ETV Bharat / international

ಮಂಗಳನಲ್ಲಿ ಮೂಡಿತೇ ಮಳೆಬಿಲ್ಲು.! ಈ ಬಗ್ಗೆ ನಾಸಾ ಹೇಳಿದ್ದೇನು? - ಮಂಗಳನಲ್ಲಿ ಮಳೆಬಿಲ್ಲು ಸುದ್ದಿ

ನಾಸಾ ಕೆಂಪು ಗ್ರಹದ ಮೇಲ್ಮೈಯನ ಅದ್ಭುತ ಚಿತ್ರವನ್ನು ಬಿಡುಗಡೆ ಮಾಡಿದೆ. ಇದು ನೆಟ್ಟಿಗರ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಮಂಗಳನ ಮೇಲ್ಮೈನಲ್ಲಿ ಮಳೆಬಿಲ್ಲಿನಂತಹ ಚಾಪು ಮೂಡಿದೆ. ನಾಸಾ ಪರ್ಸೆವೆರೆನ್ಸ್ ಮಾರ್ಸ್ ರೋವರ್‌ನ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಸಂಕ್ಷಿಪ್ತ ವಿವರಣೆಯನ್ನೂ ಹಂಚಿಕೊಂಡಿದೆ.

NASA tweet about rainbow on Mars
ಮಂಗಳನಲ್ಲಿ ಮಳೆಬಿಲ್ಲು
author img

By

Published : Apr 7, 2021, 3:08 PM IST

ವಾಷಿಂಗ್ಟನ್(ಅಮೆರಿಕ): ನಮ್ಮ ಭೂಮಿಯ ಮೇಲೆ ಮಳೆಬಿಲ್ಲು ಮೂಡುವುದು ಸರ್ವೇ ಸಾಮಾನ್ಯ. ಆದರೆ ಇದು ನಮ್ಮ ಸೌರವ್ಯೂಹದ ಬೇರೆ ಯಾವುದಾದರೂ ಗ್ರಹದಲ್ಲಿ ಕಂಡುಬಂದರೆ, ಅಚ್ಚರಿ ಆಗೋದಂತೂ ಸತ್ಯ.

ಭಾನುವಾರ, ನಾಸಾ ಕೆಂಪು ಗ್ರಹದ ಮೇಲ್ಮೈಯನ ಅದ್ಭುತ ಚಿತ್ರವನ್ನು ಬಿಡುಗಡೆ ಮಾಡಿದೆ. ಇದು ನೆಟ್ಟಿಗರ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಮಂಗಳನ ಮೇಲ್ಮೈನಲ್ಲಿ ಮಳೆಬಿಲ್ಲಿನಂತಹ ಚಾಪು ಮೂಡಿದೆ. ಆದರೆ, ಇದು ಮಳೆಬಿಲ್ಲು ಹೌದಾ? ಮಂಗಳನಲ್ಲೂ ಮಳೆಬಿಲ್ಲು ಮೂಡುತ್ತದಾ ಎಂಬ ಪ್ರಶ್ನೆಗಳನ್ನು ಹುಟ್ಟಿಹಾಕಿದೆ.

ಪ್ರಪಂಚದಾದ್ಯಂತ ಲಕ್ಷಾಂತರ ಜನರು ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸಿದ್ದರಿಂದ, ನಾಸಾ ಪರ್ಸೆವೆರೆನ್ಸ್ ಮಾರ್ಸ್ ರೋವರ್‌ನ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಸಂಕ್ಷಿಪ್ತ ವಿವರಣೆಯನ್ನೂ ಹಂಚಿಕೊಂಡಿದೆ.

ಇದನ್ನೂ ಓದಿ: ಮಂಗಳನಲ್ಲಿ ನಾಸಾದ ಮಾರ್ಸ್ ಹೆಲಿಕಾಪ್ಟರ್ ಮೊದಲ ರಾತ್ರಿ

"ಇದು ಮಳೆಬಿಲ್ಲು ಅಲ್ಲ. ಆದರೆ ಮಸೂರದ ಭುಗಿಲು. ಮಂಗಳನಲ್ಲಿ ಮಳೆಬಿಲ್ಲು ಮೂಡುವುದು ಸಾಧ್ಯವಿಲ್ಲ. ಕ್ಯಾಮೆರಾ ಲೆನ್ಸ್‌ನಿಂದ ಛಾಯಾಚಿತ್ರಗಳನ್ನು ಕ್ಲಿಕ್ ಮಾಡುವಾಗ ಲೆನ್ಸ್​ನ ಪ್ರತಿಫಲಿಸುವಿಕೆಯಿಂದ ಉಂಟಾಗಿರುವ ಆಕೃತಿ ಇದು. ದುಂಡಗಿನ ನೀರಿನ ಹನಿಗಳಿಂದ ಪ್ರತಿಫಲಿಸುವ ಬೆಳಕಿನಿಂದ ಮಳೆಬಿಲ್ಲು ರಚನೆಯಾಗುತ್ತದೆ. ಆದರೆ ಇಲ್ಲಿ ಸಾಂದ್ರೀಕರಿಸಲು ಸಾಕಷ್ಟು ನೀರು ಇಲ್ಲ ಮತ್ತು ಇದು ವಾತಾವರಣದಲ್ಲಿನ ದ್ರವ ನೀರು ತುಂಬಾ ತಂಪಾಗಿರುತ್ತದೆ, ಇದು ಲೆನ್ಸ್​ ಫ್ಲೇರ್​" ಎಂದು ನಾಸಾ ಸ್ಪಷ್ಟನೆಯನ್ನೂ ನೀಡಿದೆ. ಇದೇನೇ ಇರಲಿ ಮಂಗಳನಲ್ಲಿ ನೀರು ಇರಲಿ ಎಂಬುದು ಕೋಟ್ಯಂತರ ಬಾಹ್ಯಾಕಾಶ ಆಸಕ್ತರ ಆಶಯವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.