ETV Bharat / international

ಯುರೋಪ್‌, ಯುಕೆ, ಯುಎಸ್‌ನಲ್ಲಿ ಒಮಿಕ್ರಾನ್‌ ಮತ್ತಷ್ಟು ಅಬ್ಬರ ; ಯಾವ ದೇಶದಲ್ಲಿ ಎಷ್ಟೆಷ್ಟು ಪ್ರಕರಣಗಳು? - ಬ್ರಿಟನ್‌ನಲ್ಲಿ ದಾಖಲೆಯ ಕೋವಿಡ್‌ ಪ್ರಕರಣಗಳು ದಾಖಲು

ಕ್ರಿಸ್ಮಸ್‌ ಬಳಿಕ ಯುರೋಪ್‌, ಯುಕೆ ಹಾಗೂ ಯುಎಸ್‌ನಲ್ಲಿ ಕೋವಿಡ್‌ ರೂಪಾಂತರಿ ಒಮಿಕ್ರಾನ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಕಳೆದ 24 ಗಂಟೆಗಳಲ್ಲಿ 4,41,278 ಹೊಸ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಒಮಿಕ್ರಾನ್‌ ಪಾಲು ಹೆಚ್ಚಿದೆ ಎಂದು ಅಂದಾಜಿಸಲಾಗಿದೆ..

Omicron fear grips world as Europe, UK see record Covid cases, US confused over new isolation rules
ಯುರೋಪ್‌, ಯುಕೆ, ಯುಎಸ್‌ನಲ್ಲಿ ಕೋವಿಡ್‌ ರೂಪಾಂತರಿ ಒಮಿಕ್ರಾನ್‌ ಮತ್ತಷ್ಟು ಅಬ್ಬರ; ಯಾವ ದೇಶದಲ್ಲಿ ಎಷ್ಟೆಷ್ಟು ಪ್ರಕರಣಗಳು..
author img

By

Published : Dec 29, 2021, 1:43 PM IST

ವಾಷಿಂಗ್ಟನ್‌ : ಕೋವಿಡ್‌ ರೂಪಾಂತರಿ ಒಮಿಕ್ರಾನ್‌ ಜಗತ್ತಿನಾದ್ಯಂತ ತನ್ನ ಅಟ್ಟಹಾಸವನ್ನು ಮುಂದುವರೆಸಿದೆ. ಈ ವೈರಸ್‌ ಅನ್ನು ತಡೆಯಲು ಅಲ್ಲಿನ ಸರ್ಕಾರಗಳನ್ನು ಹೊಸ ನಿಯಮಗಳ ಜಾರಿಗೆ ಮುಂದಾಗಿವೆ. ಡೆಲ್ಟಾ ರೂಪಾಂತರಿಗಿಂತ ಒಮಿಕ್ರಾನ್‌ ಅತಿ ವೇಗವಾಗಿ ಹರಡುತ್ತಿರುವುದರಿಂದ 2022 ಅನ್ನು ಸ್ವಾಗತಿಸುವುದಕ್ಕೂ ಕೆಲ ದೇಶಗಳನ್ನು ನಿರ್ಬಂಧಗಳನ್ನು ವಿಧಿಸಿಕೊಳ್ಳುತ್ತಿವೆ.

ಯುರೋಪ್‌ನಲ್ಲಿ ಒಂದೇ ದಿನ 1,79,807 ಹೊಸ ಪ್ರಕರಣ ದಾಖಲಾಗಿವೆ. ಇದರಲ್ಲಿ ಫ್ರಾನ್ಸ್‌ನದ್ದು ಸಿಂಹಪಾಲು ಇದೆ. ಜೊತೆಗೆ ಇಟಲಿ, ಗ್ರೀಸ್‌, ಪೋರ್ಚುಗಲ್ ಹಾಗೂ ಇಂಗ್ಲೆಂಡ್‌ನಲ್ಲೂ ದಿನ ನಿತ್ಯದ ಕೋವಿಡ್‌ ಪ್ರಕರಣಗಳು ದಾಖಲೆಯ ಮಟ್ಟದಲ್ಲಿ ಏರಿಕೆಯಾಗುತ್ತಿವೆ.

