ETV Bharat / international

ಅಂತಾರಾಷ್ಟ್ರೀಯ ಕಾನೂನು ಆಯೋಗಕ್ಕೆ ಪ್ರೊಫೆಸರ್ ಬಿಮಲ್ ಪಟೇಲ್​ ಆಯ್ಕೆ - ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ

ಪ್ರೊಫೆಸರ್ ಬಿಮಲ್ ಪಟೇಲ್ (Professor Bimal Patel) ಅವರು ವಿಶ್ವಸಂಸ್ಥೆಯ ಚುನಾವಣೆಯಲ್ಲಿ, 2023ರ ಜನವರಿ 1 ರಿಂದ ಐದು ವರ್ಷಗಳ ಅವಧಿಗೆ ಅಂತಾರಾರಾಷ್ಟ್ರೀಯ ಕಾನೂನು ಆಯೋಗಕ್ಕೆ ಆಯ್ಕೆಯಾಗಿದ್ದಾರೆ.

Professor Bimal Patel elected to International Law Commission for 5-yr term
ಪ್ರೊಫೆಸರ್ ಬಿಮಲ್ ಪಟೇಲ್ ಅಂತಾರಾಷ್ಟ್ರೀಯ ಕಾನೂನು ಆಯೋಗಕ್ಕೆ ಆಯ್ಕೆ
author img

By

Published : Nov 13, 2021, 7:13 AM IST

ವಿಶ್ವಸಂಸ್ಥೆ​: ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಉಪಕುಲಪತಿ ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ ಸದಸ್ಯ ಪ್ರೊಫೆಸರ್ ಬಿಮಲ್ ಪಟೇಲ್(Professor Bimal Patel) ಅವರು ವಿಶ್ವಸಂಸ್ಥೆಯ ಚುನಾವಣೆಯಲ್ಲಿ(election at the United Nations), 2023ರ ಜನವರಿ 1 ರಿಂದ ಐದು ವರ್ಷಗಳ ಅವಧಿಗೆ ಅಂತಾರಾರಾಷ್ಟ್ರೀಯ ಕಾನೂನು ಆಯೋಗಕ್ಕೆ( International Law Commission) ಆಯ್ಕೆಯಾಗಿದ್ದಾರೆ.

ಚುನಾವಣೆಯಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಕಾನೂನು ಆಯೋಗಕ್ಕೆ ಆಯ್ಕೆಯಾದ ಪ್ರೊ. ಬಿಮಲ್ ಪಟೇಲ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ವಿಶ್ವಸಂಸ್ಥೆ ರಾಯಭಾರಿ, ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್ ತಿರುಮೂರ್ತಿ(UN Ambassador T S Tirumurti) ಟ್ವೀಟ್ ಮಾಡಿದ್ದಾರೆ. ಭಾರತಕ್ಕೆ ಅಗಾಧ ಬೆಂಬಲ ನೀಡಿದ ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

ವಿಶ್ವಸಂಸ್ಥೆ​ ಸಾಮಾನ್ಯ ಸಭೆಯಲ್ಲಿ( UN General Assembly)ಯಲ್ಲಿ ಹಾಜರಿದ್ದ 192 ಸದಸ್ಯರಲ್ಲಿ ಬಿಮಲ್ ಪಟೇಲ್ ಅವರಿಗೆ 163 ಸದಸ್ಯರು ತಮ್ಮ ಮತ ಚಲಾಯಿಸಿ, ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚೀನಾ, ದಕ್ಷಿಣ ಕೊರಿಯಾ ಮತ್ತು ಜಪಾನ್‌ನ ಅಭ್ಯರ್ಥಿಗಳನ್ನು ಒಳಗೊಂಡಿದ್ದ ಏಷ್ಯಾ-ಪೆಸಿಫಿಕ್ ಗುಂಪಿನಲ್ಲಿ ಪಟೇಲ್​ ಅಗ್ರಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: ಕೇವಲ 21 ವಾರಕ್ಕೆ ಜನನ.. ವಿಶ್ವದ ಅತ್ಯಂತ ಅಕಾಲಿಕ ಶಿಶು ಎಂಬ ಹೆಗ್ಗಳಿಕೆ!

ಏಷ್ಯಾ-ಪೆಸಿಫಿಕ್ ಗುಂಪಿನಲ್ಲಿ 8 ಸ್ಥಾನಗಳಿಗೆ 11 ಪ್ರಬಲ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಚುನಾವಣೆ ತೀವ್ರ ಪೈಪೋಟಿಯಿಂದ ಕೂಡಿತ್ತು. ಇದರಲ್ಲಿ ಪ್ರೊಫೆಸರ್ ಬಿಮಲ್ ಪಟೇಲ್ ಹೆಚ್ಚಿನ ಮತಗಳನ್ನು ಗಳಿಸುವ ಮೂಲಕ ಅಂತಾರಾಷ್ಟ್ರೀಯ ನ್ಯಾಯಾಂಗ ಸಮತಿಗೆ ಆಯ್ಕೆ ಆಗಿದ್ದಾರೆ.

ಶುಕ್ರವಾರ ಚುನಾವಣಾ ಫಲಿತಾಂಶ ಪ್ರಕಟವಾದ ಕೂಡಲೇ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಹರ್ಷ ವ್ಯಕ್ತಪಡಿಸಿ, ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.