ETV Bharat / international

ಲಾಸ್‌ ಏಂಜಲೀಸ್‌ನಲ್ಲಿ ವಿಮಾನದಿಂದ ಹಾರಿದ ವ್ಯಕ್ತಿಗೆ 20 ವರ್ಷ ಜೈಲು ಶಿಕ್ಷೆ - ವಿಮಾನ

ವಿಮಾನದಿಂದ ಹಾರಿ ಕಾಲಿಗೆ ಗಾಯ ಮಾಡಿಕೊಂಡಿರುವ ಮೆಕ್ಸಿಕೊದ ಲೂಯಿಸ್‌ ಆಂಟೋನಿಯೊ ವಿಕ್ಟೋರಿಯಾ ಡೊಮಿಂಗ್ಯೂಜ್ ಸದ್ಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

Man faces 20 years in prison after jumping from plane in Los Angeles
ಲಾಸ್‌ ಏಂಜಲೀಸ್‌ನಲ್ಲಿ ವಿಮಾನದಿಂದ ಹಾರಿದ ವ್ಯಕ್ತಿಗೆ 20 ವರ್ಷ ಜೈಲು ಶಿಕ್ಷೆ...!
author img

By

Published : Jun 29, 2021, 10:41 AM IST

ಲಾಸ್‌ ಏಂಜಲೀಸ್: ನಿಲ್ದಾಣದಲ್ಲಿ ತುರ್ತು ಬಾಗಿಲು ತೆರೆದು ವಿಮಾನದಿಂದ ಹಾರಲು ಪ್ರಯತ್ನಿಸಿದ ಪ್ರಯಾಣಿಕನೊಬ್ಬ ಬಾರಿ ಬೆಲೆ ತೆತ್ತಿದ್ದಾನೆ. ಈ ವ್ಯಕ್ತಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ದಟ್ಟವಾಗಿದೆ.

ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೆಕ್ಸಿಕೊ ಪ್ರಜೆಯಾದ ಲೂಯಿಸ್‌ ಆಂಟೋನಿಯೊ ವಿಕ್ಟೋರಿಯಾ ಡೊಮಿಂಗ್ಯೂಜ್ ಎಂಬ ಪ್ರಯಾಣಿಕ ಕಳೆದ ಶುಕ್ರವಾರ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆದು ಮೇಲಿಂದ ಹಾರಿದ್ದಾನೆ. ಈ ವೇಳೆ ಆತನ ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿತ್ತು.

ಸದ್ಯ ಗಾಯಾಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ. ವಿಮಾನದ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿಕೊಂಡ ಆರೋಪದ ಮೇಲೆ ಈತನನ್ನು ಫೆಡರಲ್ ನ್ಯಾಯಾಲಯಕ್ಕೆ ಹಾಜರುಪಡಿಸುವ ನಿರೀಕ್ಷೆಯಿದೆ. ಆರೋಪಿ ಅಪರಾಧಿಯೆಂದು ಸಾಬೀತಾದರೆ 20 ವರ್ಷಗಳ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ.

ಇದನ್ನೂ ಓದಿ: ಪರಿಸರಸ್ನೇಹಿ ವಾಹನ ತಯಾರಿಕೆಗೆ ವೇಗ: 10 ಎಲೆಕ್ಟ್ರಿಕ್‌ ವಾಹನಗಳ ರಸ್ತೆಗಿಳಿಸಲಿದೆ ಟಾಟಾ ಮೋಟರ್ಸ್

ಮೆಕ್ಸಿಕೊದ ಕ್ಯಾಬೊ ಸ್ಯಾನ್ ಲ್ಯೂಕಾಸ್‌ನಿಂದ ಆರೋಪಿ ಮಂಗಳವಾರ ಲಾಸ್ ಏಂಜಲೀಸ್‌ಗೆ ಬಂದಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಾಲ್ಟ್ ಲೇಕ್ ಸಿಟಿಗೆ ಹೋಗಬೇಕಿದ್ದ ಆಂಟೋನಿಯಾ, ಇಲ್ಲಿಗೆ ಸಂಪರ್ಕ ಕಲ್ಪಿಸಲು ವಿಮಾನ ಸಂಪರ್ಕವಿಲ್ಲದ ಕಾರಣ ಲಾಸ್‌ ಏಂಜಲೀಸ್‌ನ ಹೋಟೆಲ್‌ವೊಂದರಲ್ಲಿ ತಂಗಿದ್ದ. ಅಲ್ಲಿ ಚೆನ್ನಾಗಿ ಮದ್ಯ ಸೇವಿಸಿದ್ದಾನೆ. ಮರು ದಿನವೂ ಹೆಚ್ಚಾಗಿ ಧೂಮಪಾನ ಮಾಡಿದ್ದನು ಎಂದು ದೂರಿನಲ್ಲಿ ಹೇಳಲಾಗಿದೆ.

ಒಟ್ಟಿನಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ವ್ಯಕ್ತಿ ವಿಮಾನದಿಂದ ಹಾರುವ ಮೂಲಕ ನಿಯಮಗಳನ್ನು ಉಲ್ಲಂಘಿಸಿರುವುದಕ್ಕೆ ಕಠಿಣ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.