ಕ್ರಿಸ್ಮಸ್‌ ಹಬ್ಬ ಹಿನ್ನೆಲೆಯಲ್ಲಿ ಕೋವಿಡ್‌ ವರದಿಗಳು ವಿಳಂಬ ಆಗಿರುವ ಸಾಧ್ಯತೆ ಇದೆ. ಹೀಗಾಗಿ, ಒಮಿಕ್ರಾನ್‌ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿವೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಜನವರಿಯ ಆರಂಭದ ವೇಳೆಗೆ ಫ್ರಾನ್ಸ್‌ನಲ್ಲಿ ದಿನಕ್ಕೆ 2,50,000 ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ ಎಂದು ಫ್ರಾನ್ಸ್‌ ಆರೋಗ್ಯ ಸಚಿವ ಒಲಿವಿಯರ್ ವೆರಾನ್ ಎಚ್ಚರಿಕೆ ನೀಡಿದ್ದಾರೆ. ಅತ್ಯಂತ ಕಷ್ಟಕರವಾದ ವಾರಗಳು ಇನ್ನೂ ಬರುತ್ತವೆ ಎಂದು ಫ್ರೆಂಚ್ ಆಸ್ಪತ್ರೆ ಫೆಡರೇಶನ್ ಕೂಡ ಆತಂಕ ವ್ಯಕ್ತಪಡಿಸಿದೆ.

ಬ್ರಿಟನ್‌ನಲ್ಲಿ ಒಮಿಕ್ರಾನ್‌ ಅಬ್ಬರ

ಒಮಿಕ್ರಾನ್‌ ತಡೆಯಲು ಹೊಸ ವರ್ಷಕ್ಕೆ ಯಾವುದೇ ನಿರ್ಬಂಧಗಳನ್ನು ವಿಧಿಸುವುದಿಲ್ಲ ಎಂದು ಬ್ರಿಟನ್‌ ಪ್ರಧಾನಿ ಬೋರಿಸ್‌ ಚಾನ್ಸನ್‌ ಹೇಳಿಕೆ ನೀಡಿದ ಮರು ದಿನವಾದ ನಿನ್ನೆ ಅಲ್ಲಿ ಹೊಸದಾಗಿ 1,29,471 ಕೋವಿಡ್‌ ಪ್ರಕರಣ ವರದಿಯಾಗಿವೆ.

ಇಂಗ್ಲೆಂಡ್‌ನಲ್ಲಿ ಹೊಸ ನಿರ್ಬಂಧಗಳನ್ನು ವಿಧಿಸುವುದಿಲ್ಲ. ಆದರೆ, ಹೊಸ ವರ್ಷವನ್ನು ಎಚ್ಚರಿಕೆಯಿಂದ ಆಚರಿಸಬೇಕು ಎಂದು ಜನರಿಗೆ ತಾಕೀತು ಮಾಡಿದ್ದರು. ಆರೋಗ್ಯ ವ್ಯವಸ್ಥೆಯಲ್ಲಿ ವೈಫಲ್ಯವಾದರೆ ನಿಯಮಗಳನ್ನು ಬಿಗಿಗೊಳಿಸಲಾಗುತ್ತದೆ ಎಂದು ಎಚ್ಚರಿಸಿದ್ದರು.

ಅಮೆರಿಕದಲ್ಲೂ ಒಮಿಕ್ರಾನ್‌ ಹೆಚ್ಚಳ

ವಿಶ್ವದ ದೊಡ್ಡಣ್ಣ ಅಮೆರಿಕದಲ್ಲೂ ಕೋವಿಡ್‌ನ ಹೊಸ ರೂಪಾಂತರಿ ಒಮಿಕ್ರಾನ್‌ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಕಳೆದ 24 ಗಂಟೆಗಳಲ್ಲಿ 4,41,278 ಹೊಸ ಪ್ರಕರಣ ದಾಖಲಾಗಿವೆ. ಇದರಲ್ಲಿ ಒಮಿಕ್ರಾನ್‌ ಪಾಲು ಶೇ.59ರಷ್ಟು ಇದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಒಮಿಕ್ರಾನ್​ ಸೋಂಕಿಗೆ ಆಸ್ಟ್ರೇಲಿಯಾದಲ್ಲಿ ಮೊದಲ ಬಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.