ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಸೋಮವಾರ ಭಯೋತ್ಪಾದನೆ ವಿಚಾರದ ಕುರಿತಂತೆ ಮಾತನಾಡುತ್ತಾ ಪ್ರಧಾನಿ ಮೋದಿ ಪರೋಕ್ಷವಾಗಿ ಚೀನಾ ದೇಶಕ್ಕೂ ಚಾಟಿ ಬೀಸಿದ್ದಾರೆ.
'ಭಯೋತ್ಪಾದಕ ಮತ್ತು ಹಿಂಸಾತ್ಮಕ ಉಗ್ರಗಾಮಿ ನಿರೂಪಣೆಗಳಿಗೆ ಕಾರ್ಯತಂತ್ರದ ಪ್ರತಿಕ್ರಿಯೆಗಳು' ಎನ್ನುವ ವಿಚಾರದ ಕುರಿತು ಮಾತನಾಡಿದ ಮೋದಿ, ಉಗ್ರ ಪೋಷಕ ರಾಷ್ಟ್ರಗಳಿಗೆ ಬಂಡವಾಳ ಹಾಗೂ ಶಸ್ತ್ರಾಸ್ತ್ರಗಳ ಪೂರೈಕೆ ಸಂಪೂರ್ಣ ಸ್ಥಗಿತವಾಗಬೇಕು ಎಂದು ಆಗ್ರಹಿಸಿದ್ದಾರೆ. ಈ ಮೂಲಕ ಪಾಕಿಸ್ತಾನವನ್ನು ಬೆಂಬಲಿಸುತ್ತಿರುವ ಚೀನಾಗೆ ಪರೋಕ್ಷ ಟಾಂಗ್ ಕೊಟ್ಟರು.
ಇದನ್ನೂ ಓದಿ: 'ಇಂಥ ಪತ್ರಕರ್ತರು ನಿಮಗೆಲ್ಲಿ ಸಿಗ್ತಾರೆ?' ಇಮ್ರಾನ್ ಎದುರು ಪಾಕ್ ಪತ್ರಕರ್ತನಿಗೆ ಟ್ರಂಪ್ ಬಿಸಿ
ಭಯೋತ್ಪಾದಕ ದಾಳಿ ವಿಶ್ವದ ಯಾವ ಮೂಲೆಯಲ್ಲಿಯೂ ನಡೆಯದಂತೆ ತಡೆಯುವ ಕಾರ್ಯವಾಗಬೇಕು. ಉಗ್ರದಾಳಿಯಲ್ಲಿ 'ಉತ್ತಮ ದಾಳಿ ಮತ್ತು ಕೆಟ್ಟ ದಾಳಿ' ಎನ್ನುವ ಪರಿಕಲ್ಪನೆಯೇ ಇಲ್ಲ ಎಂದರು.
ಪಾಕಿಸ್ತಾನಕ್ಕೆ ಎಲ್ಲಾ ರೀತಿಯ ಸಹಾಯವನ್ನೂ ಚೀನಾ ಒದಗಿಸುತ್ತಿದ್ದು, ಇತ್ತೀಚೆಗೆ ಆ ದೇಶದಲ್ಲಿ ಒಂದು ಬಿಲಿಯನ್ ಹಣ ಹೂಡಿಕೆಗೆ ಅಂಕಿತ ಹಾಕಿದೆ. ಇದರ ಜೊತೆಗೆ ಶಸ್ತ್ರಾಸ್ತ್ರಗಳನ್ನೂ ನಿರಂತರವಾಗಿ ಪೂರೈಸುತ್ತಲೇ ಬಂದಿದೆ.
ಇದನ್ನೂ ಓದಿ: ಶೃಂಗಸಭೆಗೆ ಟ್ರಂಪ್ ದಿಢೀರ್ ಭೇಟಿ... ಮೋದಿ ಭಾಷಣ ಆಲಿಸಿದ ಅಮೆರಿಕ ಅಧ್ಯಕ್ಷ!