ವಾಷಿಂಗ್ಟನ್: ಅಮೆರಿಕದ 46ನೇ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣ ಮಾಡಿದ್ದು, ಅಲ್ಲಿನ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಅಮೆರಿಕ ಇತಿಹಾಸದಲ್ಲಿ ಅತ್ಯಂತ ಹಿರಿಯ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಬೈಡನ್, ತಮ್ಮ ಕುಟುಂಬದ 127 ವರ್ಷದ ಹಳೆಯ ಬೈಬಲ್ ಮೇಲೆ ಕೈ ಇಟ್ಟು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಈ ವೇಳೆ ಜನರನ್ನುದ್ದೇಶಿಸಿ ಮಾತನಾಡಿದ ಬೈಡನ್, ಇದು ಅಮೆರಿಕದ ದಿನ. ನಾನು ಎಲ್ಲರಿಗೂ ಅಧ್ಯಕ್ಷನಾಗಿದ್ದೇನೆ. ನನ್ನನ್ನು ನೀವೂ ಒಪ್ಪಬೇಕಿಲ್ಲ. ನನ್ನ ಜೊತೆಗೆ ಬದುಕಿ, ಅದೇ ಪ್ರಜಾಪ್ರಭುತ್ವ ಎಂದು ಹೇಳಿದರು.
ಕೊರೊನಾ ವೈರಸ್ ಹಾವಳಿಯಿಂದಾಗಿ ಉದ್ಯೋಗವಕಾಶ ಕಡಿಮೆಯಾಗಿವೆ. ಈ ಹಿಂದೆ 2ನೇ ಮಹಾಯುದ್ಧದ ಸಮಯದಲ್ಲಿ ಇಂತಹ ವೈರಸ್ ದಾಳಿ ಮಾಡಿತ್ತು. ಇದೀಗ ಈ ಸಮಸ್ಯೆ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಅವಶ್ಯಕತೆ ಇದೆ ಎಂದರು. ಬಿಳಿಯರು ಶ್ರೇಷ್ಠರು ಎಂಬ ಭ್ರಮೆಗೆ ಅವಕಾಶವಿಲ್ಲ. ಅಮೆರಿಕದ ಎಲ್ಲ ಪ್ರಜೆಗಳನ್ನ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಹಿಂಸಾಚಾರ ಬೇಡ ಎಂದ ಅವರು, ಅಮೆರಿಕ ಕ್ಯಾಪಿಟಲ್ ಮೇಲಿನ ದಾಳಿಯನ್ನ ಖಂಡಿಸಿದರು.
ಓದಿ: 'ನಮ್ಮೊಂದಿಗಿನ ಎಲ್ಲಾ ಮೈತ್ರಿಗಳನ್ನು ಸರಿಪಡಿಸುತ್ತೇವೆ': ಬೈಡನ್ ಒಗ್ಗಟ್ಟಿನ ಮಂತ್ರ
ಅಮೆರಿಕ ಇತಿಹಾಸದಲ್ಲೇ ಉಪಾಧ್ಯಕ್ಷೆಯಾಗಿ ಮಹಿಳೆಯೋರ್ವರು ಅಧಿಕಾರ ವಹಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಸದ್ಯದ ಸ್ಥಿತಿಗಿಂತಲೂ ನಾವು ಉತ್ತಮವಾದ ಕೆಲಸ ಮಾಡಬೇಕಾಗಿದೆ ಎಂದರು. ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಅಗತ್ಯವಾಗಿದ್ದು, ಶಾಂತಿ- ಸಮೃದ್ಧಿಗೋಸ್ಕರ ಎಲ್ಲರೂ ಬದ್ಧರಾಗಿರೋಣ. ನಮ್ಮೊಂದಿಗಿನ ಎಲ್ಲ ಮೈತ್ರಿ ಸರಿಪಡಿಸುತ್ತೇನೆ ಎಂದ ಅವರು, ಜಗತ್ತಿನ ಜೊತೆಗೆ ಮತ್ತೆ ಸಂಬಂಧ ಪುನನಿರ್ಮಾಣಕ್ಕಾಗಿ ಯತ್ನಿಸುವೆ ಎಂದರು.
ಹಳೆಯ ಸವಾಲು ಮರೆತು, ಭವಿಷ್ಯದ ಸವಾಲುಗಳ ಬಗ್ಗೆ ಚಿಂತಿಸುತ್ತೇವೆ .ಅಮೆರಿಕದ ಪ್ರಜಾಪ್ರಭುತ್ವ ಮೌಲ್ಯವನ್ನು ಎತ್ತಿ ಹೇಳಿದೆ. ಪ್ರಜಾಪ್ರಭುತ್ವ ಅಮೂಲ್ಯವಾದದು ಎಂದು ಅವರು ತಿಳಿಸಿದರು. ಯಾವುದೇ ಕಾರಣಕ್ಕೂ ನಮ್ಮಲ್ಲಿ ಒಡಕುಬೇಡ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮಾ, ಜಾರ್ಜ್ ಡಬ್ಲೂ ಬುಷ್ ಮತ್ತು ಬಿಲ್ ಕ್ಲಿಂಟನ್ ಉಪಸ್ಥಿತರಿದ್ದರು.