ETV Bharat / international

"ಅಮೆರಿಕವನ್ನ ಭಾರತೀಯ ಮೂಲದವರು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ": ಜೋ ಬೈಡನ್ - ಅನಿವಾಸಿ ಭಾರತೀಯರು ಸಂಬಂಧಿತ ಸುದ್ದಿ

ಅಮೆರಿಕವನ್ನ ಭಾರತೀಯ-ಅಮೆರಿಕನ್ನರು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ ಎಂದು ಯುಎಸ್​ ಅಧ್ಯಕ್ಷ ಜೋ ಬೈಡನ್ ನಾಡೆ ವಿಜ್ಞಾನಿಗಳೊಂದಿಗಿನ ವಾಸ್ತವಿಕ ಸಂವಾದದಲ್ಲಿ ಹೇಳಿದರು.

Indian-Americans
ಜೋ ಬೈಡನ್​ ಸರ್ಕಾರದಲ್ಲಿ ಭಾರತೀಯರು
author img

By

Published : Mar 5, 2021, 10:05 AM IST

ವಾಷಿಂಗ್ಟನ್: ಭಾರತೀಯ-ಅಮೆರಿಕನ್ನರು ಆಡಳಿತದಲ್ಲಿ ಹೆಚ್ಚಿನ ಸ್ಥಾನ ಪಡೆಯುತ್ತಿದ್ದಾರೆ. ಈ ಮೂಲಕ ದೇಶವನ್ನು ಅವರು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ ಎಂದು ಯುಎಸ್​ ಅಧ್ಯಕ್ಷ ಜೋ ಬೈಡನ್​ ಹೇಳಿದ್ದಾರೆ.

ಬೈಡನ್ ತಮ್ಮ ಭಾಷಣ ಬರಹಗಾರರಿಂದ ಹಿಡಿದು ನಾಸಾದವರೆಗೆ ಮತ್ತು ಸರ್ಕಾರದ ಪ್ರತಿಯೊಂದು ವಿಭಾಗದವರೆಗಿನ ಆಡಳಿತದ ಪ್ರಮುಖ ನಾಯಕತ್ವ ಸ್ಥಾನಗಳಿಗೆ ಕನಿಷ್ಠ 55 ಭಾರತೀಯ - ಅಮೆರಿಕನ್ನರನ್ನು ನೇಮಕ ಮಾಡಿದ್ದಾರೆ.

"ಭಾರತೀಯ ಮೂಲದ ಅಮೆರಿಕನ್ನರು ದೇಶವನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ. ಸ್ವಾತಿ ಮೋಹನ್, ನನ್ನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ನನ್ನ ಭಾಷಣ ಬರಹಗಾರ ವಿನಯ್ ರೆಡ್ಡಿ ಇವರೆಲ್ಲಾ ಭಾರತೀಯ ಮೂಲದವರು " ಎಂದು ನಾಡೆ ವಿಜ್ಞಾನಿಗಳೊಂದಿಗಿನ ವಾಸ್ತವಿಕ ಸಂವಾದದಲ್ಲಿ ಬೈಡನ್ ಹೇಳಿದರು. ಮಂಗಳ ಗ್ರಹದಲ್ಲಿ ರೋವರ್​ ಯಶಸ್ವಿಯಾಗಿ ಇಳಿದುದರ ಹಿಂದೆ ಭಾರತೀಯ ಮೂಲದ ವಿಜ್ಞಾನಿ ಡಾ. ಸ್ವಾತಿ ಮೋಹನ್​ ಪ್ರಮುಖ ಪಾತ್ರ ವಹಿಸಿದ್ದರು. ಈ ಸಂಬಂಧ ಮಾತನಾಡಿದ ಬೈಡನ್​ ಹೇಳಿಕೆ ನೀಡಿದ್ದಾರೆ.

ಇದನ್ನು ಓದಿ: ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿದ್ದಾರೆ ಇಬ್ಬರು ಭಾರತೀಯ-ಅಮೆರಿಕನ್ನರು

ಭಾರತೀಯ - ಅಮೆರಿಕನ್ ವಿಜ್ಞಾನಿ ಸ್ವಾತಿ ಮೋಹನ್ ಅವರು ನಾಸಾದ ಮಾರ್ಸ್ 2020 ಕಾರ್ಯಾಚರಣೆಯ ಮಾರ್ಗದರ್ಶನ, ಸಂಚರಣೆ ಮತ್ತು ನಿಯಂತ್ರಣ ಕಾರ್ಯಾಚರಣೆಗಳನ್ನು ಮುನ್ನಡೆಸಿದ್ದಾರೆ ಎಂಬುದನ್ನು ತಮ್ಮ ಭಾಷಣದ ವೇಳೆ ಅಮೆರಿಕ ಅಧ್ಯಕ್ಷರು ನೆನಪಿಸಿಕೊಂಡರು.

ಜನವರಿ 20 ರಂದು ಅಮೆರಿಕದ 46ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಬೈಡನ್, ಕನಿಷ್ಠ 55 ಭಾರತೀಯ - ಅಮೆರಿಕನ್ನರನ್ನು ತಮ್ಮ ಆಡಳಿತದಲ್ಲಿ ಪ್ರಮುಖ ಹುದ್ದೆಗಳಿಗೆ ನೇಮಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.