ETV Bharat / international

ಕುಂಭಮೇಳದಲ್ಲಿ ಕೋವಿಡ್‌ ಪರೀಕ್ಷೆಯಲ್ಲಿ ವಂಚನೆ: ನ್ಯೂಯಾರ್ಕ್‌ ಟೈಮ್ಸ್‌ನಲ್ಲೂ ವರದಿ - ಉತ್ತರಾಖಂಡ್

ಇದೇ ವರ್ಷ ನಡೆದ ಹರಿದ್ವಾರದ ಕುಂಭಮೇಳದಲ್ಲಿ ಕೋವಿಡ್‌ ಪರೀಕ್ಷೆಗಳನ್ನು ಸರಿಯಾಗಿ ನಿರ್ವಹಿಸದ ಆರೋಪ ಸಂಬಂಧ ದೇಶ ಮಾತ್ರಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು, ಇದೇ ವಿಚಾರದ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ತನ್ನ ಅಂಕಣದಲ್ಲಿ ಬರೆದುಕೊಂಡಿದೆ.

new-york-times-published-the-news-of-corona-test-fraud-in-haridwar-kumbh-2021
ಹರಿದ್ವಾರದ ಕುಂಭಮೇಳದಲ್ಲಿ ಕೋವಿಡ್‌ ಪರೀಕ್ಷೆಯಲ್ಲಿ ವಂಚನೆ; ನ್ಯೂಯಾರ್ಕ್‌ ಟೈಮ್ಸ್‌ನಲ್ಲೂ ವರದಿ
author img

By

Published : Jun 17, 2021, 5:43 PM IST

ಡೆಹ್ರಾಡೂನ್: ಹರಿದ್ವಾರದಲ್ಲಿ ಈ ಬಾರಿ ನಡೆದ ಕುಂಭಮೇಳದಲ್ಲಿ ಕೋವಿಡ್‌ ಪರೀಕ್ಷೆ ಮಾಡದೇ ನಿರ್ಲಕ್ಷ್ಯವಹಿಸಿರುವ ಆರೋಪ ಇದೀಗ ದೇಶ ಮಾತ್ರವಲ್ಲದೆ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ನ್ಯೂಯಾರ್ಕ್ ಟೈಮ್ಸ್ ಈ ಸಂಬಂಧ ಟ್ವೀಟ್ ಮಾಡುವ ಮೂಲಕ ವಿಷಯವನ್ನು ಪ್ರಸ್ತಾಪಿಸಿದೆ.

ಇಂತಹ ಪರಿಸ್ಥಿತಿಯಲ್ಲಿ ಹರಿದ್ವಾರ ಮಾತ್ರವಲ್ಲದೇ ಉತ್ತರಾಖಂಡ ಹಾಗೂ ದೇಶದ ವಸ್ತುಸ್ಥಿತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಕೀರ್ತಿಗೆ ಒಳಗಾಗುತ್ತಿದೆ. ಇದರ ಹೊರತಾಗಿಯೂ, ಜವಾಬ್ದಾರಿಯುತ ಅಧಿಕಾರಿಗಳು ಈ ವಿಷಯದ ಬಗ್ಗೆ ಯಾವುದೇ ಸ್ಪಷ್ಟನೆ ನೀಡದಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.

