ETV Bharat / international

ಅಮೆರಿಕ, ರಷ್ಯಾದಲ್ಲಿವೆ ವಿಶ್ವದ ಶೇ.90 ರಷ್ಟು ಪರಮಾಣು ಸಿಡಿತಲೆಗಳು.. ಇಲ್ಲಿದೆ ಪೂರ್ಣ ಮಾಹಿತಿ - ನ್ಯೂಕ್ಲಿಯರ್​ ಬಾಂಬ್​ಗಳ ದಾಸ್ತಾನು

ಅಣು ದಾಳಿ ನಡೆಸುವುದನ್ನು ನಿಷೇಧದ ಮಧ್ಯೆಯೂ ರಷ್ಯಾ ಅಣು ಬಾಂಬ್​ ಬೆದರಿಕೆ ಈಗ ಜಗತ್ತಿಗೇ ಆತಂಕದ ವಿಷಯವಾಗಿದೆ. ಶೀತಲ ಸಮರದ ಬಳಿಕ ಪರಮಾಣು ಶಸ್ತ್ರಾಸ್ತ್ರಗಳನ್ನು ಇಳಿಕೆ ಮಾಡುವ ಪ್ರಯತ್ನದ ಮಧ್ಯೆಯೂ ಹಲವಾರು ರಾಷ್ಟ್ರಗಳು ಅಣು ಬಾಂಬ್​ಗಳನ್ನು ಅತ್ಯಧಿಕ ಮಟ್ಟದಲ್ಲಿ ದಾಸ್ತಾನು ಇಟ್ಟುಕೊಂಡಿವೆ..

nuclear-warheads
ಪರಮಾಣು ಸಿಡಿತಲೆಗಳು
author img

By

Published : Feb 28, 2022, 1:23 PM IST

ಉಕ್ರೇನ್​ ಮೇಲೆ ರಷ್ಯಾ ತೀವ್ರ ದಾಳಿ ನಡೆಸಿದ್ದರ ಮಧ್ಯೆಯೂ ಉಕ್ರೇನ್​ ಪ್ರತಿರೋಧ ಒಡ್ಡುತ್ತಿರುವ ಹಿನ್ನೆಲೆ ಕೆರಳಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಅಣು ದಾಳಿ ನಡೆಸುವ ಬೆದರಿಕೆ ಹಾಕಿದ್ದಾರೆ. ಇದು ಉಭಯ ರಾಷ್ಟ್ರಗಳಲ್ಲದೇ ವಿಶ್ವದ ಮೇಲೆಯೇ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ.

ಪರಮಾಣು ಸಿಡಿತಲೆ
ಪರಮಾಣು ಸಿಡಿತಲೆ

ಅಣು ದಾಳಿ ನಡೆಸುವುದನ್ನು ನಿಷೇಧದ ಮಧ್ಯೆಯೂ ರಷ್ಯಾ ಅಣು ಬಾಂಬ್​ ಬೆದರಿಕೆ ಈಗ ಜಗತ್ತಿಗೇ ಆತಂಕದ ವಿಷಯವಾಗಿದೆ. ಶೀತಲ ಸಮರದ ಬಳಿಕ ಪರಮಾಣು ಶಸ್ತ್ರಾಸ್ತ್ರಗಳನ್ನು ಇಳಿಕೆ ಮಾಡುವ ಪ್ರಯತ್ನದ ಮಧ್ಯೆಯೂ ಹಲವಾರು ರಾಷ್ಟ್ರಗಳು ಅಣು ಬಾಂಬ್​ಗಳನ್ನು ಅತ್ಯಧಿಕ ಮಟ್ಟದಲ್ಲಿ ದಾಸ್ತಾನು ಇಟ್ಟುಕೊಂಡಿವೆ.

ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್​ ದೇಶಗಳು ವಿಶ್ವದಲ್ಲಿಯೇ ಅತ್ಯಧಿಕ ಪ್ರಮಾಣದ ಪರಮಾಣು ಬಾಂಬ್​ಗಳನ್ನು ಹೊಂದಿವೆ. 2022ರವರೆಗೂ ವಿಶ್ವದ 9 ದೇಶಗಳು ಸರಿಸುಮಾರು 12,700 ಸಿಡಿತಲೆಗಳನ್ನು ಹೊಂದಿವೆ ಎಂಬುದು ಆತಂಕ ಸಂಗತಿಯಾಗಿದೆ.

