ETV Bharat / international

ಗುರುಗ್ರಹದ ಟ್ರೋಜನ್ ಕ್ಷುದ್ರಗಳ ಅಧ್ಯಯನ : ನಾಸಾದಿಂದ ‘ಲೂಸಿ’ ನೌಕೆ ಯಶಸ್ವಿ ಉಡಾವಣೆ

author img

By

Published : Oct 16, 2021, 5:25 PM IST

ಒಂದೊಂದು ಕ್ಷುದ್ರಗ್ರಹಗಳನ್ನು ತಲುಪಿದಾಗ ಲೂಸಿ ಸುಮಾರು 400 ಕಿಲೋ ಮೀಟರ್ ಮೇಲ್ಮೈನಲ್ಲಿ ಅವುಗಳ ಅಧ್ಯಯನ ನಡೆಸಲಿದೆ. ಶನಿ, ಯುರೇನಸ್, ನೆಫ್ಚೂನ್ ರಚನೆಯಿಂದ ಉಳಿದಿರುವ ಕಚ್ಚಾ ವಸ್ತುಗಳೇ ಈ ಕ್ಷುದ್ರಗ್ರಹಗಳು ಎಂದು ನಂಬಲಾಗಿದೆ. ಗುರು ಗ್ರಹಕ್ಕೆ ಅಂಟಿಕೊಂಡು ಸುಮಾರು 7000 ಟ್ರೋಜನ್ ಕ್ರುದ್ರಗ್ರಹಗಳಿವೆ ಎಂದು ಹೇಳಲಾಗಿದೆ. ಇವುಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ..

ಲೂಸಿ
ಲೂಸಿ

ವಾಷಿಂಗ್ಟನ್(ಅಮೆರಿಕ) : ಅತಿ ಹೆಚ್ಚು ಕ್ಷುದ್ರ ಗ್ರಹಗಳು ಇರುವುದು ಮಂಗಳ ಹಾಗೂ ಗುರು ಗ್ರಹಗಳ ನಡುವೆ. ಇವುಗಳ ಅಧ್ಯಯನ ನಡೆಸಲು ನಾಸಾ ನೌಕೆಯೊಂದನ್ನು ಕಳಿಸಿದೆ. ಗುರುಗ್ರಹದ ಟ್ರೋಜನ್ ಕ್ಷುದ್ರ ಗ್ರಹಗಳನ್ನು ಅಧ್ಯಯನ ಮಾಡಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಲೂಸಿ ಎಂಬ ನೌಕೆಯನ್ನು ಕಳಿಸಿದೆ. ಕೇಪ್ ಕ್ಯಾನ್‌ವೆರಲ್‌ನಿಂದ ಲೂಸಿ, ಅಟ್ಲಾಸ್ 5 ರಾಕೆಟ್ ಮೂಲಕ ಇಂದು ನಭಕ್ಕೆ ಚಿಮ್ಮಿದೆ.

ಲೂಸಿಯು ಸೌರಶಕ್ತಿ ಚಾಲಿತ ಬಾಹ್ಯಾಕಾಶ ನೌಕೆಯಾಗಿದೆ. ಈ ಹಿಂದಿನ ಎಲ್ಲ ಅಧ್ಯಯನಗಳಿಗಿಂತಲೂ ಹೆಚ್ಚು ಕ್ಷುದ್ರಗ್ರಹಗಳನ್ನು ಅಧ್ಯಯನ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

‘ಪ್ರತಿಯೊಂದು ಕ್ಷುದ್ರಗ್ರಹಗಳು ಸೌರಮಂಡಲದ ಕಥೆಯ ಒಂದೊಂದು ಭಾಗವನ್ನು ಒದಗಿಸುತ್ತವೆ. ಈಗ ಲೂಸಿ ಹೆಚ್ಚಿನ ನಿಖರ ಮಾಹಿತಿ ನೀಡಲು ಸಿದ್ಧವಾಗಿ ಹೊರಟಿದೆ’ ಎಂದು ನಾಸಾದ ಸಹಾಯಕ ಆಡಳಿತಾಧಿಕಾರಿ ಥಾಮಸ್ ಜುರ್ಬುಚೆನ್ ಅವರು ತಿಳಿಸಿದ್ದಾರೆ.

