ಹೂಸ್ಟನ್(ಅಮೆರಿಕ): ಎರಡು ವರ್ಷಗಳ ಕಾಲ ಗಗನಯಾತ್ರಿ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ 11 ಜನರಿಗೆ ನಾಸಾ ಪದವಿ ನೀಡಿದ್ದು, ಅದರಲ್ಲಿ ಭಾರತೀಯ ಮೂಲದ ರಾಜ ಜಾನ್ ವರ್ಪುತೂರ್ ಚಾರಿ (Raja Jon Vurputoor Chari) ಕೂಡ ಒಬ್ಬರು.
-
This week:
— NASA (@NASA) January 11, 2020 " class="align-text-top noRightClick twitterSection" data="
🎓 Graduating #NewAstronauts become eligible for spaceflights
🔭 Intriguing discoveries in our solar system – and beyond
✈️ Previewing airborne campaigns to study our home planet
Take a look at these stories and more: https://t.co/kk0w3JKHU1 pic.twitter.com/NcWtlxFnIa
">This week:
— NASA (@NASA) January 11, 2020
🎓 Graduating #NewAstronauts become eligible for spaceflights
🔭 Intriguing discoveries in our solar system – and beyond
✈️ Previewing airborne campaigns to study our home planet
Take a look at these stories and more: https://t.co/kk0w3JKHU1 pic.twitter.com/NcWtlxFnIaThis week:
— NASA (@NASA) January 11, 2020
🎓 Graduating #NewAstronauts become eligible for spaceflights
🔭 Intriguing discoveries in our solar system – and beyond
✈️ Previewing airborne campaigns to study our home planet
Take a look at these stories and more: https://t.co/kk0w3JKHU1 pic.twitter.com/NcWtlxFnIa
2017ರಲ್ಲಿ ನಾಸಾ ತನ್ನ ಮುಂದಿನ ಪ್ರೋಗ್ರಾಮ್ಗಾಗಿ ಅರ್ಜಿ ಕರೆದಿದ್ದು 18 ಸಾವಿರ ಅಭ್ಯರ್ಥಿಗಳು ನಾಸಾಗೆ ಅರ್ಜಿ ಸಲ್ಲಿಸಿದ್ದರು, ಇವರ ಪೈಕಿ ರಾಜಾ ಚಾರಿ ಕೂಡ ಒಬ್ಬರಾಗಿದ್ದಾರೆ. ಉನ್ನತ ಶಿಕ್ಷಣ ಪಡೆಯುವ ಗುರಿಯೊಂದಿಗೆ ಎಂಜಿನಿಯರಿಂಗ್ ಪದವಿಗಾಗಿ ಹೈದರಾಬಾದ್‌ನಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದರು.
41 ವರ್ಷದ ಚಾರಿ ಅವರನ್ನು 2017 ರ ಗಗನಯಾತ್ರಿ ಅಭ್ಯರ್ಥಿ ತರಗತಿಗೆ ಸೇರಲು ನಾಸಾ ಆಯ್ಕೆ ಮಾಡಿತ್ತು. ಆಗಸ್ಟ್ 2017ರಲ್ಲಿ ಕರ್ತವ್ಯಕ್ಕೆ ಸೇರಿಕೊಂಡಿದ್ದ ಅವರು ಆರಂಭಿಕ ಗಗನಯಾತ್ರಿ ಅಭ್ಯರ್ಥಿ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಈಗ ಮಿಷನ್ ನಿಯೋಜನೆಗೆ ಅರ್ಹರಾಗಿದ್ದಾರೆ.
ಅಮೆರಿಕ ವಾಯುಪಡೆಯ ಕರ್ನಲ್ ಆಗಿರುವ ಇವರು ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನಾಸಾದಿಂದ ಪದವಿ ಸ್ವೀಕರಿಸಿದ್ದಾರೆ. ಗಗನಯಾತ್ರಿ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ್ದು, ಬಾಹ್ಯಾಕಾಶ ಕೇಂದ್ರ, ಚಂದ್ರ ಮತ್ತು ಮಂಗಳ ಗ್ರಹಗಳಿಗೆ ಸಂಬಂಧಿಸಿದ ಮಹತ್ವಾಕಾಂಕ್ಷೆಯ ಕಾರ್ಯಾಚರಣೆಗಳ ಭಾಗವಾಗಲಿದ್ದಾರೆ.