೆಸ್ಟ್ರಾ ರೀತಿಯಲ್ಲಿದೆ ಎಂದು ಗುಂಥರ್ ಹಸಿಂಗರ್ ಹೇಳಿದ್ದಾರೆ.
ಈ ಆರ್ಬಿಟರ್ನನ್ನು 9 ವಿಜ್ಞಾನ ಸಾಧನಗಳೊಂದಿಗೆ ನಾಸಾ 2018ರ ಆಗಸ್ಟ್ 12 ತಡರಾತ್ರಿ ಕೇಪ್ ಕೆನವೆರಲ್ನಿಂದ ಉಡಾವಣೆ ಮಾಡಲಾಗಿತ್ತು. ಉಡಾವಣೆಯಾದ ಒಂದು ಗಂಟೆಯೊಳಗೆ ಈ ಆಬಿರ್ಟರ್ ಉಪಗ್ರಹದಿಂದ ಬೇರ್ಪಟ್ಟಿತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.