ವಾಷಿಂಗ್ಟನ್: ಅಮೆರಿಕ ಮೂಲದ ಪ್ರತಿಷ್ಠಿತ ದಿನಪತ್ರಿಕೆ 'ದಿ ನ್ಯೂಯಾರ್ಕ್ ಟೈಮ್ಸ್' ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಕಾಶ್ಮೀರದ ಕುರಿತು ತಪ್ಪಾದ ಜಾಹೀರಾತು ಪ್ರಕಟಿಸಿದೆ.
ಪಾಕಿಸ್ತಾನದ ಸುಳ್ಳು ನಿರೂಪಣೆಯ ಈ ಜಾಹೀರಾತಿನಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಕ್ರಿಶ್ಚಿಯನ್ನರ, ಹಿಂದೂಗಳ, ಶಿಯಾಗಳ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆಯು ನಿರ್ದಯವಾಗಿ ನಡೆಯುತ್ತಿದೆ ಎಂದು ಮುದ್ರಿಸಿದೆ. ಕೀನ್ಯಾ, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್‌ನಲ್ಲಿ ಕಚೇರಿ ಹೊಂದಿರುವ ಇಂಟರ್ನ್ಯಾಷನಲ್ ಹ್ಯುಮಾನಿಟೇರಿಯನ್ ಫೌಂಡೇಷನ್ ಪ್ರಾಯೋಜಿಸಿದೆ ಎಂದು ಪೂರ್ಣಪುಟದ ಜಾಹೀರಾತಿನಲ್ಲಿ ಉಲ್ಲೇಖವಾಗಿದೆ.
ಭಾರತದ ಕೇಂದ್ರ ಸರ್ಕಾರವು 370ನೇ ವಿಧಿಯನ್ನು ರದ್ದುಪಡಿಸಿದಾಗಿನಿಂದ ಕಾಶ್ಮೀರದಲ್ಲಿನ ಹಲವು ದಶಲಕ್ಷ ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಅದು ಹೇಳಿದೆ. ಆದರೆ, ವಾಸ್ತವದಲ್ಲಿ ಈ ಪ್ರದೇಶದಲ್ಲಿ ಸಂವಹನ ಬಳಕೆಗೆ ಮರು ಅವಕಾಶ ನೀಡಲಾಗಿದ್ದು, ಇಲ್ಲಿನ ವಾತಾವರಣ ಸಹಜ ಸ್ಥಿತಿಗೆ ಮರಳುತ್ತಿದೆ. ಇಂತಹ ವೇಳೆಯಲ್ಲಿ ವಾಸ್ತವಾಂಶಕ್ಕೆ ದೂರವಾದ ಜಾಹೀರಾತನ್ನು ದಿ ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದೆ. ಜಾಹೀರಾತಿನಲ್ಲಿನ ತಪ್ಪಾದ ನಿರೂಪಣೆಯು ಜಮ್ಮು ಮತ್ತು ಕಾಶ್ಮೀರ ಮತ್ತು ಭಾರತದ ಇತರ ಭಾಗಗಳಲ್ಲಿ ಪಾಕಿಸ್ತಾನ ಪ್ರಾಯೋಜಿಸಿದ್ದ ಭಯೋತ್ಪಾದನೆಯ ಕೃತ್ಯಗಳನ್ನು ಕಡೆಗಣಿಸಿರುವುದು ಸ್ಪಷ್ಟವಾಗಿದೆ.