ಮೆಕ್ಸಿಕೋ: ಉತ್ತರ ಗಡಿಯ ಬಳಿ 9 ಯುಎಸ್-ಮೆಕ್ಸಿಕನ್ ನಾಗರಿಕರನ್ನು 2019 ರಲ್ಲಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ಬಂಧಿಸಿದ್ದೇವೆ ಎಂದು ಮೆಕ್ಸಿಕನ್ ಪ್ರಾಸಿಕ್ಯೂಟರ್‌ಗಳು ನಿನ್ನೆ ತಿಳಿಸಿದ್ದಾರೆ.
ವಿಲ್ಬರ್ಟ್ ಮತ್ತು ಟಾಮ್ಸ್ ಬಂಧಿತ ಆರೋಪಿಗಳು. ಇಬ್ಬರನ್ನು ನ್ಯೂ ಮೆಕ್ಸಿಕೋದ ಗಡಿಯ ಸಮೀಪವಿರುವ ನ್ಯೂವಾಸ್ ಕಾಸಾ ಗ್ರಾಂಡೆಸ್ ಪಟ್ಟಣದಲ್ಲಿ ಬಂಧಿಸಲಾಗಿದೆ. ಈ ಮೂಲಕ ಬಂಧಿಸಲ್ಪಟ್ಟ ಶಂಕಿತರ ಸಂಖ್ಯೆ 20 ಕ್ಕೆ ಏರಿಕೆಯಾಗಿದೆ.
2019 ರ ನವೆಂಬರ್ 4 ರಂದು ಶಂಕಿತ ಡ್ರಗ್ಸ್ ಗ್ಯಾಂಗ್ ಹಂತಕರು ವಿಸ್ತೃತ ಲ್ಯಾಂಗ್‌ಫೋರ್ಡ್, ಲೆಬಾರ್ನ್ ಮತ್ತು ಮಿಲ್ಲರ್ ಕುಟುಂಬಗಳ ಮೂವರು ಮಹಿಳೆಯರು ಮತ್ತು ಆರು ಮಕ್ಕಳನ್ನು ಹೊಂಚುಹಾಕಿ ಹತ್ಯೆ ಮಾಡಿದ್ದರು.