ETV Bharat / international

ಮೆಕ್ಸಿಕೋದಲ್ಲಿ ಡ್ರಗ್‌ ಗ್ಯಾಂಗ್‌ ಗುಂಡಿನ ದಾಳಿ; ಭಾರತ ಮೂಲದ ಟ್ರಾವೆಲ್ ಬ್ಲಾಗರ್ ಅಂಜಲಿ ರಯೋಟ್ ಸಾವು

ಮೆಕ್ಸಿಕೋದ ತುಳುಂ ನಗರದ ರೆಸಾರ್ಟ್‌ನಲ್ಲಿ ಕಳೆದ ಬುಧವಾರ ನಡೆದ ಗುಂಡಿನ ದಾಳಿಯಲ್ಲಿ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿ ವಾಸಿಸುತ್ತಿದ್ದ ಭಾರತ ಮೂಲದ ಟ್ರಾವೆಲ್ ಬ್ಲಾಗರ್ ಅಂಜಲಿ ರಯೋಟ್ ಕೂಡ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

indian travel blogger among 2 killed in mexicos tulum
ಮೆಕ್ಸಿಕೋದಲ್ಲಿ ಡ್ರಗ್‌ ಗ್ಯಾಂಗ್‌ ಗುಂಡಿನ ದಾಳಿ ಪ್ರಕರಣ; ಭಾರತ ಮೂಲದ ಟ್ರಾವೆಲ್ ಬ್ಲಾಗರ್ ಅಂಜಲಿ ರಯೋಟ್ ಸಾವು
author img

By

Published : Oct 23, 2021, 12:53 PM IST

ಮೆಕ್ಸಿಕೋ(ಅಮೆರಿಕ): ಕೆರಿಬಿಯನ್ ಕರಾವಳಿ ಪ್ರದೇಶದ ತುಳುಂ ರೆಸಾರ್ಟ್‌ನಲ್ಲಿ ಡ್ರಗ್ ಗ್ಯಾಂಗ್ ನಡೆಸಿದ್ದ ಗುಂಡಿನ ದಾಳಿಯಲ್ಲಿ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿರುವ ಭಾರತೀಯ ಮೂಲದ ಟ್ರಾವೆಲ್ ಬ್ಲಾಗರ್ ಅಂಜಲಿ ರಯೋಟ್ ಕೂಡ ಮೃತಪಟ್ಟಿದ್ದಾರೆ. ಈ ಅಂಜಲಿ ಸೇರಿ ದಾಳಿಯಲ್ಲಿ ಇಬ್ಬರು ವಿದೇಶಿ ಪ್ರವಾಸಿಗರು ಮೃತಪಟ್ಟಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಕ್ವಿಂಟಾನಾ ರೂ ಅಧಿಕಾರಿಗಳು, ಮೃತಪಟ್ಟ ಇಬ್ಬರು ಮಹಿಳೆಯರಲ್ಲಿ ಒಬ್ಬರು ಅಂಜಲಿ ರಯೋಟ್‌ ಎಂದು ಸ್ಪಷ್ಟಪಡಿಸಿದ್ದಾರೆ. ಅಂಜಲಿ ರಯೋಟ್‌ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಎರಡು ದಿನಗಳ ಹಿಂದೆ ತುಳುಂನಲ್ಲಿರುವ ಕಡಲತೀರದಲ್ಲಿ ನಗುತ್ತಾ ಓಡಾಡುತ್ತಿದ್ದ ಪೋಸ್ಟ್ ಹಾಕಲಾಗಿತ್ತು. ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿರುವ ಇವರು ಹಿಮಾಚಲ ಪ್ರದೇಶದ ಟ್ರಾವೆಲ್ ಬ್ಲಾಗರ್ ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಕೊಲೆಯಾದ ಮತ್ತೊಬ್ಬ ಮಹಿಳೆಯನ್ನು ಜರ್ಮನ್‌ನ ಜೆನ್ನಿಫರ್ ಹೆನ್ಜೋಲ್ಡ್ ಎಂದು ಗುರುತಿಸಲಾಗಿದೆ. ಆದರೆ ಈಕೆಯ ಊರಿನ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.

ತುಳುಂನ ಬೀದಿ ಬದಿಯ ಹೋಟೆಲ್‌ನ ಹೊರಗಡೆ ಬುಧವಾರ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಇತರ ಮೂವರು ವಿದೇಶಿ ಪ್ರವಾಸಿಗರು ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರು ಜರ್ಮನ್ ವ್ಯಕ್ತಿಗಳು ಹಾಗೂ ಓರ್ವ ಡಚ್ ಮಹಿಳೆ ಸೇರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.