ವಾಷಿಂಗ್ಟನ್(ಅಮೆರಿಕಾ): ನಾಸಾ ತನ್ನ ಸಂಸ್ಥೆಯಲ್ಲಿ ಇಂಟರ್ನ್ಶಿಪ್ ಮಾಡಲು ಆಸಕ್ತಿ ಇರುವವರಿಗಾಗಿ ಅರ್ಜಿ ಆಹ್ವಾನಿಸಿದ್ದು, ಈಗಾಗಲೇ ಇಂಟರ್ನ್ಶಿಪ್ ಮುಗಿಸಿರುವವರ ಕೆಲವು ಫೋಟೋಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದೆ. ಇದು ಜನಾಂಗೀಯ ವೈವಿಧ್ಯತೆಯನ್ನು ಎತ್ತಿ ಹಿಡಿದಿದೆ ಎಂದು ಹೇಳಲಾಗುತ್ತಿದೆ.
-
Today's the day: applications for fall NASA internships are due!
— NASA (@NASA) July 9, 2021 " class="align-text-top noRightClick twitterSection" data="
Are you ready? Visit @NASAInterns and apply at: https://t.co/s69uwyR1LJ pic.twitter.com/CVwFJGYbms
">Today's the day: applications for fall NASA internships are due!
— NASA (@NASA) July 9, 2021
Are you ready? Visit @NASAInterns and apply at: https://t.co/s69uwyR1LJ pic.twitter.com/CVwFJGYbmsToday's the day: applications for fall NASA internships are due!
— NASA (@NASA) July 9, 2021
Are you ready? Visit @NASAInterns and apply at: https://t.co/s69uwyR1LJ pic.twitter.com/CVwFJGYbms
ನಾಲ್ವರ ಫೋಟೋಗಳನ್ನು ಟ್ವಿಟರ್ನಲ್ಲಿ ನಾಸಾ ಹಂಚಿಕೊಂಡಿದ್ದು, ಅದರಲ್ಲಿ ಭಾರತೀಯ ಮೂಲದ ಯುವತಿ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಈ ಫೋಟೋದಲ್ಲಿ ಯುವತಿ ನಾಸಾ ಲೋಗೋ ಇರುವ ಸ್ವೆಟರ್ ಹಾಕಿರುವುದಲ್ಲದೇ, ತನ್ನ ಲ್ಯಾಪ್ಟಾಪ್ ಹಿಂಭಾಗದಲ್ಲಿ ಹಿಂದೂ ಧರ್ಮದ ಆರಾಧ್ಯ ದೇವತೆಗಳಾದ ದುರ್ಗಾದೇವಿ, ಸರಸ್ವತಿ, ಲಕ್ಷ್ಮೀ ದೇವತೆಗಳ ಮೂರ್ತಿಗಳಿವೆ.
ಈ ಫೋಟೋವನ್ನು ನಾಸಾ ಹಂಚಿಕೊಂಡ ನಂತರ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಯಾಗಿದೆ. ಕೆಲವರು ಹಳೆಯ ಸಂಪ್ರದಾಯಗಳಿಗೆ ಅಂಟಿಕೊಂಡಿರುವ ಯುವತಿಯನ್ನು ನಾಸಾದಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಟೀಕಿಸಿದ್ರೆ, ಮತ್ತೆ ಕೆಲವರು ನಾಸಾ ಕಲ್ಪಿಸಿರುವ ವೈವಿಧ್ಯತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತೀಯ ಮೂಲದ ಮತ್ತು ಅಪಾರ ನೆಟ್ಟಿಗರು ಈ ಫೋಟೋಗೆ ಪ್ರಶಂಸೆ ವ್ಯಕ್ತಪಡಿಸಿದ್ದು, ಯುವತಿಗೆ ಬೆಂಬಲ ಸೂಚಿಸಿದ್ದಾರೆ.