ETV Bharat / international

ಪೆಗಾಸಸ್ ವಿವಾದ : ಫ್ರಾನ್ಸ್​ಗೆ ರಹಸ್ಯ ಭೇಟಿ ನೀಡಿದ ಇಸ್ರೇಲಿ ಭದ್ರತಾ ಸಲಹೆಗಾರ

ಫ್ರಾನ್ಸ್​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಇತರ ಹಿರಿಯ ಫ್ರೆಂಚ್ ಅಧಿಕಾರಿಗಳ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಿರುವುದಾಗಿ ವರದಿಗಳು ಬಂದ ನಂತರ ಇಸ್ರೇಲ್ ಮತ್ತು ಫ್ರಾನ್ಸ್ ಸಂಬಂಧ ಸ್ವಲ್ಪ ಹದಗೆಟ್ಟಂತೆ ಕಂಡುಬಂದಿತ್ತು.

author img

By

Published : Oct 22, 2021, 5:12 AM IST

Israeli NSC head secretly visits Paris to defuse tensions over Pegasus spyware
ಪೆಗಾಸಸ್ ವಿವಾದ : ಫ್ರಾನ್ಸ್​ಗೆ ರಹಸ್ಯ ಭೇಟಿ ನೀಡಿದ ಇಸ್ರೇಲಿ ಭದ್ರತಾ ಸಲಹೆಗಾರ

ಟೆಲ್ ಅವಿವ್, ಇಸ್ರೇಲ್ : ಜಾಗತಿಕ ಮಟ್ಟದಲ್ಲಿ ಒಂದು ರೀತಿಯ ಆತಂಕ ಮತ್ತು ಅಭದ್ರತೆಯ ವಾತಾವರಣವನ್ನು ಸೃಷ್ಟಿಸಿದ್ದ ಸ್ಫೈವೇರ್ ಸಾಫ್ಟ್​ವೇರ್​​ ಪೆಗಾಸಸ್ ವಿಚಾರವಾಗಿ ಇಸ್ರೇಲ್​ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಇಯಾಲ್ ಹುಟಾಲಾ ರಹಸ್ಯವಾಗಿ ಫ್ರಾನ್ಸ್​ಗೆ ಭೇಟಿ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇಸ್ರೇಲ್​ನ ಎನ್​ಎಸ್​ಓ ಗ್ರೂಪ್ ಅಭಿವೃದ್ಧಿ ಪಡಿಸಿರುವ ಪೆಗಾಸಸ್ ಸ್ಪೈವೇರ್​ ಫ್ರಾನ್ಸ್​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಇತರ ಹಿರಿಯ ಫ್ರೆಂಚ್ ಅಧಿಕಾರಿಗಳ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದವು.

ಈ ವರದಿಗಳ ಬೆನ್ನಲ್ಲೇ ಫ್ರಾನ್ಸ್ ಸರ್ಕಾರ ಇಸ್ರೇಲ್​ನೊಂದಿಗಿ ಕೆಲವು ರಾಜತಾಂತ್ರಿಕ ಸಂಬಂಧಗಳನ್ನು ಸ್ಥಗಿತಗೊಳಿಸಿತ್ತು. ಪೆಗಾಸಸ್ ಸ್ಪೈವೇರ್ ವಿರುದ್ಧ ಫ್ರಾನ್ಸ್​ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ವಿಚಾರವಾಗಿಯೇ ಇಯಾಲ್ ಹುಟಾಲಾ ಫ್ರಾನ್ಸ್​​ಗೆ ಭೇಟಿ ನೀಡಿದ್ದು, ಅಲ್ಲಿನ ಸರ್ಕಾರಕ್ಕೆ ವಿವರಣೆಯನ್ನು ನೀಡಲಿದ್ದಾರೆ. ಜೊತೆಗೆ ಈಗ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸುವ ಪ್ರಸ್ತಾಪವನ್ನು ಮಂಡಿಸಿದ್ದಾರೆ ಎಂದು ಇಸ್ರೇಲಿ ಸುದ್ದಿ ಸಂಸ್ಥೆ ವಾಲ್ಲಾ ವರದಿ ಮಾಡಿದೆ.

ಈ ಮೊದಲು ಭಯೋತ್ಪಾದಕರ ಮೇಲೆ ನಿಗಾವಹಿಸಲು ಬಳಕೆಯಾಗುತ್ತಿದ್ದ ಸ್ಪೈವೇರ್ ಅಪ್ಲಿಕೇಷನ್, ಕೆಲವು ತಿಂಗಳ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಭಯೋತ್ಪಾದಕರು ಮಾತ್ರವಲ್ಲದೇ ರಾಜಕಾರಣಿಗಳು, ಉದ್ಯಮಿಗಳು, ಪತ್ರಕರ್ತರ ಮೇಲೆ ಕಣ್ಣಿಡಲು ಈ ಸಾಫ್ಟ್​ವೇರ್ ಬಳಸಿಕೊಳ್ಳಲಾಗುತ್ತಿದೆ ಎಂದ ಗಂಭೀರವಾದ ಆರೋಪ ಈ ಸಾಫ್ಟ್​ವೇರ್​ ಮೇಲೆ ಬಂದಿತ್ತು.

ಕೆಲವು ದಿನಗಳ ಹಿಂದೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ವಿರುದ್ಧವೂ ಈ ಸಾಫ್ಟ್​ವೇರ್ ಬಳಕೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ, ಫ್ರಾನ್ಸ್ ಮತ್ತು ಇಸ್ರೇಲ್​ ನಡುವಿನ ಸಂಬಂಧ ಸ್ವಲ್ಪ ಮಟ್ಟಿಗೆ ಹದಗೆಟ್ಟಿತ್ತು. ಇದೇ ಕಾರಣದಿಂದ ಹದಗೆಟ್ಟ ಸಂಬಂಧವನ್ನು ಮತ್ತೆ ಹಳಿಗೆ ತರುವ ಸಲುವಾಗಿ ಇಸ್ರೇಲ್​ನ ರಾಷ್ರೀಯ ಭದ್ರತಾ ಸಲಹೆಗಾರರು ಫ್ರಾನ್ಸ್​ಗೆ ಭೇಟಿ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: Warning.. ಚೀನಾದಲ್ಲಿ ಕೋವಿಡ್ ಉಲ್ಬಣ: ಶಾಲಾ - ಕಾಲೇಜು​​ ಬಂದ್​, ವಿಮಾನಯಾನ ಸೇವೆ ಸ್ಥಗಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.