ನ್ಯೂಯಾರ್ಕ್(ಅಮೆರಿಕ): ಸುಮಾರು 1 ಡಜನ್ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕ್ಯುಮೊ ಕೊನೆಗೂ ಬೆಲೆ ತೆತ್ತಿದ್ದಾರೆ. ಕ್ಯುಮೊ ಅವರು ಗವರ್ನರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
63 ವರ್ಷದ ಆಂಡ್ರ್ಯೂ ಕ್ಯುಮೊ ಉದ್ದೇಶಕಪೂರ್ವಕವಾಗಿಯೇ ಮಹಿಳೆಯರಿಗೆ ಅಗೌರವ ತೋರಿರುವ ಆರೋಪವನ್ನು ನಿರಾಕರಿಸಿದ್ದು, ಇದು ರಾಜಕೀಯ ಪ್ರೇರಿತ ಎಂದಿದ್ದಾರೆ. ನಾನು ಈಗ ಸಹಾಯ ಮಾಡುವ ಅತ್ಯುತ್ತಮ ಮಾರ್ಗವೆಂದರೆ ನಾನು ಪಕ್ಕಕ್ಕೆ ಸರಿದರೆ, ಸರ್ಕಾರವನ್ನು ಮರಳಿ ಪಡೆಯಲು ಅವಕಾಶ ನೀಡುವುದು ಎಂದಿದ್ದಾರೆ.
ಮೂರು ಅವಧಿಯ ಡೆಮಾಕ್ರಟಿಕ್ ಗವರ್ನರ್ ಕ್ಯುಮೊ ಅವರ ಈ ನಿರ್ಧಾರವು ಎರಡು ವಾರಗಳಲ್ಲಿ ಜಾರಿಗೆ ಬರಲಿದೆ. ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ನ್ಯೂಯಾರ್ಕ್‌ನ ಅಟಾರ್ನಿ ಜನರಲ್, ಕ್ಯುಮೊ ಅವರು ಕನಿಷ್ಠ 11 ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ವರದಿಯನ್ನು ನೀಡಿದ್ದರು.
ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ ಸಾಬೀತು: ಗವರ್ನರ್ ಕ್ಯುಮೊ ರಾಜೀನಾಮೆಗೆ ಬೈಡನ್ ಒತ್ತಾಯ
ಕಿರುಕುಳದ ಆರೋಪ ಮಾಡಿದ ವ್ಯಕ್ತಿಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿರುವುದು ಸಾಬೀತಾಗಿದೆ. ಇದರ ಬೆನ್ನಲ್ಲೇ ನ್ಯೂಯಾರ್ಕ್ ಗವರ್ನರ್ ರಾಜೀನಾಮೆ ನೀಡಿ ಎಂಬ ಒತ್ತಾಯಗಳು ಕೇಳಿ ಬಂದಿದ್ದವು. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಾಗೂ ಇತರ ಪಕ್ಷಗಳು ಸೇರಿದಂತೆ ಹಲವಾರು ಕಡೆಯಿಂದ ರಾಜೀನಾಮೆ ನೀಡುವ ಒತ್ತಡವನ್ನು ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕ್ಯುಮೊ ಎದುರಿಸಿದ್ದರು. ಇದೀಗ ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗಿಳಿದಿದ್ದಾರೆ.