ಪರಮಾಣು ಸಿಡಿತಲೆ
ಪರಮಾಣು ಸಿಡಿತಲೆ

ಅಮೆರಿಕ-ರಷ್ಯಾದಲ್ಲಿವೆ ಶೇ.90ರಷ್ಟು ಸಿಡಿತಲೆ : ಇಷ್ಟು ಪ್ರಮಾಣದ(12,700) ಸಿಡಿತಲೆಗಳಲ್ಲಿ ಶೇ.90ರಷ್ಟು ರಷ್ಯಾ ಮತ್ತು ಅಮೆರಿಕದ ರಾಷ್ಟ್ರಗಳದ್ದಾಗಿವೆ. ಇತರೆ ರಾಷ್ಟ್ರಗಳು ರಾಷ್ಟ್ರೀಯ ಭದ್ರತೆಗಾಗಿ ಹೆಚ್ಚೆಂದರೆ ಸರಿಸುಮಾರು 100 ಅಥವಾ ಅದಕ್ಕೂ ಹೆಚ್ಚು ಸಿಡಿತಲೆಗಳನ್ನು ಮಾತ್ರ ಹೊಂದಿವೆ. ಪ್ರಬಲ ದೇಶಗಳಾದ ಅಮೆರಿಕಾ ಮತ್ತು ರಷ್ಯಾ 4 ಸಾವಿರಕ್ಕೂ ಅಧಿಕ ಸಿಡಿತಲೆಗಳನ್ನು ತಮ್ಮ ಮಿಲಿಟರಿ ಪಡೆಗಳಲ್ಲೇ ನಿಯೋಜಿಸಿರುವುದು ವಿಶೇಷ.

ನಿಜದಲ್ಲಿ ಜಾಗತಿಕವಾಗಿ 30 ವರ್ಷಗಳಿಂದೀಚೆಗೆ ಪರಮಾಣು ಶಸ್ತ್ರಾಸ್ತ್ರಗಳ ದಾಸ್ತಾನು ಪ್ರಮಾಣ ಕಡಿಮೆಯಾಗಿದೆ. ಅಮೆರಿಕ ಮತ್ತು ರಷ್ಯಾ ನಿಷ್ಕ್ರಿಯ ಸಿಡಿತಲೆಗಳನ್ನು ಕೈಬಿಡುತ್ತಿರುವ ಕಾರಣ ಈ ಸಂಖ್ಯೆ ಇಳಿಕೆ ಕಾಣುತ್ತಿವೆ. ಜಾಗತಿಕವಾಗಿ ಪರಮಾಣು ಬಾಂಬ್​ಗಳನ್ನು ಹೆಚ್ಚಾಗಿ ಮಿಲಿಟರಿ ಪಡೆಗಳಲ್ಲಿ ನಿಯೋಜಿಸುವುದು ಈ ಮಧ್ಯೆ ಹೆಚ್ಚಳವಾಗಿದೆ. ಇದು ಆಯಾ ರಾಷ್ಟ್ರಗಳ ಭದ್ರತಾ ದೃಷ್ಟಿಯಿಂದ ಈ ಬೆಳವಣಿಗೆ ಉಂಟಾಗುತ್ತಿದೆ.

ಇನ್ನೊಂದೆಡೆ ಅಮೆರಿಕ ತನ್ನ ಪರಮಾಣು ಸಂಗ್ರಹವನ್ನು ನಿಧಾನವಾಗಿ ಕಡಿತ ಮಾಡುತ್ತಿದ್ದರೆ, ಫ್ರಾನ್ಸ್ ಮತ್ತು ಇಸ್ರೇಲ್ ಸ್ಥಿರತೆ ಕಾಪಾಡಿವೆ. ಆದರೆ, ಚೀನಾ, ಭಾರತ, ಉತ್ತರ ಕೊರಿಯಾ, ಪಾಕಿಸ್ತಾನ ಮತ್ತು ಇಂಗ್ಲೆಂಡ್​, ರಷ್ಯಾ ತಮ್ಮ ಸಂಗ್ರಹವನ್ನು ಹೆಚ್ಚಿಸುತ್ತಿವೆ ಎಂದು ಹೇಳಲಾಗಿದೆ.

ಪರಮಾಣು ಸಿಡಿತಲೆ
ಪರಮಾಣು ಸಿಡಿತಲೆ

ಸೇನಾ ಪಡೆಗಳಲ್ಲಿವೆ 9,400 ಪರಮಾಣು ಸಿಡಿತಲೆಗಳು : ಪ್ರಪಂಚದ 12,700 ಪರಮಾಣು ಸಿಡಿತಲೆಗಳಲ್ಲಿ 9,400ಕ್ಕೂ ಹೆಚ್ಚು ಬಾಂಬ್​ಗಳು ಕ್ಷಿಪಣಿ, ವಿಮಾನ, ಹಡಗು ಮತ್ತು ಜಲಾಂತರ್ಗಾಮಿ ನೌಕೆಗಳಲ್ಲಿಯೇ ಅಡಕವಾಗಿವೆ. ಉಳಿದ ಸಿಡಿತಲೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಮತ್ತು ತಟಸ್ಥವಾಗಿಡಲಾಗಿದೆ.

