ETV Bharat / international

ಸಾಹಿತ್ಯ ಕ್ಷೇತ್ರದ ನೊಬೆಲ್​ ಪ್ರಕಟ: ಕಾದಂಬರಿಕಾರ ಅಬ್ದುಲ್​​ರಜಾಕ್​ ಗುರ್ನಾಹ್​​ಗೆ ಪ್ರಶಸ್ತಿ - ಸಾಹಿತ್ಯ ಕ್ಷೇತ್ರದ ನೊಬೆಲ್​ ಪ್ರಶಸ್ತಿ ಪ್ರಕಟ

2021ನೇ ಸಾಲಿನ ವಿವಿಧ ವಿಭಾಗದ ನೊಬೆಲ್​ ಪ್ರಶಸ್ತಿ ಪ್ರಕಟವಾಗ್ತಿದ್ದು, ಇಂದು ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ತಾಂಜೇನಿಯಾದ ಕಾದಂಬರಿಕಾರ ಅಬ್ದುಲ್ ರಜಾಕ್​ ಅವರಿಗೆ ಗೌರವ ಸಂದಿದೆ.

Novelist Abdulrazak
Novelist Abdulrazak
author img

By

Published : Oct 7, 2021, 5:14 PM IST

Updated : Oct 7, 2021, 6:13 PM IST

ಸ್ಟಾಕ್ಹೋಮ್​​: 2021ನೇ ಸಾಲಿನ ಸಾಹಿತ್ಯ ಕ್ಷೇತ್ರದ ನೊಬೆಲ್​ ಪ್ರಶಸ್ತಿ ಪ್ರಕಟಗೊಂಡಿದ್ದು, ಕಾದಂಬರಿಗಾರ ಅಬ್ದುಲ್​ರಜಾಕ್​​ ಗುರ್ನಾಹ್​​ ಅವರು​​ ಗೌರವಕ್ಕೆ ಭಾಜನರಾಗಿದ್ದಾರೆ. ತಾಂಜೇನಿಯಾದ ಕಾದಂಬರಿಕಾರರಾಗಿರುವ ಇವರು, ವಸಾಹತುಶಾಹಿಯ ಪರಿಣಾಮಗಳು, ಸಂಸ್ಕೃತಿಗಳು ಮತ್ತು ನಿರಾಶ್ರಿತರ ಭವಿಷ್ಯದ ವಿಚಾರವಾಗಿ ಬರೆದಿರುವ ಕೃತಿಗೆ ಪ್ರಶಸ್ತಿ ಲಭ್ಯವಾಗಿದೆ.

  • The 2021 Nobel Prize in Literature is awarded to the novelist Abdulrazak Gurnah “for his uncompromising and compassionate penetration of the effects of colonialism and the fate of the refugee in the gulf between cultures and continents” pic.twitter.com/AOoprBEEbS

    — ANI (@ANI) October 7, 2021 " class="align-text-top noRightClick twitterSection" data=" ">

ಅಬ್ದುಲ್​ ರಜಾಕ್​​ ಹಿಂದೂ ಮಹಾಸಾಗರದ ಜಂಜಿಬಾರ್​ ದ್ವೀಪದಲ್ಲಿ 1948ರಲ್ಲಿ ಜನಸಿದ್ದು, 1960ರ ದಶಕದ ಕೊನೆಯಲ್ಲಿ ಇಂಗ್ಲೆಂಡ್​​ಗೆ ನಿರಾಶ್ರಿತರಾಗಿ ಬಂದಿದ್ದರು. ಕ್ಯಾಂಟರ್ಬರಿಯ ಕೆಂಟ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಮತ್ತು ವಸಾಹತುಶಾಹಿ ಸಾಹಿತ್ಯದ ಪ್ರಾಧ್ಯಾಪಕರಾಗಿದ್ದ ಅವರು ಹತ್ತು ಕಾದಂಬರಿ ಹಾಗೂ ಅನೇಕ ಸಣ್ಣ ಕಥೆಗಳನ್ನು ಪ್ರಕಟಿಸಿದ್ದಾರೆ.ಈಗಾಗಲೇ ಈಗಾಗಲೇ ರಸಾಯನಶಾಸ್ತ್ರ, ಭೌತಶಾಸ್ತ್ರ ಹಾಗೂ ಮೆಡಿಸಿನ್ ವಿಭಾಗದಲ್ಲಿ ನೊಬೆಲ್​ ಪ್ರಶಸ್ತಿಗಳು ಪ್ರಕಟಗೊಂಡಿವೆ. ​ವಸಾಹತುಶಾಹಿಯ ಪರಿಣಾಮಗಳು, ಅಲ್ಲಿನ ಸಂಸ್ಕೃತಿ ಹಾಗೂ ವಲಸಿಗರ ಭವಿಷ್ಯದ ಕುರಿತಾದ ಸಹಾನುಭೂತಿ ನಿಲುವುಗಳ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. 1994ರಲ್ಲಿ ಇವರ ಮೊದಲ ಕಾದಂಬರಿ ಪ್ಯಾರಡೈಸ್​ ಪ್ರಕಟಗೊಂಡಿದ್ದು,2005ರಲ್ಲಿ ಡೆಜರ್ಸನ್​​ ಎಂಬ ಕಾಂದಬರಿ ಸಹ ಪ್ರಕಟವಾಗಿದೆ.

ಇದನ್ನೂ ಓದಿರಿ: ರಸಾಯನಶಾಸ್ತ್ರ ವಿಭಾಗದ ನೊಬೆಲ್​ ಪುರಸ್ಕಾರ ಪ್ರಕಟ: ಇಬ್ಬರು ವಿಜ್ಞಾನಿಗಳಿಗೆ ಸಿಕ್ಕ ಗೌರವ

ಅಮೆರಿಕನ್ ಕವಯತ್ರಿ ಲೂಯಿಸ್ ಗ್ಲುಕ್ಸ್ ಅವರಿಗೆ 2020ರ ಸಾಹಿತ್ಯ ಕ್ಷೇತ್ರದ ನೊಬೆಲ್​ ಪ್ರಕಟಗೊಂಡಿತ್ತು. ನೊಬೆಲ್ ಪ್ರಶಸ್ತಿಯು 10 ಮಿಲಿಯನ್ ಸ್ವೀಡಿಷ್ ಕ್ರೋನ್​ (121.12 ಮಿಲಿಯನ್) ಇದು ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 8 ಕೋಟಿ ರೂ. ಪ್ರಶಸ್ತಿ ಮೊತ್ತವನ್ನು ಹೊಂದಿದೆ (8,52,19,020 ರೂ. )

Last Updated : Oct 7, 2021, 6:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.