ವಾಷಿಂಗ್ಟನ್: ದೇಶದ ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಅಧಿಕಾರ ಸ್ವೀಕರಿಸಿದ್ದು, ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ ಎಂದು ಶ್ವೇತಭವನ ತಿಳಿಸಿದೆ.
ಅಮೆರಿಕದ 46ನೇ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಮತ್ತು ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಇದೇ 20ರಂದು ಪದಗ್ರಹಣ ಮಾಡಿದ್ದಾರೆ.
ಅಮೆರಿಕದ 46 ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಅಧ್ಯಕ್ಷ ಜೋ ಬೈಡನ್ ಅವರು, ಉಭಯ ದೇಶಗಳ ನಡುವಿನ ಉಭಯಪಕ್ಷೀಯ ಯಶಸ್ವಿ ಸಂಬಂಧವನ್ನು ಗೌರವಿಸುತ್ತಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ (Jen Psaki) ಸುದ್ದಿಗಾರರಿಗೆ ತಿಳಿಸಿದರು. ಜೊತೆಗೆ ಉಪಾದ್ಯಕ್ಷೆ ಕಮಲಾ ಹ್ಯಾರಿಸ್ ಅವರಿಂದ ಉಭಯ ದೇಶಗಳ ಸಂಬಂಧ ಮತ್ತಷ್ಟು ಗಟ್ಟಿಗೊಂಡಿದೆ, ಇನ್ನೂ ಭದ್ರವಾಗಲಿದೆ ಎಂದು ಜೆನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿಯನ್ನೂ ಓದಿ: "ಸಹಕಾರಕ್ಕೆ ಧನ್ಯವಾದ": ಯುಎಸ್ ಪ್ರಥಮ ಮಹಿಳೆ ಜಿಲ್ ಬೈಡನ್ ಹೇಳಿದ್ದು ಯಾರಿಗೆ!
ನೂತನ ಅಧ್ಯಕ್ಷ ಜೋ ಬೈಡನ್ ಹಲವು ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಭಾರತದ ಮೌಲ್ಯ, ಉಭಯಪಕ್ಷೀಯ ಯಶಸ್ವಿ ಸಂಬಂಧವನ್ನು ಗೌರವಿಸುತ್ತಾರೆ. ಇದನ್ನು ಹೀಗೆ ಮುಂದುವರೆಸುತ್ತಾರೆಂದು ಕಾಣುತ್ತಿದೆ ಎಂದು ತಿಳಿಸಿದರು.