ETV Bharat / international

ಮುಂಬೈ ದಾಳಿಕೋರರ ವಿರುದ್ಧ ಕ್ರಮಕೈಗೊಳ್ಳಲು ಹಿಂಜರಿಯುತ್ತಿರುವುದು ಪಾಕ್​ನ ಅಪ್ರಾಮಾಣಿಕತೆಯನ್ನು ಬಿಂಬಿಸುತ್ತದೆ - ಮುಂಬೈ ದಾಳಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದ ಪಾಕ್

ತನ್ನ ಮಣ್ಣಿನಿಂದ ಹೊರಹೊಮ್ಮುತ್ತಿರುವ ಭಯೋತ್ಪಾದನೆಯನ್ನು ಮಟ್ಟ ಹಾಕುವಲ್ಲಿ ಪಾಕಿಸ್ತಾನಕ್ಕೆ ಗಂಭೀರತೆಯ ಕೊರತೆಯಿದೆ ಎಂದು ಪೆಂಟಗಾನ್‌ನ ಮಾಜಿ ಅಧಿಕಾರಿ ಮೈಕೆಲ್ ರುಬಿನ್ ಹೇಳಿದ್ದಾರೆ.

Pakistan's insincere approach on Mumbai attacks
ಪಾಕ್ ವಿರುದ್ಧ ಪೆಂಟಗಾನ್ ಅಧಿಕಾರಿ ಕಿಡಿ
author img

By

Published : Nov 24, 2020, 7:29 PM IST

ಇಸ್ಲಾಮಾಬಾದ್ : ಆರು ಅಮೆರಿಕನ್ನರು ಸೇರಿದಂತೆ 160 ಜನರನ್ನು ಬಲಿ ಪಡೆದ 26/11 ರ ಮುಂಬೈ ಭಯೋತ್ಪಾದಕ ದಾಳಿ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳಲು ಪಾಕಿಸ್ತಾನ ಹಿಂಜರಿಯುತ್ತಿದೆ. ತನ್ನ ಮಣ್ಣಿನಿಂದ ಹೊರಹೊಮ್ಮುತ್ತಿರುವ ಭಯೋತ್ಪಾದನೆಯನ್ನು ಮಟ್ಟ ಹಾಕುವಲ್ಲಿ ಪಾಕಿಸ್ತಾನಕ್ಕೆ ಗಂಭೀರತೆಯ ಕೊರತೆಯಿದೆ ಎಂದು ಪೆಂಟಗನ್‌ನ ಮಾಜಿ ಅಧಿಕಾರಿ ಮೈಕೆಲ್ ರುಬಿನ್ ಹೇಳಿದ್ದಾರೆ.

ವಾಷಿಂಗ್ಟನ್ ಎಕ್ಸಾಮೈನರ್​ನಲ್ಲಿ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಅಮೆರಿಕನ್ ಎಂಟರ್​ಪ್ರೈಸಸ್​ ಇನ್​ಸ್ಟಿಟ್ಯೂಟ್​ನ ವಿದ್ವಾಂಸ ರುಬಿನ್​, ಡಝನ್​ಗಟ್ಟಲೆ ರಾಷ್ಟ್ರಗಳ ನಾಗರಿಕರು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಗೆ ಬಲಿಯಾಗಿದ್ದಾರೆ. ಮುಂಬೈ ದಾಳಿಯಲ್ಲಿ ಯುಎಸ್, ಭಾರತ ಮಾತ್ರವಲ್ಲದೆ ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಇಟಲಿ, ಯುನೈಟೆಡ್ ಕಿಂಗ್‌ಡಂ, ಜಪಾನ್, ಇಸ್ರೇಲ್, ನೆದರ್‌ಲ್ಯಾಂಡ್ಸ್, ಜೋರ್ಡಾನ್, ಮಲೇಷ್ಯಾ, ಮೆಕ್ಸಿಕೊ, ಸಿಂಗಾಪುರ್ ಮತ್ತು ಮಾರಿಷಸ್​ನ ಪ್ರಜೆಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದಿದ್ದಾರೆ. ಮುಂಬೈನ ದಾಳಿಯಲ್ಲಿ ಕೇವಲ ಆರು ಅಮೆರಿಕನ್ನರು ಮೃತಪಟ್ಟಿದ್ದಾರೆ. ಆದರೆ, ಪಾಕ್​ ಪ್ರಾಯೋಜಿತ ತಾಲಿಬಾನ್ ದಾಳಿಯಲ್ಲಿ ಬಲಿಯಾದವರ ಸಂಖ್ಯೆ ಹೆಚ್ಚಿದೆ ಎಂದು ರುಬಿನ್ ಹೇಳಿದ್ದಾರೆ.

ನವೆಂಬರ್​ 26, 2008 ರಂದು ಮುಂಬೈ ತಾಜ್​ ಹೋಟೆಲ್​ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 166 ಜನ ಮೃತಪಟ್ಟಿದ್ದರು, 300 ಅಧಿಕ ಜನ ಗಾಯಗೊಂಡಿದ್ದರು. ಭೀಕರ ದಾಳಿಯಲ್ಲಿ ಭಾಗಿಯಾಗಿದ್ದ 9 ಭಯೋತ್ಪಾದಕರನ್ನು ಸೇನೆ ಹೊಡೆದಿರುಳಿಸಿತ್ತು, ಜೀವಂತವಾಗಿ ಸೆರೆ ಸಿಕ್ಕ ಅಜ್ಮಲ್​ ಅಮೀರ್​ ಕಸಬ್​ನನ್ನು ಯೆರವಾಡ ಕೇಂದ್ರ ಕಾರಾಗೃಹದಲ್ಲಿ 11 ನವೆಂಬರ್​ 2012 ರಂದು ಗಲ್ಲಿಗೇರಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.