ನ್ಯೂಯಾರ್ಕ್: ಮಲೇರಿಯಾದ ಹೊಸ ರೂಪಾಂತರಿ ರೋಗದ ವಿರುದ್ಧ ಹೋರಾಡುವ ದೇಶಗಳಲ್ಲಿ ಈಗಾಗಲೇ ಸಾಮಾನ್ಯವಾಗಿ ನೀಡುವ ಔಷಧಿಯ ಪ್ರತಿರೋಧವನ್ನು ಹೆಚ್ಚಿಸಿ, ಗರ್ಭಿಣಿಯರು ಮತ್ತು ಮಕ್ಕಳಲ್ಲಿ ಮಲೇರಿಯಾ ರೋಗವನ್ನು ತಡೆಗಟ್ಟಲು ಬಳಸಬಹುದು ಎಂದು ಹೊಸ ಅಧ್ಯಯನವೊಂದು ವರದಿ ಮಾಡಿದೆ.
ವಿವಿಧ ದೇಶಗಳಲ್ಲಿ ಈ ರೂಪಾಂತರಿ ಮಲೇರಿಯಾ ಕಾಣಿಸಿಕೊಂಡಿದೆ. ಈ ವೈರಸ್ ಸೋಂಕಿತ ಸೊಳ್ಳೆಗಳು ಆಹಾರಕ್ಕಾಗಿ ನಮಗೆ ಕಚ್ಚಿದಾಗ, ಅದು ರಕ್ತ ಹೀರುವಾಗ ನಮ್ಮ ದೇಹ ಪ್ರವೇಶಿಸುವ ವೈರಸ್ಗಳು ಮಲೇರಿಯಾಕ್ಕೆ ಕಾರಣವಾಗುತ್ತವೆ.
ಈ ರೂಪಾಂತರಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನಾವು ಅರ್ಥಮಾಡಿಕೊಂಡು ಅವುಗಳನ್ನು ಮಲೇರಿಯಾ ನೋಡಿಕೊಳ್ಳುವ ಕಾರ್ಯಕ್ರಮಗಳ ಭಾಗವಾಗಿ ಮೇಲ್ವಿಚಾರಣೆ ಮಾಡಬೇಕಾಗಿದೆ, ಎಂದು ಲಂಡನ್ ಸ್ಕೂಲ್ ಆಫ್ ಹೈಜೀನ್ ಅಂಡ್ ಟ್ರಾಪಿಕಲ್ ಮೆಡಿಸಿನ್ (ಎಲ್ಎಸ್ಹೆಚ್ಟಿಎಂ)ನ ಸಹ-ಲೇಖಕ ತಾನೆ ಕ್ಲಾರ್ಕ್ ಹೇಳಿದ್ದಾರೆ.
ಮಲೇರಿಯಾ ಮುಖ್ಯವಾಗಿ ಆಫ್ರಿಕಾದ ಉಪ - ಸಹರಾದ ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಪ್ರತಿವರ್ಷ ಸುಮಾರು 435,000 ಸಾವುಗಳಿಗೆ ಕಾರಣವಾಗುತ್ತಿದೆ.
ದೀರ್ಘಕಾಲದ ಜಾಗತಿಕ ಪ್ರತಿಕ್ರಿಯೆಯ ಹೊರತಾಗಿಯೂ, ಮಲೇರಿಯಾಕ್ಕೆ ಕಾರಣವಾಗುವ ಪರಾವಲಂಬಿ ಪ್ರಭೇದ ತಳಿಗಳ ಏರಿಕೆಯಿಂದಾಗಿ ರೋಗವನ್ನು ನಿಯಂತ್ರಿಸುವ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿದೆ.
ಇದನ್ನೂ ಓದಿ: ಪಾಕ್ನಲ್ಲಿ ಧ್ವಂಸಗೊಂಡ ಹಿಂದೂ ದೇವಾಲಯದ ಪುನರ್ ನಿರ್ಮಾಣ: ಸ್ಥಳೀಯ ಸರ್ಕಾರದ ಘೋಷಣೆ
ಈ ರೂಪಾಂತರಿ ಮಲೇರಿಯಾ ವೈರಸ್ ಎರಡು ಜೀನ್ಗಳಾಗಿ ರೂಪಾಂತರಗೊಂಡಿದೆ. ಪರಾವಲಂಬಿ ಪ್ಲಾಸ್ಮೋಡಿಯಂ ಫಾಲ್ಸಿಫಾರಂನಲ್ಲಿ ಇವು ಸಲ್ಫೋಡಾಕ್ಸೈನ್ ಪಿರಿಮೆಥಮೈನ್(ಎಸ್ಪಿ)ಗೆ ಪ್ರತಿರೋಧವನ್ನು ನೀಡುತ್ತವೆ. ಆದರೆ, ಇತ್ತೀಚೆಗೆ ಪ್ರತಿರೋಧಕ್ಕೆ ಸಂಬಂಧಿಸಿದ ರೂಪಾಂತರಿಗಳನ್ನು ಮೂರನೇ ಜೀನ್, ಪಿಎಫ್‌ಜಿಚ್ 1 ನಲ್ಲಿ ಕಂಡು ಹಿಡಿಯಲಾಯಿತು.
ಈ ಹೊಸ ರೂಪಾಂತರಗಳ ವ್ಯಾಪ್ತಿ ಮತ್ತು ಹರಡುವಿಕೆಯನ್ನು ಅರ್ಥಮಾಡಿಕೊಳ್ಳಲು, ಸಂಶೋಧಕರು ಮಲೇರಿಯಾ ಸಕ್ರಿಯವಾಗಿರುವ 29 ದೇಶಗಳಿಂದ ಸಂಗ್ರಹಿಸಿದ 4,134 ರಕ್ತದ ಮಾದರಿಗಳಿಂದ ಜೀನೋಮ್ ಅನುಕ್ರಮಗಳನ್ನು ವಿಶ್ಲೇಷಿಸಿದ್ದಾರೆ.
ಹೊಸ ರೂಪಾಂತರಗಳೊಂದಿಗೆ ಮಲೇರಿಯಾ ವೈರಸ್ ಸಂಖ್ಯೆಯಲ್ಲಿನ ಬೆಳವಣಿಗೆಯು ಸಂಬಂಧಿಸಿದೆ. ಏಕೆಂದರೆ ರೂಪಾಂತರಗಳು ಎಸ್‌ಪಿಗೆ ಪ್ರತಿರೋಧವನ್ನು ನೀಡುತ್ತವೆ ಹಾಗೂ ಹೊಸ ನಿರೋಧಕ ತಳಿಗಳ ವಿಕಾಸವನ್ನು ಪ್ರೋತ್ಸಾಹಿಸಬಹುದು ಎಂದು ಹೇಳಲಾಗಿದೆ.