ವಾಷಿಂಗ್ಟನ್: ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರ ಸರ್ಜನ್ ಜನರಲ್ ಡಾ.ವಿವೇಕ್ ಮೂರ್ತಿ, ಬ್ರಿಟನ್‌ನಲ್ಲಿ ವರದಿಯಾದ ಹೊಸ ಸ್ವರೂಪದ ಕೊರೊನಾ ವೈರಸ್ ಹೆಚ್ಚು ಮಾರಕವಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.
ರೂಪಾಂತರಗೊಂಡ ವೈರಸ್ನಿಂದ ಸೋಂಕು ಹೆಚ್ಚು ಹರಡುವಂತೆ ತೋರುತ್ತದೆಯಾದರೂ, ಇದು ಹೆಚ್ಚು ಮಾರಕ ವೈರಸ್ ಎಂಬುದಕ್ಕೆ ನಮ್ಮಲ್ಲಿ ಇನ್ನೂ ಪುರಾವೆಗಳಿಲ್ಲ ಎಂದು ಅವರು ಭಾನುವಾರ ಎನ್‌ಬಿಸಿ ನ್ಯೂಸ್‌ಗೆ ತಿಳಿಸಿದರು.
ಓದಿ: ರಾಷ್ಟ್ರೀಯ ಗಣಿತ ದಿನ: ಶ್ರೀನಿವಾಸ ರಾಮಾನುಜನ್ & ಈ ದಿನದ ಮಹತ್ವ
ಹಲವಾರು ದೇಶಗಳು ಬ್ರಿಟನ್ ಪ್ರಯಾಣ ಮತ್ತು ವಿಮಾನಗಳ ಮೇಲೆ ನಿರ್ಬಂಧಗಳನ್ನು ಘೋಷಿಸಿವೆ. ಹೊಸದಾಗಿ ರೂಪಾಂತರದ ಬಳಿಕ ಕೊರೊನಾ ವೈರಸ್ ಸೋಂಕು ದೇಶದ ಕೆಲವು ಭಾಗಗಳಲ್ಲಿ ಹೆಚ್ಚು ವೇಗವಾಗಿ ಹರಡುತ್ತಿದೆ. ಇದರ ಹರಡುವಿಕೆಯನ್ನು ತಡೆಯಲು ಈ ಹಿಂದಿನಂತೆಯೇ ಸ್ವಚ್ಛತೆ, ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಸಹಾಯಕವಾಗುತ್ತದೆ ಎಂದು ಡಾ.ಮೂರ್ತಿ ಹೇಳಿದರು.