ETV Bharat / international

'ಭಾರತದ ಆರ್ಥಿಕತೆ 2019 ರಲ್ಲಿ ಹಠಾತ್ ಕುಸಿತ ಅನುಭವಿಸಿತು, ಇದು ಆರ್ಥಿಕ ಹಿಂಜರಿತವಲ್ಲ'

ಜಿಎಸ್​ಟಿಯಲ್ಲಿನ ಸುಧಾರಣೆ, ನೋಟು ಅಮಾನ್ಯೀಕರಣದಂತಹ ಕೆಲವು ಸಂಗತಿಗಳಿಂದ ಭಾರತವು 2019ರಲ್ಲಿ ಹಠಾತ್ ಆರ್ಥಿಕ ಕುಸಿತವನ್ನು ಅನುಭವಿಸಿತು. ಆದರೆ ಇದನ್ನು ಆರ್ಥಿಕ ಹಿಂಜರಿತವಲ್ಲ ಎಂದು ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ ಹೇಳಿದ್ದಾರೆ.

Indian economy experienced abrupt slowdown in 2019
ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ
author img

By

Published : Feb 1, 2020, 10:38 AM IST

Updated : Feb 1, 2020, 11:09 AM IST

ವಾಷಿಂಗ್ಟನ್​(ಅಮೆರಿಕ): ಜಿಎಸ್​ಟಿಯಲ್ಲಿನ ಸುಧಾರಣೆ, ನೋಟು ಅಮಾನ್ಯೀಕರಣದಂತಹ ಕೆಲವು ಸಂಗತಿಗಳಿಂದ ಭಾರತವು 2019ರಲ್ಲಿ ಹಠಾತ್ ಆರ್ಥಿಕ ಕುಸಿತ ಅನುಭವಿಸಿತು. ಆದರೆ, ಇದನ್ನು ಆರ್ಥಿಕ ಹಿಂಜರಿತವಲ್ಲ ಎಂದು ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ ಹೇಳಿದ್ದಾರೆ.

ಭಾರತದ ಆರ್ಥಿಕತೆ 2019 ರಲ್ಲಿ ಹಠಾತ್ ಕುಸಿತವನ್ನು ಅನುಭವಿಸಿದೆ. ಇದು 2020 ರಲ್ಲಿ ಶೇ 5.8 (ಬೆಳವಣಿಗೆಯ ದರ) ಮತ್ತು ನಂತರ 2021 ರಲ್ಲಿ ಶೇ 6.5 ಕ್ಕೆ ಏರಿಕೆಯಾಗಬಹುದೆಂದು ನಾವು ಭಾವಿಸುತ್ತೇವೆ ಎಂದರು.

ಈ ಆರ್ಥಿಕ ಮಂದಗತಿಗೆ ಮುಖ್ಯ ಕಾರಣ ನಾನ್​-ಬ್ಯಾಂಕಿಂಗ್ ಹಣಕಾಸು ಸಂಸ್ಥೆಗಳು ಪ್ರಕ್ಷುಬ್ಧತೆ ಅನುಭವಿಸುತ್ತಿರುವುದು. ಭಾರತವು ಕೆಲವು ಪ್ರಮುಖ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದು, ಇವು ದೀರ್ಘಾವಧಿಯವರೆಗೆ ದೇಶಕ್ಕೆ ಪ್ರಯೋಜನಕಾರಿಯಾಗಬಹುದು. ಆದರೆ, ಅವು ಅಲ್ಪಾವಧಿಯ ಪರಿಣಾಮವನ್ನು ಬೀರುತ್ತವೆ ಎಂದು ಕ್ರಿಸ್ಟಲಿನಾ ಅಭಿಪ್ರಾಯಪಟ್ಟಿದ್ದಾರೆ.

ಉದಾಹರಣೆಗೆ, ಏಕೀಕೃತ ತೆರಿಗೆ ವ್ಯವಸ್ಥೆ ಮತ್ತು ನೋಟು ಅಮಾನ್ಯೀಕರಣ. ಇವುಗಳು ಕಾಲಾನಂತರದಲ್ಲಿ ದೇಶಕ್ಕೆ ಪ್ರಯೋಜನಕಾರಿಯಾದವು. ಆದರೆ, ಅವು ಅಲ್ಪಾವಧಿಯಲ್ಲಿ ಆರ್ಥಿಕತೆಗೆ ಧಕ್ಕೆ ಉಂಟುಮಾಡುತ್ತವೆ ಎಂದರು.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಹೇಗೆ ಮತ್ತು ಯಾವೆಲ್ಲ ಅಂಶಗಳೊಂದಿಗೆ ಬಜೆಟ್​ ಮಂಡಿಸುತ್ತಾರೆ ಎಂದು ಕಾದು ನೋಡಬೇಕಿದೆ. ಐಎಂಎಫ್ (ಅಂತಾರಾಷ್ಟ್ರೀಯ ಹಣಕಾಸು ನಿಧಿ) ಭಾರತದ ಬಗ್ಗೆ ಆಶಾವಾದಿಯಾಗಿದೆ ಎಂದು ಹೇಳಿದ್ದಾರೆ.

ಐಎಂಎಫ್ ವ್ಯವಸ್ಥಾಪಕ ನಿರ್ದೇಶಕರು, ಪ್ರಸ್ತುತ ಆರ್ಥಿಕ ಕುಸಿತವನ್ನು ಆರ್ಥಿಕ ಹಿಂಜರಿತ ಎಂದು ಬಣ್ಣಿಸಲು ಸಾಧ್ಯವಿಲ್ಲ. ಆದರೆ ಇದು ಗಮನಾರ್ಹ ಮಂದಗತಿಯಾಗಿದೆ, ಆರ್ಥಿಕ ಹಿಂಜರಿತವಲ್ಲ ಎಂದರು.

ಉತ್ತಮವಾದ ಆರ್ಥಿಕ ಮೂಲಭೂತ ಅಂಶಗಳನ್ನು ಪಡೆಯಲು ಭಾರತ ಏನು ಮಾಡುತ್ತದೆ ಎಂಬುದನ್ನು ನೋಡಲು ಐಎಂಎಫ್ ಉತ್ಸುಕವಾಗಿದೆ. ಭಾರತಕ್ಕೆ ಮುಖ್ಯವಾದ ಒಂದು ವಿಷಯವೆಂದರೆ ಬಜೆಟ್ ಆದಾಯವು ಗುರಿಗಿಂತ ಕಡಿಮೆಯಾಗಿದೆ. ಅದು ದೇಶಕ್ಕೆ ತಿಳಿದಿದೆ. ಹಣಕಾಸು ಸಚಿವರಿಗೆ ಅದು ತಿಳಿದಿದೆ. ಅವರು ಬಜೆಟ್ ಆದಾಯ ಸಂಗ್ರಹಣೆಯನ್ನು ಹೆಚ್ಚಿಸಬೇಕಾಗಿರುವುದರಿಂದ ತಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸಬಹುದು ಎಂದು ಸಲಹೆ ನೀಡಿದರು.

Last Updated : Feb 1, 2020, 11:09 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.