ETV Bharat / international

50 ವರ್ಷ ಮೇಲ್ಪಟ್ಟ ಅನಾರೋಗ್ಯ ವ್ಯಕ್ತಿಗೆ ಕೊವಿಡ್ ತಗಲುವ ಸಾಧ್ಯತೆ ಹೆಚ್ಚು: ಅಧ್ಯಯನ ವರದಿ

author img

By

Published : Mar 24, 2020, 1:04 PM IST

50 ವರ್ಷಕ್ಕೂ ಮೇಲ್ಪಟ್ಟ ವ್ಯಕ್ತಿಗಳಿಗೆ ಕೊರೊನಾ ವೈರಸ್​ ತಗಲುವ ಸಾಧ್ಯತೆ ಹೆಚ್ಚು ಎಂದು ವೈಟ್ ಹೌಸ್​ ಕೊರೊನಾ ವೈರಸ್​ ಟಾಸ್ಕ್​ ಫೋರ್ಸ್​ ತಂಡದಲ್ಲಿನ ಅಮೆರಿಕ ವೈದ್ಯರೊಬ್ಬರು ಈ ಮಾಹಿತಿ ನೀಡಿದ್ದಾರೆ.

ಕೊವಿಡ್​-19
COVID-19

ವಾಷಿಂಗ್ಟನ್​: ಮೊದಲೇ ಅನಾರೋಗ್ಯದಿಂದ ಬಳಲುತ್ತಿರುವ 50 ವರ್ಷಕ್ಕೂ ಮೇಲ್ಪಟ್ಟ ವ್ಯಕ್ತಿಗಳಿಗೆ ಕೊವಿಡ್​-19 ಬಾಧಿಸುವ ಸಾಧ್ಯತೆಗಳು ಹೆಚ್ಚು ಎಂದು ಇತ್ತೀಚಿನ ಅಧ್ಯಯನವೊಂದರಲ್ಲಿ ತಿಳಿದು ಬಂದಿದೆ. ಯುರೋಪ್​ ಮತ್ತು ಚೀನಾಗಳಲ್ಲಿ ಕೊರೊನಾ ವೈರಸ್​ನಿಂದಾದ ಸಾವಿನ ಅಂಕಿ ಅಂಶಗಳ ಕುರಿತಾದ ವೈಟ್ ಹೌಸ್​ ಕೊರೊನಾ ವೈರಸ್​ ಟಾಸ್ಕ್​ ಫೋರ್ಸ್​ ತಂಡದಲ್ಲಿನ ಅಮೆರಿಕ ವೈದ್ಯರೊಬ್ಬರು ಈ ಮಾಹಿತಿ ನೀಡಿದ್ದಾರೆ.

'ನಮಗೆ ದೊರೆತ ಮಾಹಿತಿಯ ಪ್ರಕಾರ ಇಡೀ ಯುರೋಪ್​ನಲ್ಲಿ 15 ವರ್ಷಕ್ಕೂ ಕೆಳಗಿನ ಯಾವುದೇ ಮಗು ಕೊರೊನಾಗೆ ಬಲಿಯಾಗಿಲ್ಲ. ಹೀಗಾಗಿ ಮಕ್ಕಳಲ್ಲಿ ಕೊರೊನಾ ವೈರಸ್​ ಪ್ರಭಾವ ಕಡಿಮೆ ಎಂಬ ಅಭಿಪ್ರಾಯಕ್ಕೆ ನಾವು ಬಂದಿದ್ದೇವೆ. ಹಾಗೆಯೇ ದೊಡ್ಡವರಿಗೆ ಈ ವೈರಸ್ ಬಾಧೆ ಹೆಚ್ಚು' ಎಂದು ವೈಟ್​ಹೌಸ್​ ಕೊರೊನಾ ವೈರಸ್​ ಟಾಸ್ಕ್​ ಫೋರ್ಸ್​ ಸಮನ್ವಯಾಧಿಕಾರಿ ಡಾ. ಡೆಬೊರಾ ಬರ್ಕ್ಸ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

50 ವರ್ಷಕ್ಕೂ ಮೇಲ್ಪಟ್ಟ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದವರಿಗೆ ಕೊರೊನಾ ಬಾಧಿಸದು ಎಂದು ಭಾವಿಸುವಂತಿಲ್ಲ. ಸಂಪೂರ್ಣ ಆರೋಗ್ಯವಂತರಾದ 50 ವರ್ಷ ಮೇಲ್ಪಟ್ಟವರಿಗೂ ವೈರಸ್​ ದಾಳಿ ಮಾಡಬಹುದು ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.