ETV Bharat / international

ನಮೋಗೆ ಅದ್ಧೂರಿ ಸ್ವಾಗತ ಕೋರಿದ ಬೈಡನ್: ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆಯಲ್ಲಿ ಭಾಗಿ

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶ್ವೇತ ಭವನದಲ್ಲಿ ಜೋ ಬೈಡನ್​ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆಯಲ್ಲಿ ಭಾಗಿಯಾದರು.

Prime Minister Narendra Modi
Prime Minister Narendra Modi
author img

By

Published : Sep 24, 2021, 10:23 PM IST

ವಾಷಿಂಗ್ಟನ್​(ಅಮೆರಿಕ): ಅಮೆರಿಕ ಪ್ರವಾಸ ಕೈಗೊಂಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ವಾಷಿಂಗ್ಟನ್​ನ ಶ್ವೇತ ಭವನದಲ್ಲಿ ಅಧ್ಯಕ್ಷ ಜೋ ಬೈಡನ್​ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ನಮೋಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.

ಶ್ವೇತಭವನದಲ್ಲಿ ನಮೋಗೆ ಅದ್ಧೂರಿ ಸ್ವಾಗತ

ಪ್ರಧಾನಿ ಮೋದಿ ಶ್ವೇತ ಭವನಕ್ಕೆ ತಲುಪುತ್ತಿದ್ದಂತೆ ಅವರನ್ನು ಆಲಿಂಗನ ಮಾಡಿಕೊಂಡ ಬೈಡನ್​​ ಅದ್ಧೂರಿಯಾಗಿ ಸ್ವಾಗತ ಕೋರಿದರು. ಈ ವೇಳೆ ಉಭಯ ನಾಯಕರು ಉಭಯ ಕುಶಲೋಪರಿ ವಿಚಾರಿಸಿದರು. ಬರಾಕ್​ ಒಬಾಮ ಹಾಗೂ ಡೊನಾಲ್ಡ್​ ಟ್ರಂಪ್​ ಬಳಿಕ ಇದೀಗ ನೂತನ ಅಮೆರಿಕ ಅಧ್ಯಕ್ಷ ಜೋ ಬೈಡನ್​ ಅವರೊಂದಿಗೆ ನಮೋ ಮಹತ್ವದ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾಗಿಯಾದರು.

Prime Minister Narendra Modi
ಬೈಡನ್​ ಜೊತೆ ನಮೋ ದ್ವಿಪಕ್ಷೀಯ ಮಾತುಕತೆ

ನಮೋ-ಬೈಡನ್​ ಮಾತುಕತೆ ವೇಳೆ ಭಾರತ-ಅಮೆರಿಕ ನಡುವಿನ ವ್ಯಾಪಾರ, ದ್ವಿಪಕ್ಷೀಯ ಸಂಬಂಧ, ಅಫ್ಘಾನಿಸ್ತಾನದಲ್ಲಿನ ಬಿಕ್ಕಟ್ಟು ಸೇರಿದಂತೆ ಅನೇಕ ವಿಷಯಗಳು ಚರ್ಚೆಯಾಗಿದ್ದು, ಬರುವ ದಿನಗಳಲ್ಲಿ ಭಾರತ-ಅಮೆರಿಕ ನಡುವಿನ ಸಂಬಂಧ ಮತ್ತಷ್ಟು ಪ್ರಾಮುಖ್ಯತೆ ಪಡೆದುಕೊಳ್ಳಲಿದೆ ಎಂದು ಬೈಡನ್​ ತಿಳಿಸಿದ್ದಾರೆ.

ಉಭಯ ನಾಯಕರ ಮಾತುಕತೆ ಬಹಳಷ್ಟು ಮಹತ್ವದ್ದು, ಈ ಶತಮಾನದ ಮೂರನೇ ದಶಕದ ಆರಂಭದಲ್ಲಿ ನಾವು ಮಾತುಕತೆ ನಡೆಸಿದ್ದೇವೆ ಎಂದು ನಮೋ ಹೇಳಿದ್ದು, ಬೈಡನ್ ನಾಯಕತ್ವ ಖಂಡಿತವಾಗಿ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ನಮೋ ತಿಳಿಸಿದ್ದಾರೆ.

  • #WATCH | Washington DC: PM Narendra Modi leaves from the White House after his bilateral meeting with US President Joe Biden.

    He will attend the first in-person Quad Leaders' Summit later today. pic.twitter.com/XlNaieG7LC

    — ANI (@ANI) September 24, 2021 " class="align-text-top noRightClick twitterSection" data=" ">

ಇದನ್ನೂ ಓದಿ: Modi US visit: ಕಮಲಾ ಹ್ಯಾರಿಸ್​ಗೆ ತನ್ನ ಅಜ್ಜನ ವಸ್ತುಗಳನ್ನು ಗಿಫ್ಟ್​ ಕೊಟ್ಟ ಪ್ರಧಾನಿ ಮೋದಿ

ಸದ್ಯದ ಸ್ಥಿತಿಯಲ್ಲಿ ತಂತ್ರಜ್ಞಾನ ಎಲ್ಲದ್ದಕ್ಕೂ ಪ್ರೇರಕವಾಗಿದ್ದು, ಜಾಗತಿಕ ಒಳಿತಿಗಾಗಿ ಇದನ್ನು ಬಳಸಿಕೊಳ್ಳಬೇಕು ಎಂದು ನಮೋ ಇದೇ ವೇಳೆ ತಿಳಿಸಿದ್ದಾರೆ.

  • This morning I’m hosting Indian Prime Minister Narendra Modi at the White House for a bilateral meeting. I look forward to strengthening the deep ties between our two nations, working to uphold a free and open Indo-Pacific, and tackling everything from COVID-19 to climate change.

    — President Biden (@POTUS) September 24, 2021 " class="align-text-top noRightClick twitterSection" data=" ">

ನಮೋ ಭೇಟಿಗೂ ಮುಂಚಿತವಾಗಿ ಟ್ವೀಟ್ ಮಾಡಿದ್ದ ಬೈಡನ್​, ಇಂದು ನಾನು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಶ್ವೇತ ಭವನದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದೇನೆ. ಈ ವೇಳೆ ಭಾರತ-ಅಮೆರಿಕ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಳಿಸುಲು ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದರು.

ಅಮೆರಿಕದ ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮಾ, ಡೊನಾಲ್ಡ್​ ಟ್ರಂಪ್ ಬಳಿಕ ಇದೀಗ ಪ್ರಧಾನಿ ಮೋದಿ ಜೋ ಬೈಡನ್​ ಅವರನ್ನ ಭೇಟಿ ಮಾಡಿದ್ದು, ಅವರೊಂದಿಗೆ ಮಹತ್ವದ ಮಾತುಕತೆಯಲ್ಲಿ ಭಾಗಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.