ಫ್ಲೋರಿಡಾ: ಭಯೋತ್ಪಾದನೆಯನ್ನು ನಿಗ್ರಹಿಸುವ ವಿಚಾರದಲ್ಲಿ ಗ್ಲೋಬಲ್ ವಾಚ್ಡಾಗ್ ನೀಡಿದ್ದ ಗಡುವಿನಲ್ಲಿ ಪಾಕಿಸ್ತಾನ ಯಾವುದೇ ಸುಧಾರಣೆ ಕಂಡುಬರದಿರುವ ಕಾರಣ ಖಡಕ್ ಎಚ್ಚರಿಕೆ ರವಾನಿಸಿದೆ.
ಉಗ್ರರ ನಿರ್ಮೂಲನೆ ವಿಚಾರದಲ್ಲಿ ಗ್ಲೋಬಲ್ ವಾಚ್ಡಾಗ್, ಜನವರಿ ತಿಂಗಳ ಗಡುವು ಆರಂಭದಲ್ಲಿ ನೀಡಿತ್ತು. ನಂತರದಲ್ಲಿ ಮೇ ಡೆಡ್ಲೈನ್ ನೀಡಲಾಗಿತ್ತು. ಸದ್ಯ ಮೇ ತಿಂಗಳ ಗಡುವಿನಲ್ಲೂ ಪಾಕಿಸ್ತಾನ ಭಯೋತ್ಪಾದಕರ ಮಟ್ಟಹಾಕುವ ವಿಚಾರದಲ್ಲಿ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಗ್ಲೋಬಲ್ ವಾಚ್ಡಾಗ್ ಹೇಳಿದೆ.
ಭಯೋತ್ಪಾದನೆಯ ವಿಚಾರದಲ್ಲಿ ಹಿಂದೆ ಬಿದ್ದಿದ್ದು ಗ್ಲೋಬಲ್ ವಾಚ್ಡಾಗ್ ಇದೀಗ ಅಕ್ಟೋಬರ್ ತಿಂಗಳನ್ನು ಕೊನೆಯ ಗಡುವನ್ನಾಗಿ ನೀಡಿದೆ. ಅಕ್ಟೋಬರ್ ವೇಳೆಗೂ ಪರಿಸ್ಥಿತಿ ಭಿನ್ನವಾಗಿಲ್ಲದಿದ್ದರೆ ಮುಂದಿನ ಹೆಜ್ಜೆ ತೆಗೆದುಕೊಳ್ಳುವುದಾಗಿ ಫ್ಲೋರಿಡಾದ ಒರ್ಲಾಂಡೋದಲ್ಲಿ ನಡೆದ ಸಭೆಯ ಬಳಿಕ ಹೇಳಿದೆ.
ಪಾಕಿಸ್ತಾನ, ಭಯೋತ್ಪಾದನಾ ಕೃತ್ಯಕ್ಕೆ ಮತ್ತು ಅಕ್ರಮ ಹಣಕಾಸಿನ ವಹಿವಾಟಿಗೆ ಬೆಂಬಲ ನೀಡುತ್ತಿದ್ದರಿಂದ ಗ್ಲೋಬಲ್ ವಾಚ್ಡಾಗ್ ಈಗಾಗಲೇ ಗ್ರೇ ಲಿಸ್ಟ್(ಬೂದು ಪಟ್ಟಿ)ಗೆ ಸೇರ್ಪಡೆ ಮಾಡಿದೆ. ಆದರೆ ಭಾರತ, ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಲು ಒತ್ತಾಯಿಸುತ್ತಿದೆ.