ETV Bharat / international

ವಸತಿ ನಿಲಯಕ್ಕೆ ಬೆಂಕಿ: ತಾಯಿ, ನಾಲ್ವರು ಹೆಣ್ಣು ಮಕ್ಕಳು ಸಜೀವ ದಹನ - ಐವರು ಹೆಣ್ಣು ಮಕ್ಕಳು ಸಜೀವ ದಹನ

ಕಟ್ಟಡದಲ್ಲಿ ದಟ್ಟ ಹೊಗೆಯ ವಾಸನೆ ಬಡಿದಿದೆ. ಅಲ್ಲಿನ ನಿವಾಸಿ ತಕ್ಷಣ ಅವರ ಮನೆಯ ಬಾಗಿಲನ್ನು ಯಾರೋ ಬಡಿದ ಕಾರಣ ಎಚ್ಚೆತ್ತ ಅವರು ಕಟ್ಟಡದಿಂದ ಹೊರ ಬಂದಿದ್ದಾರೆ. ಅದಾಗಲೇ ಮೇಲ್ಮಹಡಿಗೆ ಬೆಂಕಿ ಸಂಪೂರ್ಣ ಆವರಿಸಿಕೊಂಡಿತ್ತು. ಈ ದುರ್ಘಟನೆಯಲ್ಲಿ ತಾಯಿ ಹಾಗೂ ನಾಲ್ವರು ಮಕ್ಕಳು ಸಜೀವ ದಹನವಾಗಿದ್ದಾರೆ.

fire
ವಸತಿ ನಿಲಯಕ್ಕೆ ಬೆಂಕಿ
author img

By

Published : Jan 28, 2021, 5:33 PM IST

ಡೆಸ್ ಪ್ಲೇನ್ಸ್(ಯುಎಸ್​): ಶಿಕಾಗೊ ಉಪನಗರದ ಡೆಸ್ ಪ್ಲೇನ್ಸ್‌ನಲ್ಲಿರುವ ಮನೆಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ತಾಯಿ ಮತ್ತು ನಾಲ್ವರು ಹೆಣ್ಣುಮಕ್ಕಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಎರಡು ಅಂತಸ್ತಿನ ಅಪಾರ್ಟ್ಮೆಂಟ್​ಗೆ ಬೆಂಕಿ ಬಿದ್ದ ಪರಿಣಾಮ ಒಂದೇ ಕುಟುಂಬದ ಐದು ಮಂದಿ ಸಾವನ್ನಪ್ಪಿದ್ದಾರೆ. ರೆನಾಟಾ ಎಸ್ಪಿನೋಸಾ (6), ಜೆನೆಸಿಸ್ ಎಸ್ಪಿನೋಸಾ (5), ಆಲಿಝೋನ್ ಎಸ್ಪಿನೋಸಾ (3), ಗ್ರೇಸ್ ಎಸ್ಪಿನೋಸಾ (1), ಹಾಗೂ ಅವರ ತಾಯಿ ಸಿಟಾಹಾಲಿ ಜಾಮಿಯೊಡೊವ್ (25) ಮೃತಪಟ್ಟವರು. ಈ ಸಮಯದಲ್ಲಿ ಮಕ್ಕಳ ತಂದೆ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.

ಆದ್ರೆ ಈ ಅವಘಡಕ್ಕೆ ನಿಖರ ಕಾರಣ ಏನೆಂಬುದನ್ನು ರಾಜ್ಯ ಫೈರ್ ಮಾರ್ಷಲ್ ಇನ್ನೂ ಬಹಿರಂಗಪಡಿಸಿಲ್ಲ. ಅದೇ ಕಟ್ಟಡದ ನಿವಾಸಿ ಪ್ಯಾಬೆಲ್ ಮರ್ರೆರೊ ಹೇಳುವಂತೆ, ಅವರು ಮನೆಯಲ್ಲಿದ್ದಾಗ ದಟ್ಟ ಹೊಗೆಯ ವಾಸನೆ ಬಂದಿದೆ. ತಕ್ಷಣ ಅವರ ಮನೆಯ ಬಾಗಿಲನ್ನು ಯಾರೋ ಬಡಿದಿದ್ದಾರೆ. ಆದ್ರೆ ಅವರಿಗೆ ಮನೆಯಿಂದ ಆಚೆ ಬರಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: ಬಾಗ್ದಾದ್‌ ಅವಳಿ ಭಯೋತ್ಪಾದಕ ದಾಳಿ ಹಿನ್ನೆಲೆ: ಅನೇಕ ಶಂಕಿತರ ಬಂಧನ

ತಕ್ಷಣವೇ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು. ಆದರೆ ಕಟ್ಟಡಕ್ಕೆ ಒಳ ಹೋಗುವ ಮುಖ್ಯ ಬಾಗಿಲು ಮುಚ್ಚಿತ್ತು. ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಪ್ರಾಯಾಸಪಟ್ಟು ಸಿಬ್ಬಂದಿ ಒಳಗೆ ತೆರಳಿದ್ದಾರೆ. ಅಷ್ಟರಲ್ಲಾಗಲೇ ಬೆಂಕಿಯ ಧಗೆಗೆ ಐದು ಜೀವಗಳು ಬೆಂದಿದ್ದವು ಎಂದು ಅಗ್ನಿಶಾಮಕ ದಳದ ಮುಖ್ಯಸ್ಥ ಆಂಡರ್ಸನ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.