ಮಿಲಿಟರಿ ದಾಸ್ತಾನುಗಳಲ್ಲಿರುವ 9,440 ಸಿಡಿತಲೆಗಳಲ್ಲಿ ಸುಮಾರು 3,730 ಕಾರ್ಯಾಚರಣೆಯ ಪಡೆಗಳೊಂದಿಗೆ (ಕ್ಷಿಪಣಿಗಳು ಅಥವಾ ಬಾಂಬರ್ ನೆಲೆಗಳ ಮೇಲೆ) ನಿಯೋಜಿಸಲಾಗಿದೆ. ಅಮೆರಿಕಾ, ರಷ್ಯಾ, ಇಂಗ್ಲೆಂಡ್​​ ಮತ್ತು ಫ್ರಾನ್ಸ್​ ದೇಶಗಳ 2 ಸಾವಿರ ಪರಮಾಣು ಸಿಡಿತಲೆಗಳು ಹೆಚ್ಚಿನ ಜಾಗೃತಾವಸ್ಥೆಯಲ್ಲಿವೆ. ಇದು ಯಾವುದೇ ಸಮಯದಲ್ಲಿ ಬೇಕಾದರೂ ಸಿಡಿಯುವ ಅತ್ಯಧಿಕ ಸಾಮರ್ಥ್ಯ ಹೊಂದಿವೆ.

1990ರ ಬಳಿಕ ಇಳಿಕೆ : ಶೀತಲ ಸಮರದ ನಂತರ ವಿಶ್ವದ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆಯು ಗಣನೀಯವಾಗಿ ಕುಸಿದಿದೆ. 1986ರಲ್ಲಿ 70,300 ರಷ್ಟು ಸಿಡಿತಲೆಗಳನ್ನು ವಿಶ್ವದ ಹಲವಾರು ರಾಷ್ಟ್ರಗಳು ಹೊಂದಿದ್ದವು. ಇದು 2022ರ ಹೊತ್ತಿಗೆ ಅಂದಾಜು 12,700ಕ್ಕೆ ಇಳಿದಿದೆ. ವಿಶೇಷವಾಗಿ 1990ರ ದಶಕದಲ್ಲಿ ಭಾರಿ ಪ್ರಮಾಣದಲ್ಲಿ ಪರಮಾಣು ಹೊಂದುವಿಕೆಯು ಕುಗ್ಗಿತ್ತು. ಆದರೆ, 1950ರ ಪರಮಾಣುಗಳಿಗಿಂತಲೂ ಈಗಿನ ಶಸ್ತ್ರಾಸ್ತ್ರಗಳು ಹೆಚ್ಚಿನ ಸಾಮರ್ಥ್ಯ ಹೊಂದಿವೆ.

ಯಾವ ದೇಶದಲ್ಲಿ ಎಷ್ಟು ಪರಮಾಣುಗಳಿವೆ? :

  • ರಷ್ಯಾ- 5977
  • ಅಮೆರಿಕಾ-5428
  • ಚೀನಾ-350
  • ಫ್ರಾನ್ಸ್​- 290
  • ಇಂಗ್ಲೆಂಡ್​-225
  • ಪಾಕಿಸ್ತಾನ-165
  • ಭಾರತ- 160
  • ಇಸ್ರೇಲ್​-90
  • ಉತ್ತರ ಕೊರಿಯಾ-20

ಸೂಚನೆ : ದೇಶದ ಸ್ವಾಧೀನದಲ್ಲಿರುವ ಪರಮಾಣು ಸಿಡಿತಲೆಗಳ ಸಂಖ್ಯೆಗಳನ್ನು ಗೌಪ್ಯವಾಗಿಡಲಾಗುತ್ತದೆ. ಇಲ್ಲಿ ದಾಖಲಿಸಲಾದ ಸಂಖ್ಯೆಗಳು ಆಯಾ ದೇಶಗಳ ಸಾಮರ್ಥ್ಯಾನುಸಾರ ಮತ್ತು ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದದ ಆಧಾರದ ಮೇಲೆ ಅಂದಾಜಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.