ಪ್ಯಾರಿಸ್, ಫ್ರಾನ್ಸ್ : ವಿಶ್ವದಾದ್ಯಂತ ಜನರು ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಸಾಮಾನ್ಯವಾಗಿ ಪಾರ್ಟಿಗಳಲ್ಲಿ ಕುಣಿದು- ಕುಪ್ಪಳಿಸಿ, ತರಹೇವಾರಿ ತಿನಿಸುಗಳನ್ನು ಸವಿದು ಹೊಸ ವರ್ಷಾಚರಣೆಯನ್ನು ಬಹುತೇಕ ಮಂದಿ ಬರಮಾಡಿಕೊಂಡಿದ್ದಾರೆ. ಆದರೆ ಫ್ರಾನ್ಸ್ನಲ್ಲಿ ಜನರು ತಮ್ಮ ತಮ್ಮ ಕಾರುಗಳಿಗೆ ಬೆಂಕಿ ಹಚ್ಚಿ, ಹೊಸ ವರ್ಷಾಚರಣೆ ಮಾಡಿದ್ದಾರೆ.
ಹೌದು, ಕೆಲವು ದಶಕಗಳಿಂದ ಬಂದ ಸಂಪ್ರದಾಯದ ಭಾಗವಾಗಿ ಫ್ರಾನ್ಸ್ನ ಜನರು 2022ರ ಹೊಸ ವರ್ಷಕ್ಕೆ ಸುಮಾರು 874 ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಹೊಸ ವರ್ಷಕ್ಕೆ ಹಿಂದಿನ ದಿನ ಈ ಸಂಪ್ರದಾಯ ನಡೆಯುತ್ತಿದೆ. ಫ್ರಾನ್ಸ್ ದೇಶಾದ್ಯಂತ ಕೊರೊನಾ ಮಾರ್ಗಸೂಚಿಯ ಆಧಾರದಲ್ಲಿ ಹೊಸ ವರ್ಷಾಚರಣೆ ನಡೆದಿದ್ದು, 2019ರಲ್ಲಿ 1,316 ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ. ಈಗ ಕಾರುಗಳಿಗೆ ಬೆಂಕಿ ಹಚ್ಚಿರುವ ಪ್ರಮಾಣ ಕಡಿಮೆಯಾಗಿದೆ ಎಂದು ಫ್ರಾನ್ಸ್ ಸರ್ಕಾರ ಮಾಹಿತಿ ನೀಡಿದೆ.
ಹೊಸ ವರ್ಷಾಚರಣೆಯಲ್ಲಿ ವಿವಿಧ ಸಣ್ಣಪುಟ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ 441 ಮಂದಿಯನ್ನ ವಶಕ್ಕೆ ಪಡೆಯಲಾಗಿತ್ತು. 2019ರಲ್ಲಿ ಇವರ ಸಂಖ್ಯೆ 376 ಆಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಕೊರೊನಾ ಸೋಂಕಿತರ ಸಂಖ್ಯೆಯ ಫ್ರಾನ್ಸ್ನಲ್ಲಿ ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿದ್ದು, ದಿನವೊಂದಕ್ಕೆ ಸುಮಾರು 2 ಲಕ್ಷ ಮಂದಿ ಸೋಂಕಿತರು ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ 24 ಗಂಟೆಗಳಲ್ಲಿ 2,19,196 ಮಂದಿ ಸೋಂಕಿತರು ಇಲ್ಲಿ ಪತ್ತೆಯಾಗಿದ್ದರು ಎಂಬುದು ಉಲ್ಲೇಖಾರ್ಹಾವಾಗಿದೆ.
ಇದನ್ನೂ ಓದಿ: ಹೊಸ ವರ್ಷಾಚರಣೆಯ ಅಡುಗೆಗೆ ಮೇಕೆಗಳ ಕದ್ದ ಪೊಲೀಸಪ್ಪ