ನವದೆಹಲಿ: ಮರ್ಸಿಡಿಸ್ ಬೆಂಜ್ ತನ್ನ ಇಕಾಲ್ ಸಾಫ್ಟ್‌ವೇರ್‌ನಲ್ಲಿನ ವೈಫಲ್ಯದಿಂದಾಗಿ 1.29 ಮಿಲಿಯನ್ ವಾಹನಗಳನ್ನು ಮರು ಪಡೆಯುತ್ತಿದೆ. ಈ ವೈಫಲ್ಯದಿಂದಾಗಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ವಾಹನದ ಸರಿಯಾದ ಸ್ಥಳವನ್ನು ತಿಳಿಯಲು ಅಸಾಧ್ಯವಾಗಬಹುದು ಎಂಬ ಕಾರಣಕ್ಕೆ ವಾಹನಗಳನ್ನು ಮರು ಪಡೆಯುತ್ತಿದೆ.
ಈ ಸಮಸ್ಯೆಯಿಂದ ಉಂಟಾದ ಯಾವುದೇ ಹಾನಿ ಕುರಿತು ನಮಗೆ ತಿಳಿದು ಬಂದಿಲ್ಲ. ಮಾರಾಟಗಾರರ ಬಳಿ ಉಚಿತ ಸಾಫ್ಟ್‌ವೇರ್ ನವೀಕರಣ ಒದಗಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ವಾಹನ ತಯಾರಕರು ಹೇಳಿರುವುದಾಗಿ ದಿ ವರ್ಜ್ ವರದಿ ತಿಳಿಸಿದೆ.
ಮರುಪಡೆಯುವಿಕೆ ಏಪ್ರಿಲ್ 6ರಿಂದ ಪ್ರಾರಂಭವಾಗಲಿದ್ದು, ಇದು 2016ರಿಂದ 2021ರವರೆಗೆ ಮಾರಾಟವಾದ ವಾಹನಗಳನ್ನು ಒಳಗೊಂಡಿದೆ.
ಸಿಎಲ್‌ಎ-ಕ್ಲಾಸ್, ಜಿಎಲ್‌ಎ-ಕ್ಲಾಸ್, ಜಿಎಲ್‌ಇ-ಕ್ಲಾಸ್, ಜಿಎಲ್‌ಎಸ್-ಕ್ಲಾಸ್, ಎಸ್‌ಎಲ್‌ಸಿ-ಕ್ಲಾಸ್, ಎ-ಕ್ಲಾಸ್, ಜಿಟಿ-ಕ್ಲಾಸ್, ಸಿಸಿಲಾಸ್, ಇ-ಕ್ಲಾಸ್, ಎಸ್-ಕ್ಲಾಸ್ , ಸಿಎಲ್‌ಎಸ್-ಕ್ಲಾಸ್, ಎಸ್‌ಎಲ್-ಕ್ಲಾಸ್, ಬಿ-ಕ್ಲಾಸ್, ಜಿಎಲ್‌ಬಿ-ಕ್ಲಾಸ್, ಜಿಎಲ್‌ಸಿ-ಕ್ಲಾಸ್ ಮತ್ತು ಜಿ-ಕ್ಲಾಸ್ ವಾಹನಗಳನ್ನ ಒಳಗೊಂಡಿದೆ.