ವಾಷಿಂಗ್ಟನ್: ನಿರ್ಗಮಿತ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಂದಿನ ಅಧ್ಯಕ್ಷ ಜೋ ಬೈಡನ್ ಅವರನ್ನು ಇನ್ನೂ ಭೇಟಿ ಮಾಡಿಲ್ಲ, ಮುಂದಿನ ಆಡಳಿತ ಕುರಿತು ಚರ್ಚೆ ಮಾಡಿಲ್ಲ. ಆದ್ರೆ ನಿರ್ಗಮಿತ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರು ಮುಂದಿನ ಉಪಾಧ್ಯಕ್ಷ ಸ್ಥಾನ ವಹಿಸಲಿರುವ ಕಮಲಾ ಹ್ಯಾರಿಸ್ ಅವರ ಗೆಲುವನ್ನು ಅಭಿನಂದಿಸಲು ಮತ್ತು ಮುಂದಿನ ವಾರದ ಅಧಿಕಾರ ಹಸ್ತಾಂತರ ಸಮಾರಂಭಕ್ಕೆ ಅವರ ಸಹಾಯವನ್ನು ನೀಡಲು ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ.
ನಿರ್ಗಮಿತ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರು ಕಮಲಾ ಹ್ಯಾರಿಸ್ಗೆ ಕರೆ ಮಾಡಿದ್ದು, ಅಂತಿಮ ದಿನಗಳವರೆಗೂ ತಮ್ಮ ಕರ್ತವ್ಯವನ್ನು ಹೇಗೆ ನಿಭಾಯಿಸುತ್ತಿದ್ದಾರೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ ಎಂದು ಹಿಲ್ ಸಂಸ್ಥೆ ವರದಿ ಮಾಡಿದೆ. ಆಡಳಿತ ಸಂಬಂಧ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ಚರ್ಚೆಯ ನಂತರ ಇಬ್ಬರು ಉಪಾಧ್ಯಕ್ಷರ ನಡುವೆ ನಡೆದ ಮೊದಲ ಸಂಭಾಷಣೆ ಇದಾಗಿದ್ದು, ಇತರರಿಗೆ ಮಾದರಿಯಾಗಿದೆ.
ಈ ಸುದ್ದಿಯನ್ನೂ ಓದಿ: ಭದ್ರತಾ ವ್ಯವಸ್ಥೆಯ ಕುರಿತು ಮಾಹಿತಿ ಪಡೆದುಕೊಂಡ ಜೋ ಬೈಡನ್
ಅಲ್ಲದೇ, ಫೆಡರಲ್ ತುರ್ತುಸ್ಥಿತಿ ನಿರ್ವಹಣಾ ಸಂಸ್ಥೆ (ಫೆಮಾ)ಯೊಂದಿಗಿನ ಸಭೆಯೊಂದರಲ್ಲಿ ಪೆನ್ಸ್ ಮಾತನಾಡುವ ವೇಳೆ, ನಾವು ಸುಗಮ ಮತ್ತು ಸುರಕ್ಷಿತ ಅಧಿಕಾರ ಹಸ್ತಾಂತರ ಸಮಾರಂಭಕ್ಕೆ ಬದ್ಧರಾಗಿದ್ದೇವೆ. ಅಮೆರಿಕದ ಜನರು ಕೂಡ ಅದನ್ನೇ ಆಶಿಸುತ್ತಾರೆ ಮತ್ತು ಅರ್ಹರಾಗಿರುತ್ತಾರೆಂದು ತಿಳಿಸಿದ್ದರು ಅಂತಾ ಸ್ಪುಟ್ನಿಕ್ ವರದಿ ಮಾಡಿದೆ.
ಮುಂದಿನ ವಾರ ನಡೆಯಲಿರುವ ಅಧಿಕಾರ ಹಸ್ತಾಂತರ ಸಮಾರಂಭದ ಹಿಂದಿನ ದಿನವೇ ನಿರ್ಗಮಿತ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್ನಿಂದ ತೆರಳಲಿದ್ದಾರೆ. ಆದ್ರೆ ನಿರ್ಗಮಿತ ಉಪಾಧ್ಯಕ್ಷ ಮೈಕ್ ಪೆನ್ಸ್ ಈ ಸಮಾರಂಭದಲ್ಲಿ ತಮ್ಮ ಪಾತ್ರ ವಹಿಸಲು ಉತ್ಸುಕರಾಗಿದ್ದು, ಆಶಾದಾಯಕ ಬೆಳವಣಿಗೆಯಾಗಿದೆ.