ಟೆಕ್ಸಾಸ್: ಭವಿಷ್ಯದಲ್ಲಿ ಚಂದ್ರ ಮತ್ತು ಮಂಗಳ ಗ್ರಹಗಳಿಗೆ ಜನರನ್ನು ಕಳುಹಿಸುವ ಗುರಿಯನ್ನು ಹೊಂದಿರುವ ಸ್ಪೇಸ್‌ಎಕ್ಸ್‌ನ ಮಹತ್ವಾಕಾಂಕ್ಷೆಯ ಯೋಜನೆಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.
- " class="align-text-top noRightClick twitterSection" data="">
ಚಂದ್ರ ಮತ್ತು ಮಂಗಳ ಗ್ರಹಗಳಿಗೆ ಜನರನ್ನು ಕಳುಹಿಸುವ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಲಾದ ಬೃಹತ್ ರಾಕೆಟ್ ಸ್ಟಾರ್‌ಶಿಪ್ ಪ್ರಯೋಗವು ಮತ್ತೊಮ್ಮೆ ವಿಫಲವಾಗಿದೆ. ಇದು ನಾಲ್ಕನೇ ಬಾರಿಗೆ ಸಂಭವಿಸಿದೆ. ಟೆಕ್ಸಾಸ್‌ನ ಕಂಪನಿ ಉಡಾವಣಾ ಕೇಂದ್ರದಲ್ಲಿ ರಾಕೆಟ್‌ನ ಎಂಜಿನ್ ಶುಕ್ರವಾರ ಸ್ಫೋಟಗೊಂಡಿದೆ.
ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಸ್ಪೇಸ್‌ಎಕ್ಸ್ ಉಡಾವಣೆ ಇತ್ತೀಚೆಗೆ ಮುಂದೂಡಿತ್ತು. ಅಮೆರಿಕದ ಗಗನಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ಯುವ ಗುರಿ ಹೊಂದಿರುವ ಈ ಮಿಷನ್ ಉಡಾವಣೆಗೆ ಕೆಲವೇ ನಿಮಿಷಗಳ ಮೊದಲು ನಿಂತು ಹೋಯಿತು. ಪ್ರತಿಕೂಲ ಹವಾಮಾನದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನಾಸಾ ತಿಳಿಸಿದೆ.