ಜಾಗತಿಕ ಫ್ಯಾಷನ್ ಐಕಾನ್ ಎಂದು ಗುರಿತಿಸಿಕೊಂಡಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಟ್ರೆಂಡಿಂಗ್ ಆಗಿದ್ದಾರೆ.
ಗುಲಾಬಿಗಳನ್ನು ಒಳಗೊಂಡಿರುವ ರತ್ನಖಚಿತ ಕೆಂಪು ಜಾಕೆಟ್ನಲ್ಲಿ ಕಾಳಿಕಾ ಮಾತೆ ಕಾಣಿಸುವ ಅವರ ಹಳೆಯ ಫೋಟೋವೊಂದು ಈಗ ಭಾರಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ವಿಭಿನ್ನ ಹಾಗೂ ಆಕರ್ಷಕ ಬಟ್ಟೆ ತೊಡುವ ನಟಿ ಪ್ರಿಯಾಂಕಾ ಚೋಪ್ರಾ ಟ್ರೆಂಡಿಂಗ್ ಸೃಷ್ಟಿಸುವಲ್ಲಿ ಯಾವತ್ತು ಹಿಂದೆ ಬಿದ್ದವರಲ್ಲ. ಇಂತಹದ್ದೊಂದು ಬಟ್ಟೆ ತೊಟ್ಟು ಪತಿ ನಿಕ್ ಜೋನಸ್ ಜೊತೆ ತಿರುಗಾಡಲು ಬಂದಾಗ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.
- " class="align-text-top noRightClick twitterSection" data="
">
ಪತಿಯೊಂದಿಗೆ ಜಾಲಿ ಮೂಡ್ನಲ್ಲಿರುವಾಗ ಅವರ ಹಿಂದಿನಿಂದ ಫೋಟೋ ಕ್ಲಿಕ್ಕಿಸಲಾಗಿದ್ದು ಈ ದೇವಿಯ ಅವತಾರ ಕಾಣಿಸಿಕೊಂಡಿದೆ.
ದುರ್ಗಿಯ ಅವತಾರವುಳ್ಳ ರೆಡ್ ಜಾಕೆಟ್ ಇದಾಗಿದ್ದು ಅವರ ಬೆನ್ನ ಮೇಲೆ ಕಾಳಿ ದೇವಿಯ ಮುಖದ ವರ್ಣಚಿತ್ರವಿದೆ. ಅಂತಹದ್ದೊಂದು ವಿಶಿಷ್ಟ ಜಾಕೆಟ್ ಧರಿಸಿದ್ದ ಫೋಟೋ ಈಗ ವೈರಲ್ ಆಗಿದೆ. ವಿದೇಶಿ ನೆಲದಲ್ಲಿ ಭಾರತೀಯ ದೇವರುಗಳ ಆಕೃತಿ ಇರುವ ಬಟ್ಟೆ ತೊಟ್ಟಿದ್ದಕ್ಕೆ ಕೆಲವರು ಟೀಕಿಸಿದ್ದಾರೆ.
ಈ ಬಗ್ಗೆ ಪರ ಮತ್ತು ವಿರೋಧದ ಮಾತುಗಳು ಸಹ ಕೇಳಿ ಬರುತ್ತಿವೆ. ಹಾಲಿವುಡ್ ತಾರೆಯರು ಸೇರಿದಂತೆ ಹಲವು ಪಾಪ್ ಗಾಯಕರು ಹಾಗೂ ನಟರು ಇದಕ್ಕೂ ಮೊದಲು ಇಂತಹ ವಿಭಿನ್ನ ಹಾಗೂ ಆಕರ್ಷಕ ಬಟ್ಟೆ ತೊಟ್ಟಿದ್ದು ಇಲ್ಲಿ ನೆನಪಿಸಿಕೊಳ್ಳಬಹುದು.