ವಾಷಿಂಗ್ಟನ್ ಡಿಸಿ (ಅಮೆರಿಕ): ವಿಶ್ವದ ದೊಡ್ಡಣ್ಣ ಅಮೆರಿಕ ಹಾಗೂ ಚೀನಾ (America-China) ನಡುವಿನ ಮುಸುಕಿನ ಗುದ್ದಾಟಕ್ಕೆ ತೆರೆ ಎಳೆಯಲು ಉಭಯ ನಾಯಕರು ಸಿದ್ಧರಾಗಿದ್ದಾರೆ. ಕೆಲ ವರ್ಷದಿಂದಲೂ ಉಭಯ ರಾಷ್ಟ್ರಗಳ ನಡುವೆ ಮೇಲ್ನೋಟಕಷ್ಟೇ ಉತ್ತಮ ಸಂಬಂಧ ಇರುವಂತೆ ಕಂಡುಬಂದರೂ ವಾಸ್ತವಾಂಶ ಬೇರೆಯದ್ದೇ ಆಗಿತ್ತು.
ಈ ಬೆಳವಣಿಗೆಗಳ ನಡುವೆ ಅಮೆರಿಕ ಅಧ್ಯಕ್ಷ ಜೋ ಬೈಡನ್ (America President Joe Biden) ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ (China President Xi Jinping) ನಡುವೆ ವರ್ಚುಯಲ್ ಸಭೆ ನಿಗದಿಯಾಗಿದೆ ಎಂದು ವೈಟ್ ಹೌಸ್ (White House) ತಿಳಿಸಿದೆ. ಸೋಮವಾರ (ನ.15ರಂದು) ಸಭೆ ನಿಗದಿಯಾಗಿದೆ ಎಂದು ತಿಳಿಸಲಾಗಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಈ ಕುರಿತಂತೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ (Press Secretary of White House) ಜೆನ್ ಪ್ಸಾಕಿ, ಭಾನುವಾರ ಉಭಯ ನಾಯಕರ ಸಭೆಗೆ ಸಮಯ ನಿಗದಿಯಾಗಿದೆ ಎಂದಿದ್ದಾರೆ.
ಈ ವೇಳೆ ಭಾರತ-ಚೀನಾ ಗಡಿ ಸಮಸ್ಯೆ (India-China Boarder Issue) ಕುರಿತು ಚರ್ಚೆಯಾಗಲಿದ್ಯಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತ ಈ ಮಾತುಕತೆಯು ಭದ್ರತೆ ಮತ್ತು ಗಡಿ ಕುರಿತಾಗಿರುತ್ತದೆ. ಈ ವಿಚಾರಗಳ ಬಗ್ಗೆಯೂ ನಮಗೆ ಕಾಳಜಿ ಇದೆ. ನಾವು ಒಟ್ಟಾಗಿಯೇ ಕಾರ್ಯ ಮಾಡಬೇಕಿದೆ ಎಂದಿದ್ದಾರೆ.
ಇದನ್ನೂ ಓದಿ: COP-26 Summit: ನಿಗದಿಗಿಂತ ಹೆಚ್ಚು ಸಮಯ ಚರ್ಚೆಯಲ್ಲಿ ಮುಳುಗಿದ ಸದಸ್ಯರು