ವಾಷಿಂಗ್ಟನ್ (ಅಮೆರಿಕ): ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಗಳಿಗಾಗಿ ಕಾಯುತ್ತಿದ್ದ ಜನರು ವಾಷಿಂಗ್ಟನ್ನ ಬಿಎಲ್ಎಂ ಪ್ಲಾಜಾದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರ ಜೊತೆ ಘರ್ಷಣೆಯನ್ನು ನಡೆಸಿದ್ದಾರೆ.
ಮತ ಎಣಿಕೆ ಸಮಯದಲ್ಲಿ ನೂರು ಪ್ರತಿಭಟನಾಕಾರರು ಚಿಹ್ನೆಗಳನ್ನು ಹೊತ್ತುಕೊಂಡರು, ನೃತ್ಯ ಮಾಡುತ್ತಾ ಘೋಷಣೆ ಕೂಗುತ್ತಿದ್ದರು. ಆಗ ಕೆಲವರನ್ನು ತಡೆಯಲು ಪೊಲೀಸ್ ಅಧಿಕಾರಿಗಳು ಸೈಕಲ್‌ಗಳನ್ನು ಬಳಸಿದ್ದಾರೆ.
ದೊಡ್ಡ ಕಪ್ಪು ಬ್ಯಾನರ್ನಲ್ಲಿ ಬಿಳಿ ಅಕ್ಷರಗಳೊಂದಿಗೆ, "ಟ್ರಂಪ್ ಅನ್ನು ತೆಗೆದುಹಾಕಿ", "ಟ್ರಂಪ್ ಸಾರ್ವಕಾಲಿಕ ಸುಳ್ಳುಗಾರ" ಎಂಬ ಬ್ಯಾನರ್ ಹಿಡಿದು ಪ್ರತಿಭಟನೆಗೆ ಮುಂದಾಗಿದ್ದರು. ಪೊಲೀಸರು, ಸೈಕಲ್‌ಗಳನ್ನು ರಸ್ತೆಯಲ್ಲಿ ಅಡ್ಡಲಾಗಿ ನಿಲ್ಲಿಸಿ ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವ ಗಲಾಟೆಯಾಗಿದೆ.
ಪ್ರತಿಭಟನನಾ ಸ್ಥಳದಿಂದ ಸ್ವಲ್ಪ ದೂರದಲ್ಲಿರುವ ಶ್ವೇತ ಭವನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣಾ ರಾತ್ರಿ ಕಳೆಯುತ್ತಿದ್ದಾರೆ.