ನ್ಯೂಯಾರ್ಕ್ ಟೈಮ್ಸ್ ತನ್ನ ಅಂಕಣದಲ್ಲಿ ಕುಂಭಮೇಳದಲ್ಲಿ ಕೋವಿಡ್‌ ನಿರ್ಲಕ್ಷ್ಯ ಬಗ್ಗೆ ಬರೆದುಕೊಂಡಿದ್ದು, 'ಭಾರತದಲ್ಲಿನ ಹಿಂದೂ ಉತ್ಸವವೊಂದರಲ್ಲಿ ಯಾತ್ರಿಕರಿಗೆ ಸರಿಯಾದ ರೀತಿಯಲ್ಲಿ ಕೋವಿಡ್‌ ಪರೀಕ್ಷೆಗಳನ್ನು ಮಾಡಿಸಿಲ್ಲ. ಜವಾಬ್ದಾರಿಯುತ ಅಧಿಕಾರಿಗಳು ಹಾಗೂ ಖಾಸಗಿ ಏಜೆನ್ಸಿಗಳು ಕನಿಷ್ಠ 1 ಲಕ್ಷ ನಕಲಿ ಫಲಿತಾಂಶಗಳನ್ನು ನೀಡಿವೆ ಎಂದು ಸರ್ಕಾರದ ವರದಿಯು ಕಂಡು ಹಿಡಿದಿದೆ ಎಂದು ಹೇಳಿದೆ.

new-york-times-published-the-news-of-corona-test-fraud-in-haridwar-kumbh-2021
ಹರಿದ್ವಾರದ ಕುಂಭಮೇಳದಲ್ಲಿ ಕೋವಿಡ್‌ ಪರೀಕ್ಷೆಯಲ್ಲಿ ವಂಚನೆ; ನ್ಯೂಯಾರ್ಕ್‌ ಟೈಮ್ಸ್‌ನಲ್ಲೂ ವರದಿ

ಕುಂಭಮೇಳವು ದೇಶಾದ್ಯಂತ ಕೋವಿಡ್‌ ಕೇಸ್‌ಗಳು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವ್ಯಾಪಕವಾಗಿ ನಂಬಲಾಗಿದೆ. ಇದಲ್ಲದೇ, ಈ ಸುದ್ದಿಯನ್ನು ಚೀನಾ, ಜಪಾನ್, ಯುಎಇ ಸೇರಿದಂತೆ ಹಲವು ದೇಶಗಳ ವೆಬ್‌ಸೈಟ್‌ಗಳಲ್ಲಿ ಚರ್ಚೆಯ ವಿಷಯವಾಗಿ ತೆಗೆದುಕೊಂಡಿವೆ ಎಂದು ಬರೆದುಕೊಂಡಿದೆ.

ಇದನ್ನೂ ಓದಿ: ಪ್ರಚೋದನಾತ್ಮಕ ಪೋಸ್ಟ್​: ನಟಿ ಸ್ವರಾ ಭಾಸ್ಕರ್, ಮನೀಶ್ ಮಹೇಶ್ವರಿ, ಅರ್ಫಾ ಖಾನಮ್ ವಿರುದ್ಧ ದೂರು

ಈಗ ಹರಿದ್ವಾರದ ಕುಂಭದಲ್ಲಿ ನಡೆದ ಕೋವಿಡ್‌ ಪರೀಕ್ಷೆ ವಂಚನೆ ಪ್ರಕರಣದ ಬಗ್ಗೆ ರಾಜ್ಯ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳಲು ಪ್ರಾರಂಭಿಸಿದೆ. ಈ ನಿಟ್ಟಿನಲ್ಲಿ ಹರಿದ್ವಾರ ಕೊಟ್ವಾಲಿಯಲ್ಲಿ ಸಿಎಂಒ ನೀಡಿದ ದೂರಿನ ಆಧಾರದ ಮೇಲೆ ಮ್ಯಾಕ್ಸ್ ಕಾರ್ಪೊರೇಟ್ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.

ಈ ವಿಷಯದಲ್ಲಿ ಕುಂಭಮೇಳ ಅಧಿಕಾರಿ ದೀಪಕ್ ರಾವತ್ ಕೂಡ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದು ಮಾತ್ರವಲ್ಲ, ಈ ವಂಚನೆಗೆ ಸಂಬಂಧಿಸಿದಂತೆ ಯಾವುದೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಬದಲು, ರಾಜಕೀಯವನ್ನು ಮಾಡಲಾಗುತ್ತಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ತನ್ನ ಅಂಕಣದಲ್ಲಿ ಬರೆದುಕೊಂಡಿದೆ ಎಂದು ವರದಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.