ಟ್ರಕ್ರಿ (ಅಮೆರಿಕ): ಲೇಕ್ ತಾಹೋ ಪ್ರದೇಶದ ಗಾಲ್ಫ್ ಕೋರ್ಸ್ ಬಳಿ ಡಬಲ್ ಇಂಜಿನ್ ಜೆಟ್ ವಿಮಾನವು ಅಪಘಾತ ಸಂಭವಿಸಿದ್ದು, ಆರು ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೊಂಬಾರ್ಡಿಯರ್ ಸಿಎಲ್-600 ಎಂಬ ವಿಮಾನವು ಅರಣ್ಯವೊಂದರಲ್ಲಿ ಅಪಘಾತಕ್ಕೀಡಾಗಿದೆ.
ಈ ವಿಮಾನವು ಇಡಾಹೊದ ಕೊಯೂರ್ ಡಿ ಅಲೀನ್ನಿಂದ ಹೊರಟಿತ್ತು. ಟ್ರಕೀ-ತಾಹೋ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಸಲು ಪೈಲಟ್ ಯತ್ನಿಸಿದ್ರೂ, ಸಾಧ್ಯವಾಗದೇ ದುರಂತ ಸಂಭವಿಸಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ.
ಇದನ್ನೂ ಓದಿ: ಭಾರತ - ಅಮೆರಿಕ ಸಂಬಂಧ ವೃದ್ಧಿಸುವುದು ನಮ್ಮ ರಾಷ್ಟ್ರೀಯ ಹಿತಾಸಕ್ತಿ: ಡೊನಾಲ್ಡ್ ಲು
ಘಟನೆಗೆ ಕಾರಣ ಏನೆಂಬುದು ಈವರೆಗೆ ತಿಳಿದು ಬಂದಿಲ್ಲ, ಅಪಘಾತ ಬಗ್ಗೆ ತನಿಖೆ ನಡೆಸಲು ಇಬ್ಬರು ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.