ಸ್ಯಾಂಟೋ ಡೊಮಿಂಗೋ(ಡೊಮಿನಿಕನ್ ರಿಪಬ್ಲಿಕ್): ಖಾಸಗಿ ಜೆಟ್ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡುವ ವೇಳೆ ಡೊಮಿನಿಕನ್ ಗಣರಾಜ್ಯದ ರಾಜಧಾನಿ ಸ್ಯಾಂಟೊ ಡೊಮಿಂಗೋದಲ್ಲಿ ಪತನವಾಗಿ ಕನಿಷ್ಠ 9 ಮಂದಿ ಸಾವ್ನನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆಯಲ್ಲಿ ಏಳು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ವಿಮಾನದ ನಿರ್ವಹಣೆ ಮಾಡುತ್ತಿದ್ದ ಹೆಲಿಡೋಸಾ ಏವಿಯೇಷನ್ ಗ್ರೂಪ್ ತಿಳಿಸಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ. ವಿಮಾನವು ಡೊಮಿನಿಕನ್ ರಿಪಬ್ಲಿಕ್‌ನ ಲಾ ಇಸಾಬೆಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಫ್ಲೋರಿಡಾಕ್ಕೆ ತೆರಳುತ್ತಿತ್ತು. ಆಕಸ್ಮಿಕವಾಗಿ ತುರ್ತು ಭೂಸ್ಪರ್ಶ ಮಾಡುವ ವೇಳೆ ವಿಮಾನ ಪತನವಾಗಿದೆ ಎಂದು ತಿಳಿದುಬಂದಿದೆ.
ಈ ವಿಮಾನ ದುರಂತವು ನಮಗೆ ಬಹಳ ದುಃಖವನ್ನು ಉಂಟು ಮಾಡಿದೆ ಎಂದು ಹೆಲಿಡೋಸಾ ಏವಿಯೇಷನ್ ಗ್ರೂಪ್ ಹೇಳಿದೆ. ಅಪಘಾತದ ನಂತರ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಹಲವಾರು ವಿಮಾನಗಳ ಪ್ರಯಾಣವನ್ನು ರದ್ದು ಮಾಡಲಾಗಿದೆ.
ಇದನ್ನೂ ಓದಿ: Haiti Gas tanker explosion: 75 ಮಂದಿ ದುರ್ಮರಣ, 50 ಮನೆಗಳು ಬೆಂಕಿಗಾಹುತಿ