ವಾಷಿಂಗ್ಟನ್: ಮಂಗಳ ಗ್ರಹದ ಮೇಲೆ ದೊಡ್ಡ ಪ್ರಮಾಣದಲ್ಲಿರುವ ಲಾವಾಗಳನ್ನು ಹರಡುವ ಜ್ವಾಲಾಮುಖಿಗಳು ಒಂದೇ ರೀತಿಯದ್ದಲ್ಲ ಎಂದು ವಿಜ್ಞಾನಿಗಳು ಶಂಕಿಸಿದ್ದಾರೆ.
ಮಂಗಳ ಗ್ರಹದ ಉತ್ತರ ಗೋಳಾರ್ಧದಲ್ಲಿರುವ ಪರ್ವತ ಶಂಕುಗಳು ಮಣ್ಣಿನ ಜ್ವಾಲಾಮುಖಿಗಳಿಂದಾಗಿ ನಿರ್ಮಾಣವಾಗಿರಬಹುದು. ಆದರೂ, ಇದುವರೆಗೂ ಮಂಗಳ ಗ್ರಹದ ಮೇಲ್ಮೈಯಲ್ಲಿ ನೀರು ಇರುವ ಕುರಿತು ಸಂಶೋಧಕರಿಗೆ ಸ್ಪಷ್ಟತೆ ಇಲ್ಲ.
ಆದರೆ ಇದೀಗ ಜರ್ಮನ್ ಏರೋಸ್ಪೇಸ್ ಸೆಂಟರ್ ಮಂಗಳದಲ್ಲಿ ಲಾವಾದ ರೀತಿಯ ಮಣ್ಣಿನ ಹರಿವು ಇದೆ ಎಂದು ತಿಳಿಸಿದೆ. ಈ ಮಣ್ಣು ಭೂಮಿಯಲ್ಲಿರುವ ಲಾವಾಕ್ಕೆ ಹೋಲುತ್ತದೆ ಎಂದು ತಿಳಿದು ಬಂದಿದೆ.
ಮಂಗಳ ಗ್ರಹದಲ್ಲಿರುವ ಲಾವಾ ರೀತಿಯ ಮಣ್ಣನ ಹರಿವು ಜ್ವಾಲಾಮುಖಿಗಳಿಂದ ಉಂಟಾಗಿದೆ ಎಂಬ ಮಾಹಿತಿಯನ್ನು ನೇಚರ್ ಜಿಯೋಸೈನ್ಸ್ ಎಂಬ ಜರ್ನಲ್ನಲ್ಲಿ ಪ್ರಕಟಗೊಳಿಸಲಾಗಿದೆ.