ವಾಷಿಂಗ್ಟನ್( ಅಮೆರಿಕ): ಉತ್ತರ ಕೊರಿಯಾದ ಸರ್ಕಾರದೊಂದಿಗೆ ಸಂಬಂಧ ಹೊಂದಿರುವ ಹ್ಯಾಕರ್‌ಗಳು, ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮ ಮುಂದುವರೆಸಲು ತನ್ನ ಜೊತೆ ಇರುವ ಹಣದ ಕೊರತೆಯಿರುವ ದೇಶಕ್ಕೆ ಧನಸಹಾಯ ನೀಡಲು ಜಾಗತಿಕವಾಗಿ ಎಟಿಎಂಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಅಮೆರಿಕದ ಫೆಡರಲ್ ಏಜೆನ್ಸಿಗಳು ಎಚ್ಚರಿಸಿವೆ.
ಉತ್ತರ ಕೊರಿಯಾದ ಒಂದು ಹ್ಯಾಕಿಂಗ್ ತಂಡವು ಮೂರು ಡಜನ್‌ಗಿಂತಲೂ ಹೆಚ್ಚು ದೇಶಗಳಲ್ಲಿ ಸುಮಾರು 2 ಬಿಲಿಯನ್ ಎಟಿಎಂಗಳಿಂದ ಹಣ ಕದಿಯಲು ಪ್ರಯತ್ನಿಸಿದೆ. ಎಟಿಎಂಗಳನ್ನು ಬರಿದಾಗಿಸಿ ಹಾಗೂ ಮೋಸದ ಹಣ ವರ್ಗಾವಣೆಗೆ ಚಾಲನೆ ನೀಡುವ ಮೂಲಕ ಹ್ಯಾಕರ್‌ಗಳು ಜಗತ್ತಿನಾದ್ಯಂತ ಬ್ಯಾಂಕ್ಗಳನ್ನು ದೋಚಲು ಪ್ರಯತ್ನಿಸುತ್ತಿದ್ದಾರೆ ಎಂದು ಅಮೆರಿಕ ಮೂಲದ ಪತ್ರಿಕೆಯೊಂದು ವರದಿ ಮಾಡಿದೆ.
ಈ ಅಭಿಯಾನವು ಸ್ಪಿಯರ್ - ಫಿಶಿಂಗ್ ತರಹದ ದಾಳಿಗಳನ್ನು ಒಳಗೊಂಡಿರುತ್ತದೆ. ಅಂದರೆ, ಅದು ಕಂಪ್ಯೂಟರ್‌ಗೆ ವೈರಸ್ಗಳನ್ನು ತಗುಲಿಸಲು ಮೋಸದ ಇಮೇಲ್ ಅನ್ನು ಬಳಸುತ್ತದೆ. ಅಲ್ಲಿ ಪಾಸ್‌ವರ್ಡ್ ಹಾಗೂ ಇತರ ಮಾಹಿತಿಯನ್ನು ಪಡೆದುಕೊಳ್ಳುತ್ತದೆ.
ಕಳೆದ ಫೆಬ್ರವರಿಯಿಂದ ಉತ್ತರ ಕೊರಿಯಾವು ಹಲವಾರು ದೇಶಗಳ ಬ್ಯಾಂಕ್ ಹಾಗೂ ಎಟಿಎಂಗಳನ್ನು ಟಾರ್ಗೆಟ್ ಮಾಡಿದೆ. ಅಲ್ಲಿಂದ ಅಂತಾರಾಷ್ಟ್ರೀಯ ಹಣ ವರ್ಗಾವಣೆ ಹಾಗೂ ಎಟಿಎಂಗಳಿಂದ ಮೋಸದಿಂದ ಹಣ ಎಗರಿಸುವ ಉಪಾಯ ಹೂಡಿದೆ, ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ ) ಮತ್ತು ಯುಎಸ್ ಸೈಬರ್ ಕಮಾಂಡ್ ತಿಳಿಸಿದೆ.
ಕೊರಿಯಾದ ಈ ಮೋಸದ ಜಾಲವು ವಿಶ್ವದ ನಾನಾ ಕಡೆಗಳ ಹಣಕಾಸು ಸಂಸ್ಥೆಗಳಲ್ಲಿ, ಹಾಗೂ ಬ್ಯಾಂಕುಗಳಲ್ಲಿ ನಿರ್ಣಾಯಕ ಕಂಪ್ಯೂಟರ್ ವ್ಯವಸ್ಥೆಗಳನ್ನು ಹ್ಯಾಕ್ ಮಾಡಿ ನಿರ್ವಹಿಸುವ ಸಾಧ್ಯತೆ ಇದೆ.
ಉತ್ತರ ಕೊರಿಯಾದ ಸರ್ಕಾರಿ ಸೈಬರ್ ಹ್ಯಾಕರ್‌ಗಳು ಎಟಿಎಂಗಳ ನಗದನ್ನು ಮಾಯ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಆ ಯೋಜನೆಯನ್ನು ಫಾಸ್ಟ್ ಕ್ಯಾಶ್ 2.0; ನಾರ್ತ್ ಕೊರಿಯಾಸ್ ಬೀಗಲ್ಬಾಯ್ಸ್ ರಾಬಿಂಗ್ ಬ್ಯಾಂಕ್ಸ್ ಎನ್ನಲಾಗಿದೆ. ಹಾಗಾಗಿ ಅಮೆರಿಕಾದ ಏಜೆನ್ಸಿಗಳು ತಾಂತ್ರಿಕ ಎಚ್ಚರಿಕೆಯನ್ನು ನೀಡಿದ್ದು, ಹುಷಾರ್ ಆಗಿರುವಂತೆ ಕರೆ ಗಂಟೆ ಬಾರಿಸಿದೆ.