ವಾಷಿಂಗ್ಟನ್: ಅಮೆರಿಕದ 46ನೇ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಇಂದು ಪದಗ್ರಹಣ ಮಾಡಲಿದ್ದು, ಉಪಾಧ್ಯಕ್ಷೆಯಾಗಿ ಭಾರತದ ಮೂಲಕದ ಕಮಲಾ ಹ್ಯಾರಿಸ್ ಪದಗ್ರಹಣ ಮಾಡಲಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 10ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ.
ಭಾರಿ ಭದ್ರತೆ ನಡುವೆ ಈ ಕಾರ್ಯಕ್ರಮ ನಡೆಯಲಿದ್ದು, ಕ್ಯಾಪಿಟಲ್ ಹಿಲ್ನ ಬಳಿ ನಡೆಯುವ ಸಮಾರಂಭದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಬೈಡನ್ ಅವರಿಗೆ ಪ್ರತಿಜ್ಞಾವಿಧಿ ಬೋಧನೆ ಮಾಡಲಿದ್ದಾರೆ. ವಿಶೇಷವೆಂದರೆ ಅಮೆರಿಕದ ಮೊಟ್ಟ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಈ ವೇಳೆ ಕೊರೊನಾ ಹಾವಳಿಯಿಂದ ಸಾವನ್ನಪ್ಪಿರುವ ಜನರಿಗೆ ಬೈಡನ್ ಸಂತಾಪ ಸೂಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
-
US President-elect Joe Biden (in file pic) has departed from Wilmington for Washington DC for his presidential inauguration tomorrow. pic.twitter.com/usqIJHRVme
— ANI (@ANI) January 19, 2021 " class="align-text-top noRightClick twitterSection" data="
">US President-elect Joe Biden (in file pic) has departed from Wilmington for Washington DC for his presidential inauguration tomorrow. pic.twitter.com/usqIJHRVme
— ANI (@ANI) January 19, 2021US President-elect Joe Biden (in file pic) has departed from Wilmington for Washington DC for his presidential inauguration tomorrow. pic.twitter.com/usqIJHRVme
— ANI (@ANI) January 19, 2021
ಓದಿ: ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ.. ಟ್ರಂಪ್ ಒಬ್ಬರೇ ಗೈರಾಗ್ತಿರೋದಲ್ಲ, ಈ ಹಿಂದೆಯೂ..
ಡೊನಾಲ್ಡ್ ಟ್ರಂಪ್ ಅನೇಕ ಬೆಂಬಲಿಗರೊಂದಿಗೆ ಅಮೆರಿಕ ಸಂಸತ್ ಬಳಿ ಸಂಘರ್ಷ ಸಹ ನಡೆಸಿದ್ದರು. ಹೀಗಾಗಿ ಸ್ಥಳದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಕಳೆದ ನವೆಂಬರ್ ತಿಂಗಳಲ್ಲಿ ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಬೈಡನ್ 306 ಮತ ಪಡೆದುಕೊಂಡಿದ್ದರೆ, ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ 232 ಮತ ಪಡೆದುಕೊಂಡಿದ್ದರು.
ಬೈಡನ್ ತಮ್ಮ ಕುಟುಂಬದ 127 ವರ್ಷಗಳ ಹಳೆಯ ಬೈಬಲ್ ಮೇಲೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಬೈಡನ್ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ತಾವು ತೆರಳುವುದಿಲ್ಲ ಎಂದು ಈಗಾಗಲೇ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.