ETV Bharat / international

ಇಂದು ಮೋದಿ-ಟ್ರಂಪ್ ಭೇಟಿ: ಮಾತುಕತೆಯ ಅಂಶಗಳೇನು? - ಮೋದಿ-ಟ್ರಂಪ್ ಭೇಟಿ

ಜಗತ್ತಿನ ಎರಡು ಅತಿದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರಗಳ ದಿಗ್ಗಜ ನಾಯಕರು ಎರಡು ದಿನಗಳ ಅಂತರದಲ್ಲಿ ಪರಸ್ಪರ ಎರಡನೇ ಬಾರಿಗೆ ಭೇಟಿಯಾಗುತ್ತಿದ್ದಾರೆ.

ಮೋದಿ-ಟ್ರಂಪ್ ಭೇಟಿ
author img

By

Published : Sep 24, 2019, 9:52 AM IST

ನ್ಯೂಯಾರ್ಕ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಬಿಡುವಿಲ್ಲದೆ ವಿವಿಧ ಸಭೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಸೋಮವಾರ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಪಾಲ್ಗೊಂಡ ಅವರು ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರನ್ನು ಭೇಟಿ ಮಾಡಲಿದ್ದಾರೆ.

ಶೃಂಗಸಭೆಗೆ ಟ್ರಂಪ್​ ದಿಢೀರ್​ ಭೇಟಿ... ಮೋದಿ ಭಾಷಣ ಆಲಿಸಿದ ಅಮೆರಿಕ ಅಧ್ಯಕ್ಷ!

ಇಂದು ಮಧ್ಯಾಹ್ನ 12.15(ಭಾರತೀಯ ಕಾಲಮಾನ) ಮೋದಿ, ಟ್ರಂಪ್​ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ವಿಶೇಷವೆಂದರೆ ಎರಡು ದಿನದ ಅಂತರದಲ್ಲಿ ಉಭಯ ನಾಯಕರ ಎರಡನೇ ಭೇಟಿ ಇದಾಗಿದೆ. ಭಾನುವಾರದಂದು 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಇಬ್ಬರೂ ನಾಯಕರು ಒಟ್ಟಾಗಿ ಕಾಣಿಸಿಕೊಂಡಿದ್ದರು.
ಕಾಶ್ಮೀರ ಪ್ರಸ್ತಾಪ ಇಲ್ಲ:

ಇಂದಿನ ಭೇಟಿಯಲ್ಲಿ ಕಾಶ್ಮೀರ ವಿಚಾರ ಚರ್ಚೆಗೆ ಬರುವ ಸಾಧ್ಯತೆ ಕಡಿಮೆ ಎನ್ನಲಾಗಿದ್ದು, ಸೌಹಾರ್ದಯುತ ಭೇಟಿ ಇದಾಗಿರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಮೆರಿಕ ಪ್ರವಾಸದಲ್ಲಿ ಮೋದಿ 20 ಜಾಗತಿಕ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ವಿಶೇಷವೆಂದರೆ, ಮೋದಿ-ಇಮ್ರಾನ್ ಖಾನ್ ಭೇಟಿ ಈ ಪ್ರವಾಸದ ಪಟ್ಟಿಯಲ್ಲಿಲ್ಲ.

ಎರಡೂ ದೇಶ ಒಪ್ಪಿದ್ರೆ ಮಾತ್ರ ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆಗೆ ಸಿದ್ಧ: ಟ್ರಂಪ್​

ಸೋಮವಾರ ಟ್ರಂಪ್ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾತುಕತೆ ನಡೆಸಿದ್ದರು. ಈ ವೇಳೆ ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಉಭಯ ದೇಶಗಳು ಒಪ್ಪಿದ್ದಲ್ಲಿ ಮಾತ್ರ ಮಧ್ಯಸ್ಥಿಕೆಗೆ ಸಿದ್ಧ ಎಂದಿದ್ದರು.

Intro:Body:

ಇಂದು ಮೋದಿ-ಟ್ರಂಪ್ ಭೇಟಿ... ಮಾತುಕತೆಯ ಅಂಶಗಳೇನು..?

ನ್ಯೂಯಾರ್ಕ್: ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಬಿಡುವಿಲ್ಲದೆ ವಿವಿಧ ಸಭೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಸೋಮವಾರ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಪಾಲ್ಗೊಂಡ ಮೋದಿ ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರನ್ನು ಭೇಟಿ ಮಾಡಲಿದ್ದಾರೆ.

ಇಂದು ಮಧ್ಯಾಹ್ನ 12.15(ಭಾರತೀಯ ಕಾಲಮಾನ) ಮೋದಿ ಅಧ್ಯಕ್ಷ ಟ್ರಂಪ್​ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ವಿಶೇಷವೆಂದರೆ ಎರಡು ದಿನದ ಅಂತರದಲ್ಲಿ ಉಭಯ ನಾಯಕರ ಎರಡನೇ ಭೇಟಿ ಇದಾಗಿದೆ. ಭಾನುವಾರದಂದು ಹೌಡಿ ಮೋದಿ ಕಾರ್ಯಕ್ರಮದಲ್ಲಿ ಇಬ್ಬರೂ ನಾಯಕರು ಒಟ್ಟಾಗಿ ಕಾಣಿಸಿಕೊಂಡಿದ್ದರು.

ಇಂದಿನ ಭೇಟಿಯಲ್ಲಿ ಕಾಶ್ಮೀರ ವಿಚಾರ ಚರ್ಚೆಗೆ ಬರು ಸಾಧ್ಯತೆಯ ಕಡಿಮೆ ಎನ್ನಲಾಗಿದ್ದು, ಸೌಹಾರ್ದಯುತ ಭೇಟಿ ಇದಾಗಿರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸೋಮವಾರ ಟ್ರಂಪ್ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾತುಕತೆ ನಡೆಸಿದ್ದರು. ಈ ವೇಳೆ ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಉಭಯ ದೇಶಗಳು ಒಪ್ಪಿದಲ್ಲಿ ತಾವು ಮಧ್ಯಸ್ಥಿಕೆಗೆ ಸಿದ್ಧ ಎಂದಿದ್ದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.