ETV Bharat / international

ಡಾ.ಸಿಂಗ್ - ರಾಜನ್​ ಕಾಲದಲ್ಲೂ ಬ್ಯಾಂಕಿಂಗ್ ವಲಯ ಕೆಟ್ಟ ದಿನಗಳನ್ನ ಎದುರಿಸಿದೆ: ನಿರ್ಮಲಾ ಸೀತಾರಾಮನ್ ವಾದ - ರಘುರಾಮ್​ ರಾಜನ್

ರಘುರಾಮ್​ ರಾಜನ್ ಅವರು ಆರ್​ಬಿಐ ಗವರ್ನರ್​ ಆಗಿದ್ದಾಗ ಕೇವಲ ಫೋನ್​ ಕಾಲ್​ ಮಾಡಿದರೆ ಸಾಕು ಸಾಲ ನೀಡಲಾಗುತ್ತಿತ್ತು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನಿರ್ಮಲಾ ಸೀತಾರಾಮನ್
author img

By

Published : Oct 16, 2019, 6:34 PM IST

ನ್ಯೂಯಾರ್ಕ್​: ಮಾಜಿ ಪ್ರಧಾನಿ ಡಾ.ಮನಮೋಹನ್​ ಸಿಂಗ್ ಮತ್ತು ಆರ್​ಬಿಐ ಅಧ್ಯಕ್ಷರಾಗಿದ್ದ ರಘುರಾಮ್​ ರಾಜನ್​ ಅವರ ಕಾಲದಲ್ಲಿ ಸಾರ್ವಜನಿಕ ಬ್ಯಾಂಕಿಂಗ್​ ವ್ಯವಸ್ಥೆ ಕೆಟ್ಟ ದಿನಗಳನ್ನ ಅನುಭವಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಆರೋಪಿಸಿದ್ದಾರೆ.

ಅಮೆರಿಕದಲ್ಲಿರುವ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡುವಾಗ ಮಾತನಾಡಿದ ಅವರು, ಮಾಜಿ ಪ್ರಧಾನಿ ಮನಮೋಹನ್​ ಸಿಂಗ್ ಸಾರ್ವಜನಿಕ ಬ್ಯಾಂಕಿಂಗ್​ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ಅಸಹ್ಯ ದುರ್ವಾಸನೆಯನ್ನ ಬಿಟ್ಟು ಹೋಗಿದ್ದಾರೆ ಎಂದಿದ್ದಾರೆ.

ಇತ್ತೀಚೆಗೆ ಬ್ರೌನ್ ವಿಶ್ವವಿದ್ಯಾನಿಲಯದಲ್ಲಿ ಮೋದಿ ಸರ್ಕಾರ ಮೊದಲ ಅವಧಿಯ ಬಗ್ಗೆ ಮಾತನಾಡಿದ್ದ ರಘುರಾಮ್​ ರಾಜನ್, ನರೇಂದ್ರ ಮೋದಿ ಸರ್ಕಾರವು ಆರ್ಥಿಕತೆಯ ಬಗ್ಗೆ ಉತ್ತಮವಾಗಿ ಕಾರ್ಯನಿರ್ವಹಿಸಿಲ್ಲ ಎಂದು ನೇರವಾಗಿ ಆರೋಪ ಮಾಡಿದ್ದರು.

ಈ ಬಗ್ಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ರಾಜನ್​ ಅವರ ಬಗ್ಗೆ ಪ್ರತಿಕ್ರಿಯಿಸಲು ನಾನು ಒಂದು ನಿಮಿಷ ಸಮಯ ತೆಗೆದುಕೊಳ್ಳುತ್ತೇನೆ. ಏಕೆಂದರೆ ಅವರೊಬ್ಬ ಮಹಾನ್ ಮೇಧಾವಿ, ಭಾರತದ ಆರ್ಥಿಕತೆ ಕುಸಿಯುತಿದ್ದಂತ ಸಮಯದಲ್ಲಿ ಭಾರತದ ಸೆಂಟ್ರಲ್ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುವ ನಿರ್ಧಾರ ಮಾಡಿದವರು. ಆದ್ರೆ, ರಿಸರ್ವ್ ಬ್ಯಾಂಕ್​ನ ಗವರ್ನರ್ ಆಗಿ ರಾಜನ್ ಅವರು ಕಾರ್ಯ ನಿರ್ವಹಿಸುವ ಕಾಲದಿಂದ ನಾಯಕರ ಸ್ನೇಹಿತರು ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳ ದೂರವಾಣಿ ಕರೆಗಳ ಆಧಾರದ ಮೇಲೆ ಸಾಲಗಳನ್ನು ನೀಡಲಾಗುತ್ತಿತ್ತು. ಇಲ್ಲಿಯವರೆಗೂ ಆ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.

ಅಲ್ಲದೇ ಮನಮೋಹನ್​ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದರೆ ಭಾರತಕ್ಕೆ ಸ್ಥಿರವಾದ ದೃಷ್ಟಿ ಹೊಂದಿರುತ್ತಿದ್ದರು ಎಂದು ರಘುರಾಮ್​ ರಾಜನ್ ಒಪ್ಪುತ್ತಿದ್ದರು ಎಂದು ನನಗನ್ನಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.