ಕಾರ್ಸನ್ ಸಿಟಿ (ಯುಎಸ್ಎ): ನೆವಾಡಾ ಗವರ್ನರ್ ಸ್ಟೀವ್ ಸಿಸೊಲಾಕ್ ಅವರು ನವೆಂಬರ್ ಚುನಾವಣೆಗೆ ಮುಂಚಿತವಾಗಿ ರಾಜ್ಯದ ಎಲ್ಲ ಸಕ್ರಿಯ ಮತದಾರರ ಮತಪತ್ರಗಳನ್ನು ಮೇಲ್ ಮಾಡಲು ಅವಕಾಶ ಒದಗಿಸುವ ಶಾಸನಕ್ಕೆ ಸಹಿ ಹಾಕಿದ್ದಾರೆ.
ಗವರ್ನರ್ನ ಈ ಕ್ರಮವನ್ನು ಟೀಕಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದನ್ನು ತಡೆಯಲು ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.
"ಈ ಮಸೂದೆಯು ಚುನಾವಣಾ ಅಧಿಕಾರಿಗಳಿಗೆ ಈ ಕೊರೊನಾ ವೈರಸ್ ಸಂದರ್ಭಗಳಲ್ಲಿ ಸಾಧ್ಯವಾದಷ್ಟು ಸುರಕ್ಷತೆ ಒದಗಿಸುತ್ತದೆ" ಎಂದು ಪ್ರಜಾಪ್ರಭುತ್ವವಾದಿ ಸಿಸೋಲಾಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಯೋಜನೆಗೆ ಶಾಸಕಾಂಗದ ಮೂಲಕ ಒಪ್ಪಿಗೆ ದೊರಕಿದ ಬಳಿಕ ಟ್ರಂಪ್ ಅವರಿಂದ ಟೀಕೆಗೆ ಗುರಿಯಾಗಿದೆ. ಮೇಲ್ ಮತಪತ್ರಗಳು ಚುನಾವಣೆಯ ಸಮಗ್ರತೆಗೆ ಧಕ್ಕೆಯುಂಟು ಮಾಡುತ್ತವೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.