ಇದು 2025ರಲ್ಲಿ ಮೊದಲ ಬಾರಿಗೆ ಮಂಗಳ ಹಾಗೂ ಗುರುವಿನ ನಡುವಿನ ವಲಯದಲ್ಲಿರುವ ಡೊನಾಲ್ಡ್ ಜೋಹಾನ್ಸನ್ ಎಂಬ ಟ್ರೋಜನ್ ಕ್ಷುದ್ರಗ್ರಹಗಳನ್ನು ಅಧ್ಯಯನ ಮಾಡಲಿದೆ. 2027 ರಿಂದ 2033ರವರೆಗೆ ಲೂಸಿ ಒಟ್ಟು 7 ಟ್ರೋಜನ್ ಕ್ಷುದ್ರಗ್ರಹಗಳನ್ನು ಅಧ್ಯಯನ ಮಾಡಲಿದೆ. ಇದು 12 ವರ್ಷ ಕಾರ್ಯಾಚರಣೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ.

ಒಂದೊಂದು ಕ್ಷುದ್ರಗ್ರಹಗಳನ್ನು ತಲುಪಿದಾಗ ಲೂಸಿ ಸುಮಾರು 400 ಕಿಲೋ ಮೀಟರ್ ಮೇಲ್ಮೈನಲ್ಲಿ ಅವುಗಳ ಅಧ್ಯಯನ ನಡೆಸಲಿದೆ. ಶನಿ, ಯುರೇನಸ್, ನೆಫ್ಚೂನ್ ರಚನೆಯಿಂದ ಉಳಿದಿರುವ ಕಚ್ಚಾ ವಸ್ತುಗಳೇ ಈ ಕ್ಷುದ್ರಗ್ರಹಗಳು ಎಂದು ನಂಬಲಾಗಿದೆ. ಗುರು ಗ್ರಹಕ್ಕೆ ಅಂಟಿಕೊಂಡು ಸುಮಾರು 7000 ಟ್ರೋಜನ್ ಕ್ರುದ್ರಗ್ರಹಗಳಿವೆ ಎಂದು ಹೇಳಲಾಗಿದೆ. ಇವುಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.

‘ಟ್ರೋಜನ್‌ಗಳು ನಿಜವಾಗಿಯೂ ಆಶ್ಚರ್ಯಕರವಾಗಿವೆ. ಅವುಗಳು ಕೆಲವು ಕೆಂಪು ಬಣ್ಣದಲ್ಲಿದ್ದರೆ, ಇನ್ನೂ ಕೆಲವು ಬೂದು ಬಣ್ಣದಲ್ಲಿವೆ’ ಎಂದು ಥಾಮಸ್ ಜುರ್ಬುಚೆನ್ ಹೇಳಿದ್ದಾರೆ. 1974ರಲ್ಲಿ ಇಥಿಯೋಪಿಯಾದಲ್ಲಿ ಆದಿಮಾನವನ ಪಳಿಯುಳಿಕೆ ದೊರಕಿತ್ತು.

ಅದು ಮಾನವನ ವಿಕಾಸದ ಮೇಲೆ ಬೆಳಕು ಚೆಲ್ಲಲು ಪ್ರಮುಖ ಮೂಲವಾಗಿದೆ. ಅದಕ್ಕೆ ಲೂಸಿ ಎಂದು ಹೆಸರಿಡಲಾಗಿತ್ತು. ಇದರ ಸ್ಮರಣಾರ್ಥವೇ ಇದೀಗ ಕ್ಷುದ್ರಗ್ರಹಗಳ ಅಧ್ಯಯನ ಮಾಡಲು ತೆರಳುತ್ತಿರುವ ನೌಕೆಗೆ ನಾಸಾ ಲೂಸಿ ಎಂದು ಹೆಸರಿಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.